ಭಾರತದ ಆರ್ಥಿಕತೆಗೆ ಸಹಕಾರ ಸಂಸ್ಥೆಗಳ ಕೊಡುಗೆ ಅಪಾರ

ಲೋಕದರ್ಶನ ವರದಿ

ಬೆಳಗಾವಿ 27: ಆಧುನಿಕ ದಿನಮಾನಗಳಲ್ಲಿ ಬೆಳೆಯುತ್ತಿರುವ ಭಾರತದ ಆರ್ಥಿಕತೆಗೆ ಸಹಕಾರ ಸಂಸ್ಥೆಯ ಕೊಡುಗೆ ಅಪಾರವಾಗಿದೆ ಎಂದು ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮ ಪ್ರಭು ಸ್ವಾಮಿಜಿ ಹೇಳಿದರು.

ಇತ್ತೀಚೆಗೆ ನಗರದ ಸರ್ದಾರ್ ಕ್ರೀಡಾಂಗಣದಲ್ಲಿ ರಾಮಕೃಷ್ಣ ಕಮಲ ಗುರುವಿವೇಕಾನಂದ ವಿವಿಧ ಉದ್ದೇಶಗಳ ಸಹಕಾರಿ ಸಂಘದ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದರು. ಗುರುವಿವೇಕಾನಂದ ಸಂಸ್ಥೆಯು ಈಗಾಗಲೇ ಕಳೆದ ಏಳು ವರ್ಷಗಳಿಂದ ಉತ್ತಮವಾದ ಕಾರ್ಯವನ್ನು ಮಾಡುತ್ತಿದೆ. ಸಮಾಜಮುಖಿಯಾಗಿ ಅನೇಕ ಕೆಲಸಗಳನ್ನು ನಿರ್ವಹಿಸುತ್ತ ಬಂದಿದೆ.  ಗ್ರಾಹಕರ ಹಿತರಕ್ಷಣೆಯನ್ನು ಸಂಸ್ಥೆ ಕಾಪಾಡಿಕೊಂಡು ಹೋಗಲಿ ಎಂದು ಶುಭ ಹಾರೈಸಿದರು.

ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಮಾತನಾಡಿ, ಸಂಸ್ಥೆಯ ಬೆಳವಣಿಗೆಯಲ್ಲಿ ಗ್ರಾಹಕರ ಪಾತ್ರ ಪ್ರಮುಖವಾದುದು. ಗ್ರಾಹಕರ ವಿಶ್ವಾಸವನ್ನು ಗಳಿಸಿಕೊಂಡ ಸಂಸ್ಥೆಯು ಸದೃಢವಾಗಿ ಬೆಳೆಯುತ್ತದೆ ಎನ್ನುವುದಕ್ಕೆ ಈ ಸಂಸ್ಥೆಯು ಉದಾಹರಣೆಯಾಗಿದೆ ಎಂದರು. ಕಳೆದ ಐದಾರು ತಿಂಗಳುಗಳ ಹಿಂದೆ ಬಂದ ನೆರೆ ಪರಿಹಾರವಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದು ಲಕ್ಷ ರೂಪಾಯಿಯನ್ನು ನೀಡಿರುವುದು ಸಮಾಜದ ಕಳಕಳಿಯನ್ನು ತೋರಿಸುತ್ತದೆ. ಸಂಸ್ಥೆ ತನ್ನ ಕಾರ್ಯವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚಿಸಲಿ ಎಂದರು.

ಸಂಸ್ಥೆಯ ಅಧ್ಯಕ್ಷ ಡಾ. ನಾರಾಯಣ ನಾಯ್ಕ ಮಾತನಾಡಿ, ಸಂಸ್ಥೆಯು ಸುಸಜ್ಜಿತವಾದ ಕಛೇರಿಯನ್ನು ಕಡಿಮೆ ಅಧಿಯಲ್ಲಿ ಹೊಂದಿರುವುದು ಹೆಮ್ಮೆಯ ಸಂಗತಿ. ಸಂಸ್ಥೆಯು ಸದಸ್ಯರ ಆಶೋತ್ತರಗಳಿಗೆ ಸ್ಪಂದಿಸುತ್ತಿದೆ. ಸದಸ್ಯರ ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಕಳೆದ ಏಳು ವರ್ಷಗಳಳಿಂದ ಪ್ರಯತ್ನಿಸುತ್ತಿದೆ ಎಂದು ಹೇಳಿದರು.

ಕಾರ್ಯದರ್ಶಿ ವಿಶಾಲ ಪಾಟೀಲ್ ನಿರೂಪಿಸಿದರು. ನಿದರ್ೇಶಕರಾದ ಅಂಜನಕುಮಾರ ಗಂಡಗುದರಿ ಸ್ವಾಗತಿಸಿದರು. ವಾಣಿ ಕುಲಕಣರ್ಿ ವಂದಿಸಿದರು. ಉಪಾಧ್ಯಕ್ಷರಾದ ಮಹಾವೀರ ಜೈನ್, ನಿರ್ದೇಶಕರಾದ ಡಾ. ವೈ.ಬಿ.ಘಸಾರಿ. ಆನಂದ ರಾವ್, ಜಗದೀಶ್ ಹೆಗಡೆ, ರಾಜೇಶ್ ಗೌಡ, ಭಾರತಿ ಶೆಟ್ಟಿಗಾರ, ಸತೀಶ ಮನ್ನಿಕೇರಿ, ವಿದ್ಯಾರಾಣಿ ಶೆಟ್ಟಿ, ಅಕ್ಷತಾ ಮರಕಲ್ ಹಾಗೂ ಸಿಬಂದಿವರ್ಗ ಉಪಸ್ಥಿತರಿದ್ದರು.