ಗದಗ 27: ನಾಡು ಹಾಗೂ ಧರ್ಮವನ್ನು ಕಟ್ಟಿದ ಮಹನಿಯರನ್ನು ಸ್ಮರಿಸುವುದು ಉತ್ತಮ ನಾಗರಿಕತೆಯ ಲಕ್ಷಣ ಎಂದು ಜಿಲ್ಲಾ ಪಂಚಾಯತ ಅಧ್ಯಕ್ಷ ಎಸ್.ಪಿ.ಬಳಿಗಾರ ನುಡಿದರು.
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರದಲ್ಲಿ ಗದಗ ಜಿಲ್ಲಾಡಳಿತ ಭವನದ ಮುಖ್ಯ ಸಭಾಂಣದಲ್ಲಿಂದು ಜರುಗಿದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಾಡು ಕಟ್ಟಿದ ಮಹನೀಯರ ವಿಚಾರ, ದಾರಿದೀಪಗಳ ಕುರಿತು ಇಂದಿನ ವಿಧ್ಯಾಥರ್ಿಗಳು ಅರಿತು ಕೊಳ್ಳುವ ಬಹಳಷ್ಟು ವಿಚಾರಗಳಿವೆ. ಕೆಂಪೆಗೌಡರ ದೂರದೃಷ್ಟಿಯಿಂದ ಇಂದಿನ ಬೆಂಗಳೂರು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಚಲಿತದಲ್ಲಿರುವದು ನಮ್ಮೆಲ್ಲರಿಗೆ ಹೆಮ್ಮೆಯ ವಿಷಯವಾಗಿದೆ. ಇಂದಿನ ಯುವ ಸಮುದಾಯವು ಕೆಂಪೆಗೌಡರ ದೂರದೃಷ್ಟಿ ಅನುಸರಿಸುವದರ ಮೂಲಕ ನಾಡಿನ ಸಂಸ್ಕೃತಿಯನ್ನು ಎತ್ತಿಹಿಡಿಯಲು ಮುಂದಾಗಬೇಕೆಂದು ಬಳಿಗಾರ ಕರೇ ನೀಡಿದರು.
ಪ್ರಾಧ್ಯಾಪಕರಾದ ರಾಜಶೇಖರ ದಾನರೆಡ್ಡಿ ನಾಡಪ್ರಭು ಕೆಂಪೆಗೌಡರ ಜೀವನ ಸಾಧನೆ ಕುರಿತು ಉಪನ್ಯಾಸ ನೀಡಿದರು. ಕೆಂಪೇಗೌಡರ ಪರಿಸರ ಪ್ರೇಮವೇ ಇವತ್ತಿನ ಬೆಂಗಳೂರಿಗೆ ಉದ್ಯಾನ ನಗರಿ ಎಂಬ ಬಿರುದಿಗೆ ಮುಖ್ಯ ಕಾರಣವಾಗಿದೆ. ತಮ್ಮ ಆಡಳಿತದಲ್ಲಿ ಸಾಮಾಜಿಕ, ಆಥರ್ಿಕ, ವಿಚಾರ ಧಾರೆಗಳನ್ನು ಅಳವಡಿಕೊಂಡು ಆಳ್ವಿಕೆ ಮಾಡಬೇಕು ಎಂಬುದು ಅವರ ಮಹತ್ತರ ಆಶಯವಾಗಿತ್ತು. ಕೃಷಿ, ಕೆರೆ, ರಸ್ತೆ ಹಾಗೂ ದೇವಾಲಯಗಳು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದರ ಫಲವಾಗಿ ಇವತ್ತಿನ ಬೆಂಗಳೂರು ಜಾಗತಿಕ ಮಟ್ಟದಲ್ಲಿ ತನ್ನದೇ ಛಾಪು ಮೂಡಿಸಿರುವದರಲ್ಲಿ ನಾಡಪ್ರಭು ಕೆಂಪೆಗೌಡರ ಕೊಡುಗೆ ಪ್ರಮುಖವಾಗಿದೆ. ಇಂದಿನ ಯುವಜನತೆ ಕೆಂಪೆಗೌಡರ ವಿಚಾರಧಾರೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಾಡಿನ ಅಭಿವೃದ್ಧಿಗಾಗಿ ಶ್ರಮಿಸಲು ಕರೇ ನೀಡಿದರು.
ಜಿ.ಪಂ ಉಪಾದ್ಯಕ್ಷೆ ಶಕುಂತಲಾ ಮೂಲಿಮನಿ, ಗದಗ ತಾ.ಪಂ ಅಧ್ಯಕ್ಷ ಮೋಹನ ದುರ್ಗಣ್ಣವರ, ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವರ್ಾಹಣಾಧಿಕಾರಿ ಮಂಜುನಾಥ ಚವ್ಹಾಣ, ಜಿ.ಪಂ ಉಪಕಾರ್ಯದಶರ್ಿ ಪ್ರಾಣೇಶರಾವ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂಧಿಗಳು ಹಾಗೂ ಶಾಲಾ ವಿಧ್ಯಾಥರ್ಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದರ್ೇಶಕರ ಅಜರ್ುನ ಗೋಳಸಂಗಿ ಸ್ವಾಗತಿಸಿ ವಂದಿಸಿದರು.