ಲೋಕದರ್ಶನ ವರದಿ
ಬೆಳಗಾವಿ, 13: "ಇನ್ನೊಬ್ಬರ ಸೇವೆಯಲ್ಲಿತಮ್ಮನ್ನೂತಾವು ಮರೆಯುವುದು ಎಂಬ ವಿವೇಕ ವಾಣಿಯನ್ನುಜೀವನದಲ್ಲಿ ಅವಳಡಿಸಿಕೊಂಡು ಸಂತೃಪ್ತಿ ಹೊಂದಬೇಕು. ಸಮಾಜದಲ್ಲಿರುವದೀನರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ವಿವೇಕಾದರ್ಶ ಪಾಲಿಸಬೇಕು. ಎನ್.ಎಸ್.ಎಸ್.ದ ದ್ಯೇಯ'" ನನಗಾಗಿ ಅಲ್ಲ, ನಿಮಗಾಗಿ"ಎಂಬುದರ ತಾತ್ಪರ್ಯನ್ನು ಸ್ವಯಂಸೇವಕರು ತಿಳಿದುಕೊಳ್ಳಬೇಕು. ಸಮಾಜಕ್ಕೆ ಸೇವಕರ ಅಗತ್ಯವಿದೆ. ಇಂದು ಸಮಾಜದ ಅಗತ್ಯವನ್ನು ಎನ್.ಎಸ್.ಎಸ್. ತುಂಬಾ ಜವಾಬ್ದಾರಿಯಿಂದ ಹಾಗೂ ಕಾಳಿಜಿಪೂರ್ವಕವಾಗಿ ನಿಭಾಯಿಸುತ್ತ ಹೆಮ್ಮರವಾಗಿ ಬೆಳೆಯುತ್ತಿದೆ. ನಿಸ್ವಾರ್ಥ ಜೀವನದ ಮುನ್ನಡಿಯನ್ನು ವಿದ್ಯಾಥರ್ಿಗಳು ಇಲ್ಲಿ ಅನುಭವಿಸುತ್ತಿದ್ದಾರೆ. ಸ್ವ-ಆಸಕ್ತಿಯಿಂದ ಬಂದಿರುವ ಪ್ರತೀ ಸ್ವಯಂಸೇವಕರು ಸಮಾಜದ ಸೇವೆಗೆ ನಿಂತಿರುವ ವೀರ ಸೈನಿಕನಂತೆ"ಎಂದುರಾಜ್ಯ ಅನುಷ್ಠಾನಾಧಿಕಾರಿಡಾ. ಪೂಣರ್ಿಮಾ ಜೋಗಿ ಅಭಿಪ್ರಾಯಪಟ್ಟರು. ಅವರು ರಾಣಿಚನ್ನಮ್ಮ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಕೋಶ, ಹಮ್ಮಿಕೊಂಡಿರುವ ರಾಷ್ಟ್ರೀಯ ಭಾವೈಕ್ಯತಾ ಶಿಬಿರದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದ್ದರು. ರಾಜ್ಯ ಸರಕಾರದಎನ್.ಎಸ್.ಎಸ್. ಕೋಶದ ಕಾರ್ಯಗಳನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆತರುತ್ತಿರುವುದು ಶ್ಲಾಘನೀಯಾಗಿದೆಎಂದರು.
ಅಧ್ಯಕ್ಷತೆ ವಹಿಸಿದ್ದ ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿಗಳಾದ ಶಂಕರಾನಂದ ಬನಶಂಕರಿಯವರು ಮಾತನಾಡುತ್ತ ರಾಜ್ಯದಲ್ಲಿಯೇ ದೊಡ್ಡದಾದ ರಾಣಿಚನ್ನಮ್ಮ ವಿಶ್ವವಿದ್ಯಾಲಯದಲ್ಲಿನ ಎನ್.ಎಸ್.ಎಸ್. ಕೋಶದಡಿಯಲ್ಲಿ ಮೂರು ಜಿಲ್ಲೆಗಳಾದ ಬೆಳಗಾವಿ, ವಿಜಯಪೂರ ಮತ್ತು ಬಾಗಲಕೋಟಯ25 ಸಾವಿರದ ಸ್ವಯಂಸೇವಕರನ್ನು ಹೊಂದಿದ್ದು. ರಾಷ್ಟ್ರೀಯ ಭಾವೈಕ್ಯತಾ ಶಿಬಿರವನ್ನು ಯಶಸ್ವಿಯಾಗಿ 3 ನೇ ಬಾರಿ ಹಮ್ಮಿಕೊಂಡಿರುವುದುಪ್ರಂಶನಿಯಾಗಿದೆ. 21 ವಿಶ್ವವಿದ್ಯಾಲಯದ ಸ್ವಯಂಸೇವಕರು ಏಳುದಿನಗಳವರೆಗೆ ಹಲವಾರುಜೌಚಿತ್ಯ ಪೂರ್ಣ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ನಾಯಕತ್ವದ ಗುಣಗಳನ್ನು ಕೂಡಿಸಿಕೊಡದ್ದು ಸಂತಸದಸಂಗತಿಎಂದರು. ಯವಕರಿಗೆ ಸನ್ಮಾರ್ಗತೋರುವುದೇಎನ್.ಎಸ್.ಎಸ್ ನ ಮೂಖ್ಯಗುರಿಯಾಗಿದ್ದು, ಅದನ್ನರಾಷ್ಟ್ರೀಯ ಭಾವೈಕ್ಯತಾ ಶಿಬಿರ ಸಾಧಿಸಿದೆಎಂದರು. ಹಲವಾರು ಸ್ವಧರ್ೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಪ್ರಶಸ್ತಿಗಳನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಹಿಂಡಾಲ್ಕೋಕಂಪನಿಯ ಮುಖ್ಯಸ್ಥರಕುಮಾರವೆಲ್ ಸಂಯೋನಾಧಿಕಾರಿ ಪ್ರೊ. ಎಸ್. ಓ. ಹಲಸಗಿ, ಡಾ. ನಂದಿನಿ ದೇವರಮನಿ, ನೋಡಲ್ ಅಧಿಕಾರಿಗಳಾದ ಡಾ.ಎಚ್.ಎಮ್.ಸಜ್ಜಾದೆ, ಡಾ.ಎ.ವ್ಹಿ.ಸೂರ್ಯವಂಶಿ, ಎಚ್. ಆರ್. ಮ್ಯಾನೇಜರರವಿ ಬಿಸಗೂಪ್ಪಿ ಹಾಗೂ ಎನ್.ಎಸ್.ಎಸ್. ಅಧಿಕಾರಿಗಳು, ಸ್ವಯಂಸೇವಕರು ಭಾಗವಹಿಸಿದರು.
ಪೂಜಾ ಮತ್ತು ನಾಗಶ್ರೀ ಪ್ರಾಥರ್ಿಸಿದರು,ಪ್ರಮೋದ ಮತ್ತು ಸುಪ್ರೀತಾಎನ್.ಎಸ್.ಎಸ್. ಗೀತೆ ಹಾಡಿದರು, ಅನಿಕೇತ ಮತ್ತು ರೂತುಜಾ ನಿರೂಪಿಸಿದರು, ಡಾ. ಶೋಭಾ ಕೋಕಟನೂರರವರು ವಂದಿಸಿದರು.