ವೈದ್ಯಕೀಯ ಅರ್ಹತೆಯಿಲ್ಲದ ವ್ಯಕ್ಯಿಯೋರ್ವ ಕ್ಲಿನಿಕ್ ನಡೆಸುತ್ತಿರುವ ವೀಡೀಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
A video of a person without medical qualifications running a clinic goes viral on social media
ಲೋಕದರ್ಶನ ವರದಿ
ದಾಂಡೇಲಿ - ಮಾ. 13 : ದಾಂಡೇಲಿ ನಗರದಲ್ಲಿ ವೈದ್ಯಕೀಯ ಅರ್ಹತೆಯಿಲ್ಲದ ವ್ಯಕ್ಯಿಯೋರ್ವ ಕ್ಲಿನಿಕ್ ನಡೆಸುತ್ತಿರುವ ವೀಡೀಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ವೀಡೀಯೊದಲ್ಲಿ ಅಶೋಕ ಶಂಭು ಪರಬ್ ಎಂಬ ವ್ಯಕ್ತಿ ಕ್ಲಿನಿಕ್ನಲ್ಲಿ ಕುಳಿತು ರೋಗಿಗಳನ್ನು ಪರೀಕ್ಷಿಸುವದು, ಓಷಧಿ ನೀಡುವದು, ಇಂಜೆಕ್ಷನ್ ನೀಡುತ್ತಿರುವ ದೃಶ್ಯಗಳು ಸ್ಪಷ್ಟವಾಗಿ ಕಾಣಿಸುತ್ತಿದೆ.
ಪದವಿ ಅಥವಾ ನೊಂದಣಿಯಿಲ್ಲದೆ ಚಿಕಿತ್ಸೆ ನೀಡುವದು ಕಾನೂನು ಬಾಹಿರವಾಗಿದ್ದರೂ ಈ ಘಟನೆ ಬಹಿರಂಗವಾದ ನಂತರವೂ ಅಧಿಕಾರಿಗಳಿಂದ ತಕ್ಷಣದ ಕ್ರಮ ಕೈಗೊಳ್ಳಲಾಗಿಲ್ಲವೆಂಬ ಆರೋಪಗಳು ಕೇಳಿ ಬರುತ್ತಿದೆ. ಸ್ಥಳೀಯರ ಪ್ರಕಾರ ಈ ನಕಲಿ ವೈದ್ಯನ ಕುರಿತು ಆರೋಗ್ಯ ಇಲಾಖೆಗೆ ಬಹಳ ದಿನಗಳಿಂದಲೇ ಮಾಹಿತಿ ಇದ್ದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.
ವೈದ್ಯಕೀಯ ಅರ್ಹತೆಯಿಲ್ಲದವರು ಚಿಕಿತ್ಸೆ ನೀಡುವದು ರೋಗಿಗಳ ಅರೋಗ್ಯಕ್ಕೆ ಗಂಭೀರ ಅಪಾಯವಾಗಬಹುದು ಎಂದು ವೈದ್ಯರು ಎಚ್ಚರಿಸುತ್ತಿದ್ದಾರೆ. ತಪ್ಪಾದ ಓಷಧಿ, ತಪ್ಪಾದ ಇಂಜೆಕ್ಷನ್ ಅಥವಾ ತಪ್ಪಾದ ನಿರ್ಧಾರಗಳಿಂದ ರೋಗಿಗಳ ಜೀವಕ್ಕೂ ಅಪಾಯವುಂಟಾಗುವ ಸಾಧ್ಯತೆಯಿದೆ. ನೊಂದಣಿಯಿಲ್ಲದೆ ವೈದ್ಯಕೀಯ ಸೇವೆ ನೀಡುವದು ಕೆ.ಪಿ.ಎಮ್.ಇಆ್ಯಕ್ಟ್ ಸೇರಿದಂತೆ ವಿವಿಧ ಕಾನೂನುಗಳ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ಆರೋಗ್ಯ ಇಲಾಖೆ ಕೂಡಲೇ ಸೂಕ್ತ ಕ್ರಮ ಜರುಗಿಸಬೇಕಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 