ಲೋಕದರ್ಶನ ವರದಿ
ಮುಂಡಗೋಡ,27 : ಅರಣ್ಯ ಇಲಾಖೆ ಚಿರತೆಯನ್ನು ಹಿಡಿಯಲು ಸವಾಲೆಂಬಂತೆ ಸ್ವೀಕರಿಸಿ ಚಿರತೆಯನ್ನು ಹಿಡಿಯಲು ಬೋನ್ ನ್ನು ಇಟ್ಟು ಕಾರ್ಯಮಗ್ನರಾಗಿದ್ದಾರೆ
ತಾಲೂಕಿನ ಅತ್ತಿವೇರಿ ಗ್ರಾಮದ ಗೌಳಿ ದಡ್ಡಿ ಸೇರಿದಂತೆ ತಾಲೂಕಿನ ವಿವಿಧಡೆಯಲ್ಲಿ ಸಾರ್ವಜನಿಕರು ಚಿರತೆ ಸಂಚರಿಸುತ್ತಿದೆ ಎಂದು ಹೇಳುತ್ತಿದ್ದರು ಇಲಾಖೆ ಮಾತ್ರ ಚಿರತೆ ತಿಂದ ಬಿಟ್ಟ ಪ್ರಾಣಿಗಳ ಅವಷೇಶಗಳೇನು ಕಂಡಿಲ್ಲಾ ಎಂದು ಹೇಳುತ್ತಿದ್ದಾರೆ
ಇತ್ತಿಚಿನ ಕೆಲವು ತಿಂಗಳುಗಳಿಂದ ತಾಲೂಕಿನ ಅತ್ತಿವೇರಿ ಗ್ರಾಮದ ಗೌಳಿ ದಡ್ಡಿ ಅರಣ್ಯ ಪ್ರದೇಶದಲ್ಲಿ ಮತ್ತು ರಾಷ್ಟ್ರೀಯ ಹೆದ್ದಾರಿ ರಸ್ತೆಯ ಪಕ್ಕದಲ್ಲಿ ಇತ್ತೀಚೆಗೆ ಕೆಲವು ದಿನಗಳಿಂದ ಚಿರತೆ ಇದೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆಯಿಂದ ತೀವ್ರ ಶೋಧ ಕಾಯರ್ಾಚರಣೆ ನಡೆದಿದೆ.
ಕೆಲವು ದಿನಗಳಿಂದ ಹುಬ್ಬಳ್ಳಿ ರಸ್ತೆಯಲ್ಲಿರುವ ಅತ್ತಿವೇರಿ ಅರಣ್ಯ ಪ್ರದೇಶದಲ್ಲಿ ಮತ್ತು ರಸ್ತೆಯ ಪಕ್ಕದಲ್ಲಿ ಚಿರತೆ ಕಾಣಿಸಿಕೊಂಡು ವಾಹನ ಚಾಲಕರಿಗೆ ಮತ್ತು ಗೌಳಿ ಜನಾಂಗದ ದನಗಾಯಿಗಳಲ್ಲಿ ಭಯ ಆವರಿಸಿದೆ. ಇದರಿಂದ ಎಚ್ಚೆತ್ತುಕೊಂಡು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಗುರುವಾರ ಅತ್ತಿವೇರಿ ಭಾಗದ ಅರಣ್ಯ ಅಂಚಿನಲ್ಲಿ ಚಿರತೆಯನ್ನು ಹಿಡಿಯಲು ಬೋನ್(ಪಂಜರ)ವನ್ನಿಟ್ಟು ತಂಡವನ್ನು ರಚನೆ ಮಾಡಿಕೊಂಡು ಸಿಡಿಮದ್ದು ಸಿಡಿಸುವ ಮೂಲಕ ಗಸ್ತು ತಿರುಗುತ್ತಿದ್ದಾರೆ. ಬಹುತೇಕ ಸಿಬ್ಬಂದಿಗಳಿಗೆ ಚಿರತೆಯನ್ನು ಪತ್ತೆ ಹಚ್ಚುವುದೇ ಒಂದು ಕೆಲಸವಾಗಿದೆ.
ಪದೇ ಪದೇ ರಸ್ತೆಯ ಪಕ್ಕದಲ್ಲಿ ವಾಹನ ಚಾಲಕರಿಗೆ ಮತ್ತು ಬೈಕ್ ಸವಾರರಿಗೆ ಹಾಗೂ ಅತ್ತಿವೇರಿ ಸುತ್ತ ಮುತ್ತ ಗ್ರಾಮದ ಜಮೀನಿನಲ್ಲಿ ಚಿರತೆ ಸಾರ್ವಜನಿಕರ ಕಣ್ಣಿಗೆ ಬೀಳುತ್ತಿದ್ದು ಜನರಲ್ಲಿ ಆತಂಕ ಪಡುವಂತವಾಗಿದೆ. ಆದರೆ ಚಿರತೆಯಿಂದ ಯಾವುದೇ ಅನಾಹುತವಾದ ಬಗ್ಗೆ ವರದಿಯಾಗಿಲ್ಲಾ. ಒಟ್ಟಿನಲ್ಲಿ ಚಿರತೆಯನ್ನು ಹಿಡಿಯುವುದು ಅರಣ್ಯ ಇಲಾಖೆಯವರಿಗೆ ಒಂದು ಸವಾಲಾಗಿದೆ.
ಮುಂಡಗೋಡ ವಲಯ ಅರಣ್ಯಧಿಕಾರಿ ಸುರೇಶ ಕುಳ್ಳೊಳ್ಳಿ ಮಾತನಾಡಿ, ಕೆಲವು ದಿನಗಳಿಂದ ಒಂದು ಚಿರತೆ ಕಾಣಿಸಿಕೊಳ್ಳುತ್ತಿದೆ ಆದರೆ ಅದು ಸಾರ್ವಜನಿಕರ ಕಣ್ಣಿಗೆ ಮಾತ್ರ ಬೀಳುತ್ತಿದೆ ಅದನ್ನು ಹಿಡಿಯಲು ಇಲಾಖೆಯಿಂದ ವಿಶೇಷ ತಂಡವನ್ನು ರಚಿಸಿಕೊಂಡು ವಾಹನ ಸಮೇತ ಚಿರತೆ ಕಾಣಿಸಿಕೊಂಡ ಭಾಗದ ಅರಣ್ಯ ಪ್ರದೇಶದ ಸುತ್ತ ಮುತ್ತ ಶೋಧ ಕಾರ್ಯ ನಡೆಸಲಾಗುತ್ತಿದೆ. ನಮ್ಮ ಸಿಬ್ಬಂದಿಗಳನ್ನು ಆ ಸ್ಥಳಕ್ಕೆ ಕಳಿಸಲಾಗಿದ್ದು ಚಿರತೆಯನ್ನು ಹಿಡಿಯಲು ಬೋನನ್ನು ಇಡಲಾಗಿದೆ. ಹುಬ್ಬಳ್ಳಿ ರಸ್ತೆಯಲ್ಲಿರುವ ಅತ್ತಿವೇರಿ ಗೇಟ್ ಬಳಿ ಚಿರತೆ ಕಂಡ ಭಾಗದಲ್ಲಿ 4ಸಿ.ಸಿ.ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಆದರೆ ಈ ಸಿ.ಸಿ.ಕ್ಯಾಮರಾಗಳಲ್ಲಿ ಈವರೆಗೆ ಚಿರತೆಯ ಚಲನ ವಲನಗಳ ದೃಶ್ಯ ಕಂಡು ಬಂದಿಲ್ಲ ಹಾಗೂ ಸಿಬ್ಬಂದಿಗೂ ಚಿರತೆಯ ಕುರುಹು ಕಂಡು ಬಂದಿಲ್ಲ. ಅದಲ್ಲದೇ ಚಿರತೆಯಿಂದ ಸಾರ್ವಜನಿಕರಿಗಾಗಲೀ ಅಥವಾ ಪ್ರಾಣಿಗಳಿಗಾಗಲೀ ಯಾವ ಹಾನಿಯೂ ಆದ ಬಗ್ಗೆ ನಮ್ಮ ಗಮನಕ್ಕೆ ಬಂದಿಲ್ಲ. ಆದರೂ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಜಾಗೃತವಾಗಿರಲು ಡಂಗುರ ಕೂಡ ಸಾರಿಸಲಾಗಿದ್ದು, ಮತ್ತು ಕರಪತ್ರಗಳನ್ನು ಆ ಭಾಗದ ಜನರಿಗೆ ಹಂಚಲಾಗುವದು. ಚಿರತೆ ಪತ್ತೆಯಾಗುವವರೆಗೂ ಕಾರ್ಯಚರಣೆ ಮುಂದುವರೆಯಲಿದೆ ಎಂದರು