ಬೌಲರ್ ಗಳು ಉತ್ತಮ ಪ್ರದರ್ಶನ ನೀಡಿದ್ದಾರೆ: ವಿರಾಟ್

ನವದೆಹಲಿ, ಜ.27  ನ್ಯೂಜಿಲೆಂಡ್ ವಿರುದ್ಧ ಎರಡನೇ ಟಿ-20 ಪಂದ್ಯದ ಗೆಲುವಿನಲ್ಲಿ ಬೌಲರ್ ಗಳ ಪಾತ್ರ ದೊಡ್ಡದು ಎಂದು ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ. ಮೊದಲ ಪಂದ್ಯದಲ್ಲಿ ಸವಾಲಿನ ಮೊತ್ತ ಬೆನ್ನಟ್ಟಿದ್ದ ಟೀಮ್ ಇಂಡಿಯಾ, ಎರಡನೇ ಪಂದ್ಯದಲ್ಲಿ ಸಾಧಾರಣ ಗುರಿಯನ್ನು ಮೂರು ವಿಕೆಟ್ ಕಳೆದುಕೊಂಡು ಮುಟ್ಟಿ ಬೀಗಿತು. ಅಲ್ಲದೆ ಐದು ಪಂದ್ಯಗಳ ಸರಣಿಯಲ್ಲಿ ಪ್ರವಾಸಿ ತಂಡ 2-0 ಮುನ್ನಡೆ ಸಾಧಿಸಿದೆ.  “ನಮ್ಮ ತಂಡದ ಬೌಲರ್ ಗಳು ಎದುರಾಳಿ ಬ್ಯಾಟ್ಸ್ ಮನ್ ರನ್ನು ಕಟ್ಟಿ ಹಾಕುವಲ್ಲಿ ಸಫಲರಾಗಿದ್ದಾರೆ. ಅಲ್ಲದೆ ಮೊದಲ ಪಂದ್ಯದಲ್ಲಿ ಮಾಡಿದ ತಪ್ಪನ್ನು ಮೆಟ್ಟಿ ನಿಂತಿದ್ದಾರೆ. ಕಿವೀಸ್ ತಂಡವನ್ನು 132 ರನ್ ಗಳಲ್ಲಿ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ” ಎಂದಿದ್ದಾರೆ. “ಪಿಚ್ ಬ್ಯಾಟ್ಸ್ ಮನ್ ಗಳಿಗೆ ಅನುಕೂಲಕರವಾಗಿತ್ತು. ಸರಿಯಾದ ಸ್ಥಳದಲ್ಲಿ ಬೌಲ್ ಮಾಡಿದ ಪರಿಣಾಮ ವಿಕೆಟ್ ಬೇಟೆ ನಡಿಸಿದೆವು. ವೇಗಿಗಳು ಹಾಗೂ ಸ್ಪಿನ್ ಬೌಲರ್ ಗಳು ಉತ್ತಮ ದಾಳಿ ನಡೆಸಿದ್ದಾರೆ” ಎಂದು ತಿಳಿಸಿದ್ದಾರೆ. ರವೀಂದ್ರ ಜಡೇಜಾ ಬೌಲಿಂಗ್ ಉತ್ತಮವಾಗಿದೆ. ಚಹಾಲ್ ನಮ್ಮ ಬಳಿ ಇರುವ ಮತ್ತೊಂದು ಅಸ್ತ್ರ. ಬುಮ್ರಾ ಸಹ ತಮ್ಮ ಜವಾಬ್ದಾರಿ ಅರಿತು ಬೌಲಿಂಗ್ ಮಾಡಿದ್ದಾರೆ. ಶಿವಂ, ಶಮಿ, ಶಾರ್ದೂಲ್ ಸಹ ತಂಡಕ್ಕೆ ನೆರವಾಗಿದ್ದಾರೆ. ಕ್ಷೇತ್ರರಕ್ಷಣೆಯಲ್ಲಿ ಉತ್ತಮ ಪ್ರದರ್ಶನ ನಿಡಿದ್ದೇವೆ” ಎಂದು ವಿರಾಟ್ ಹೇಳಿದ್ದಾರೆ.