ಲೋಕದರ್ಶನ ವರದಿ
ಬೆಳಗಾವಿ,16: ಮಾನಸಿಕ ಆರೋಗ್ಯ ಮತ್ತು ದೈಹಿಕ ಆರೋಗ್ಯ ಎಂಬ ಪರಿಕಲ್ಪಣೆಯು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಅವೆರಡೂ ಪರಸ್ಪರ ಪೂರಕ ಹಾಗೂ ಅವಲಂಬಿತವಾಗಿದ್ದು ಒಂದಕ್ಕಾದ ಹಾನಿಯು ಇನ್ನೊಂದರ ಮೇಲೆ ಪ್ರಭಾವ ಬೀರುತ್ತದೆ ಆದ್ದರಿಂದ ಇವೆರಡರ ಬಗಗೆ ಅಗತ್ಯ ಕಾಳಜಿ ವಹಿಸಿ ಎಂದು ಯು ಎಸ್ ಎಮ್ ಕೆ ಎಲ್ ಇ ನಿದರ್ೇಶಕರಾದ ಡಾ. ಹೆಚ್ ಬಿ ರಾಜಶೇಖರ ಅವರು ಮಾತನಾಡುತ್ತಿದ್ದರು. ಅವರು ಯಳ್ಳೂರ ರಸ್ತೆಯಲ್ಲಿಯ ಕೆ.ಎಲ್.ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ಮಾನಸಿಕ ರೋಗ ಚಿಕಿತ್ಸಾ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಾಚೀನ ಕಾಲದಲ್ಲಿದ್ದ ಮಾನಸಿಕ ರೋಗ ಚಿಕಿತ್ಸಾ ವಿಧಾನಗಳು ಇಂದು ಬಹಳಷ್ಟು ಪ್ರಮಾಣದಲ್ಲಿ ಮಾಪರ್ಾಡಾಗಿದ್ದು ಎಲ್ಲ ವೈದ್ಯರುಗಳು ಅವುಗಳನ್ನು ತಿಳಿಯಬೇಕು ಎಂದು ಕಿವಿ ಮಾತು ಹೇಳಿದರು.
ಮಾನಸಿಕ ಆರೋಗ್ಯವು ಪ್ರತಿ ವ್ಯಕ್ತಿಯ ಜೀವನದಲ್ಲಿ ಪ್ರಮುಖ ಪಾತ್ರವಹಿಸುವುದು. ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವು ಮುಖ್ಯವಾದುದರಿಂದ ವೈದ್ಯರುಗಳು ತಮ್ಮಲ್ಲಿ ಬಂದಂತಹ ರೋಗಿಗಳಲ್ಲಿ ಮಾನಸಿಕ ಸಮಸ್ಯೆ ಕಂಡುಬಂದಲ್ಲಿ ಅವರಿಗಾಗಿ ಸ್ವಲ್ಪ ಸಮಯ ನೀಡಿ ಅವರೊಂದಿಗೆ ಮಾತನಾಡಿ ಅವರ ಸಮಸ್ಯೆಗಳನ್ನು ಕಂಡುಕೊಂಡು ಅವರಿಗೆ ಚಿಕಿತ್ಸೆ ನೀಡಬೇಕು ಅಥವಾ ಹತ್ತಿರದ ಮಾನಸಿಕ ರೋಗ ಚೀಕಿತ್ಸಾ ವಿಭಾಗಕ್ಕೆ ಕಳುಹಿಸಬೇಕೆಂದು ತಿಳಿಸಿದರು ಹಾಗೂ ಸಕ್ಕರೆ ಖಾಯಿಲೆ ಮತ್ತು ರಕ್ತದೊತ್ತಡದಂತಹ ರೋಗಗಳಂತೆಯೇ ಮಾನಸಿಕ ರೋಗಳನ್ನು ಸಹ ಕಾಣಬೇಕೆಂದು ವೈದ್ಯರುಗಳಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಮಾನಸಿಕ ರೋಗಗಳ ಬಗೆಗೆ ವೈದ್ಯರುಗಳಿಗೆ ಮಾಹಿತಿ ನೀಡಿ ಅಂತಹ ರೋಗಿಗಳೊಂದಿಗೆ ಹೇಗೆ ಚೀಕಿತ್ಸಾ ಕ್ರಮಗಳನ್ನು ಕೈಗೋಳ್ಳಬೇಕೆಂದು ಕಾರ್ಯಕ್ರಮದ ಮುಖ್ಯ ಉಪನ್ಯಾಸಕರಾಗಿ ಆಗಮಿಸಿದ ಹಿರಿಯ ಮನೋವೈದ್ಯ ಡಾ. ಜಿ. ಎಸ್. ಭೊಗಲೆ ಅವರು ನೀರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ ಕೆ. ಎಲ್. ಇ. ಶತಮಾನೋತ್ಸವ ಚಾರಿಟೇಬಲ್ ಆಸ್ಪತ್ರೆಯ ವೈದ್ಯಕೀಯ ಸೇವೆಗಳ ನಿದರ್ೇಶಕರಾದ ಡಾ. ಎಸ್ ಸಿ ಧಾರವಾಡ ಅವರು ಮಾತನಾಡುತ್ತಾ ವಿಶ್ವ ಆರೋಗ್ಯ ಸಂಸ್ಥೆಯು ಮನೋವೈದ್ಯಶಾಸ್ತ್ರಕ್ಕೆ ಹಾಗೂ ಮಾನವನ ಮಾನಸಿಕ ಆರೋಗ್ಯಕ್ಕೆ ಪ್ರಮುಖ ಸ್ಥಾನವನ್ನು ನಿಡಿದ್ದು ಅದರಲ್ಲೂ ಯುವ ಜನಾಂಗದ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿರುವುದರ ಬಗ್ಗೆ ಹೇಳಿದರು ಮತ್ತು ಮಾನಸಿಕ ರೋಗದ ಗುಣಲಕ್ಷಣಗಳನ್ನು ವೈದ್ಯರುಗಳು ಅಥರ್ೈಸಿಕೊಂಡು ಗುಳಿಗೆ- ಔಷಧಿಗಳ ಜೊತೆಗೆ ಯೋಗ ಮತ್ತು ಧ್ಯಾನದ ಪ್ರಾಮುಖ್ಯತೆಯನ್ನು ರೋಗಿಗಳಿಗೆ ತಿಳುವಳಿಕೆ ನೀಡಿ ಚಿಕಿತ್ಸೆ ಕೊಡಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮೆಡಿಸಿನ ವಿಭಾಗದ ಹಿರಿಯ ವೈದ್ಯರಾದ ಡಾ. ಬಿ. ಎಸ್. ಮಹಾಂತಶೆಟ್ಟಿ, ಮಾನಸಿಕ ರೋಗ ವಿಭಾಗದ ಮುಖ್ಯಸ್ಥೆ ಡಾ. ಸುಚೆತಾ ವಾಘಮಾರೆ, ಮನೋವೈದ್ಯರಾದ ಡಾ. ಅಂಟೋನಿಯೊ ಕರ್ವಾಲೊ, ಡಾ. ನಿತೀನ ಪಟ್ಟಣಶೆಟ್ಟಿ, ಡಾ.ಕೌಸ್ಥುಭ, ಖಾಸಗಿ ವೈದ್ಯರುಗಳು, ಆಸ್ಪತ್ರೆಯ ವೈದ್ಯರು ಹಾಗೂ ಆಸ್ಪತ್ರೆಯ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾರ್ಯಕ್ರಮವನ್ನು ವೀಣಾ ನೀರೂಪಿಸಿದರು, ಮಾನಸಿಕ ರೋಗ ವಿಭಾಗದ ಮುಖ್ಯಸ್ಥೆ ಡಾ. ಸುಚೆತಾ ವಾಘಮಾರೆ ಅವರು ಸ್ವಾಗತಿಸಿದರು ಹಾಗೂ ಮನೋವೈದ್ಯರಾದ ಡಾ. ಅಂಟೋನಿಯೊ ಕರ್ವಾಲೊ ವಂದಿಸಿದರು.