ನವದೆಹಲಿ, ಫೆ 1-ಸಂಸತ್ತಿನಲ್ಲಿ ಶನಿವಾರ ಮಂಡನೆಯಾದ 2020ನೇ ಸಾಲಿನ ವಿತ್ತೀಯ ಬಜೆಟ್ ನ ಪ್ರಸ್ತಾವನೆಗಳು ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತದ ಭರವಸೆಯನ್ನು ಈಡೇರಿಸಿ ಭಾರತದ ಸಾಮಾನ್ಯ ಜನರನ್ನು ಸಬಲಗೊಳಿಸುತ್ತದೆ ಎಂದರು.
ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ ಮೋದಿ, ಈ ಬಜೆಟ್ ಸರ್ಕಾರದ ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತದ ಪರಿಕಲ್ಪನೆಗೆ ಪೂರಕವಾಗಿದೆ ಎಂದರು.
ಈ ಬಜೆಟ್ ನಲ್ಲಿ ಉದ್ಯೋಗ ಸೃಷ್ಟಿಸುವ ಕ್ಷೇತ್ರಗಳಾದ ಕೃಷಿ, ಮೂಲಭೂತ ಸೌಕರ್ಯ, ಜವಳಿ ಮತ್ತು ತಂತ್ರಜ್ಞಾನ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.
ಆರ್ಥಿಕತೆಯ ಪ್ರತಿ ವಲಯಗಳಿಗೆ ಬಜೆಟ್ ನಲ್ಲಿ ಆದ್ಯತೆ ನೀಡಲಾಗಿದೆ. ಹೊಸ ತೆರಿಗೆಯ ಸುಧಾರಣೆ ಕ್ರಾಂತಿಕಾರಿಯಾಗಿದೆ ಎಂದರು.
ತೆರಿಗೆಯ ಹಕ್ಕುಪತ್ರ ತೆರಿಗೆ ಪಾವತಿಸುವವರ ಹಕ್ಕುಗಳನ್ನು ರಕ್ಷಿಸುತ್ತದೆ. ಇದರಲ್ಲಿ ತೆರಿಗೆದಾರರ ಹಕ್ಕುಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ದೇಶದ ಕೆಲವು ದೇಶಗಳು ಮಾತ್ರ ತೆರಿಗೆ ಪಾತಿದಾರರ ಹಕ್ಕುಪತ್ರ ಹೊಂದಿವೆ ಎಂದರು.
ಅತ್ಯುತ್ತಮ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್ ಮತ್ತು ತಂಡದ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.