ಲೋಕದರ್ಶನ ವರದಿ
ಮುದ್ದೇಬಿಹಾಳ, 8: ತಾಲೂಕು ಆಡಳಿತ ಹಾಗೂ ಬಿಜೆಪಿ ಎಸ್ಸಿ ಮೋಚರ್ಾ ವತಿಯಿಂದ ಪಟ್ಟಣದಲ್ಲಿರುವ ಅಂಬೇಡ್ಕರ್ ವೃತ್ತದಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಮೂತರ್ಿಗೆ ಹೂಮಾಲೆ ಅಪರ್ಿಸುವ ಮೂಲಕ ಡಾ.ಅಂಬೇಡ್ಕರ್ ಅವರ 63ನೇ ಮಹಾಪರಿನಿವರ್ಾಣ ದಿನವನ್ನು ಸರಳವಾಗಿ ಆಚರಿಸಲಾಯಿತು.ತಾಲೂಕು ಆಡಳಿತದ ಪರವಾಗಿ ತಹಸೀಲ್ದಾರ್ ಎಂಎಎಸ್ ಬಾಗವಾನ ಹೂಮಾಲೆ ಅಪರ್ಿಸಿದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿದರ್ೇಶಕ ಎನ್.ಆರ್.ಉಂಡಿಗೇರಿ, ಸಿಪಿಐ ರವಿಕುಮಾರ ಕಪ್ಪತ್ತನ್ನವರ್, ತಾಪಂ ಪ್ರಭಾರ ಇಓ ಪಿ.ಕೆ.ದೇಸಾಯಿ, ಪಶು ಸಂಗೋಪನಾ ಇಲಾಖೆಯ ಸಹಾಯಕ ನಿದರ್ೇಶಕ ಡಾ.ಎಸ್.ಸಿ.ಚೌಧರಿ, ರೇಷ್ಮೆ ಅಧಿಕಾರಿ ಸಿ.ಆರ್.ಪೊಲೀಸ್ಪಾಟೀಲ, ಎಪಿಎಂಸಿ ನಿದರ್ೇಶಕ ವೈ.ಎಚ್.ವಿಜಯಕರ್, ವಿಜಯಪುರ ಡಿಸಿಸಿ ಬ್ಯಾಂಕ್ ನಿದರ್ೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ, ದಲಿತ ಮುಖಂಡರಾದ ಹರೀಶ ನಾಟಿಕಾರ, ಸಿ.ಜಿ.ವಿಜಯಕರ್, ಡಿ.ಬಿ.ಮುದೂರ, ಶರಣಬಸ್ಸು ಚಲವಾದಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಈ ವೇಳೆ ದಲಿತ ಮುಖಂಡರು ಅಂಬೇಡ್ಕರ್ ಕುರಿತ ಜಯಘೋಷ ಮಾಡಿದರು.
ಬಿಜೆಪಿ ಎಸ್ಸಿ ಮೋಚರ್ಾದಿಂದ:
ಬಿಜೆಪಿ ಎಸ್ಸಿ ಮೋಚರ್ಾದಿಂದಲೂ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಹೂಮಾಲೆ ಹಾಕುವ ಮೂಲಕ ಮಹಾ ಪರಿನಿವರ್ಾಣ ದಿನ ಆಚರಿಸಲಾಯಿತು. ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಬಿಜೆಪಿ ಧುರೀಣರೊಂದಿಗೆ ಅಂಬೇಡ್ಕರ್ ವೃತ್ತಕ್ಕೆ ಆಗಮಿಸಿ ಡಾ.ಅಂಬೇಡ್ಕರ್ ಪುತ್ಥಳಿಗೆ ಹೂಮಾಲೆ ಅಪರ್ಿಸಿ ಗೌರವ ಸಲ್ಲಿಸಿದರು. ಎಸ್ಸಿ ಮೋಚರ್ಾ ಅಧ್ಯಕ್ಷ ಮಂಜುನಾಥ ಚಲವಾದಿ, ರಾಜೂಗೌಡ ರಾಯಗೊಂಡ, ಶಶಿಕುಮಾರ ಹಂಗರಗಿ, ಅನಿಲ್ ಅಜಮನಿ, ಶೇಖರ್ ಆಲೂರ, ಭಾರತ ಸಕರ್ಾರದ ನೋಟರಿ ಎಸ್.ಎಚ್.ಲೊಟಗೇರಿ, ಭೋವಿ ವಡ್ಡರ ಸಮಾಜದ ಯುವ ಧುರೀಣ ಪರಶುರಾಮ ನಾಲತವಾಡ ಮತ್ತಿತರರು ಇದ್ದರು.