'ಆಸೆಯೇ ದುಃಖಕ್ಕೆ ಮೂಲ' ಎಂದು ಸಾರಿ ಪ್ರೀತಿಯ ಮೂಲಕವೇ ಜಗತ್ತನ್ನು ಜುಸಬೇಕೆಂದು ಹೇಳಿಕೊಟ್ಟ ಗೌತಮ ಬುದ್ಧನನ್ನು ಲೋಕ ಸದಾ ಕಾಲ ಸ್ಮರಿಸಿಕೊಳ್ಳುತ್ತದೆ. ಜಗದ ತುಂಬ ಅಂಧಕಾರ ಆವರಿಸಿದಾಗ ಆ ಕವಿದ ಕತ್ತಲ ನಡುವಿನಲ್ಲಿಯೇ ಮೂಡಿದ ಒಂದು ಬೆಳ್ಳಿಕಿರಣ ಬುದ್ಧ. ಜಗದ ಯುಗದ ಮೂಢ ಮತಿಯನ್ನು ಅಳಿಸಲು ಹುಟ್ಟಿದ ಆಶಾಕಿರಣದಂತೆ ಆತ. ಶಾಂತಿ ಪ್ರೀತಿಯ ಸೌಮ್ಯ ಮೂರ್ತಿ ಅಬೋಧ ಕಂಗಳ ಆತ್ಮಯೋಗಿ. ಅರಿ"ನ ಬೆಳಕು ಹರಿಸಿದ ಮಮತಾಮು. ವಿಶ್ವದಂತಃಕರಣದ ಅನುರಾಗಿ. ಕಾಯಕದಲ್ಲಿಯೇ ಸ್ವರ್ಗ-ನರಕ, ಪಾಪ-ಪುಣ್ಯಗಳನ್ನು ಕಾಣಬೇಕೆಂದು ಹೇಳಿದ ದಾರ್ಶನಿಕನೀತ. ನಗು-ಅಳು, ನೋವು-ನಲಿವು ನಮ್ಮ ಬಾಳಿನಲಿ ಸಹಜವೆಂದು ಸರಳತೆಯಲ್ಲಿ ಬೋಧಿಸಿದ ಸಂತ. ದ್ವೇಷ-ಕ್ರೋಧದ ಭಾವ ಬಿಟ್ಟುಬಿಡಿ, ಕರುಣೆಯೊಂದೇ ಬಾಳಿನಕಣ್ಣು ನೆನಪಿನಲ್ಲಿಡಿ ಎಂದವ. ಆಸೆಯೆಂಬ ಮೋಹ ತ್ಯಜಿಸು ದುಃಖ ಸನಿಹ ಸುಳಿಯದು. ದುರಾಸೆ ದೋಣಿ ಹತ್ತಬೇಡ ಅದು ಎಂದಿಗೂ ತೀರ ತಲುಪದು ಎಂದು ಪ್ರೀತಿಂದ ತಿಳಿಸಿದವ. ಸಾವು-ನೋವು ಬದುಕಿನಲ್ಲಿ ಎಲ್ಲವೂ ಸಹಜ. ಸರಳ ಸಹಜ ನಡೆಯು, ಸತ್ಯದ ನುಡಿಯು ಸ್ಫೂರ್ತಿ ತುಂಬುವುದು ಬಾಳಿಗೆ ಎಂಬುದ ಕಲಿಸಿಕೊಟ್ಟವ. ಬುದ್ಧನೆಂಬೋ ದಿವ್ಯ ಬೆಳಕು ಸದಾ ಲೋಕ ಬೆಳಗೋ ದೀವಿಗೆಯಂತೆ. ನೊಂದವರಿಗೆ, ಬೆಂದವರಿಗೆ ಅನುಗಾಲ ತಂಪನೆರೆವ ಹೂನಗೆಯಂತೆ.
ಶುದ್ಧೋದನ ಮತ್ತು ಮಾಯಾದೇವಿಯ ಪುತ್ರನಾಗಿ ಜನಿಸಿದ ಬುದ್ಧನ ಮೂಲ ಹೆಸರು ಸಿದ್ಧಾರ್ಥ. ಈತ ಹುಟ್ಟುತ್ತಲೇ ಜ್ಯೋತಿಗಳು 'ಈತನೊಬ್ಬ ಮಹಾಪುರುಷನಾಗಿ ಲೋಕಕಲ್ಯಾಣ ಮಾಡುತ್ತಲೇ ಅಜರಾಮರನಾಗುತ್ತಾನೆ' ಎಂದು ಭವಿಷ್ಯ ನುಡಿದಿದ್ದರಂತೆ. ಹಾಗೆಯೇ ಈತನ ಮೇಲೆ ಕಷ್ಟದ ನೆರಳುಗಳು ಬೀಳದಂತೆ ಕಾಯಬೇಕು ಎಂದು ಎಚ್ಚರಿಕೆಯನ್ನು ನೀಡಿರುತ್ತಾರೆ. ಹಾಗೆಂದೇ ರಾಜ ಶುದ್ಧೋದನ ತನ್ನ ಮಗ ಚಕ್ರವರ್ತಿ ಆಗಬೇಕೆಂದು ಬಯಸಿ, ಸಿದ್ಧಾರ್ಥನ ಮೇಲೆ ಯಾವ ದುಃಖದ ಛಾಯೆಯೂ ಬೀಳದಂತೆ, ನೋವಿನ ನೆರಳುಗಳು ಸೋಕದಂತೆ ಅರಮನೆಯಲ್ಲಿಯೇ ಇಟ್ಟು ಎಲ್ಲ ಸೌಲಭ್ಯಗಳನ್ನು ಕೊಟ್ಟು ಬೆಳೆಸುತ್ತಾನೆ. ಕಾಲಕ್ರಮೇಣ ಯಶೋಧರೆ ಎಂಬ ಹೆಣ್ಣುಮಗಳೊಡನೆ ವಿವಾಹವನ್ನು ಮಾಡಿಕೊಡುತ್ತಾನೆ. ಸಿದ್ದಾರ್ಥನಿಗೆ ರಾಹುಲ ಎಂಬ ಮಗನೂ ಜನಿಸುತ್ತಾನೆ. ಸದಾ ಅನ್ಯಮನಸ್ಕನಾಗಿರುವ ಸಿದ್ಧಾರ್ಥ, ಐಹಿಕ ಸುಖಭೋಗಗಳಿಗೆ ಪರವಶನಾಗದೇ ಪಾರಮಾರ್ಥಿಕ ಆಲೋಚನೆಗಳಲ್ಲಿಯೇ ಮಗ್ನನಾಗಿರುತ್ತಾನೆ. ಅವನೊಳಗಿನ ಲೋಕಕಲ್ಯಾಣದ ತುಡಿತ, ಆಧ್ಯಾತ್ಮಿಕ ಚಿಂತನೆಗಳು ಕುತೂಹಲ ಮೂಡಿಸಿ ಒಂದು ದಿನ ಅರಮನೆುಂದ ಹೊರಬೀಳುವಂತೆ ಮಾಡುತ್ತವೆ. ವಾಯುವಿಹಾರಕ್ಕೆ ಹೊರಟ ಸಿದ್ಧಾರ್ಥ, ಹಾದಿಯಲ್ಲಿ ಓರ್ವ ಮುದುಕ, ರೋಗಿ, ಶವಯಾತ್ರೆ ಕಾಣುವ ಆತ ಚಿಂತಾಕ್ರಾಂತನಾಗುತ್ತಾನೆ. ಅರಮನೆಗೆ ಹಿಂತಿರುಗಿದ ಆತನಿಗೆ ನಿಜಜೀವನದ ಬಗ್ಗೆ ತಿಳಿದುಕೊಳ್ಳಲು, ದುಃಖದ ಮೂಲ ಕಂಡುಕೊಳ್ಳಲು ಪ್ರಯತ್ನಿಸಿ ಒಂದು ರಾತ್ರಿ ಹೆಂಡತಿ, ಮಗ, ಅರಮನೆ, ರಾಜವೈಭೋಗ ಎಲ್ಲವನ್ನು ತೊರೆದು ನಡೆದುಬಿಡುತ್ತಾನೆ. ಒಂದು ದಿನ ಬೋಧಿವೃಕ್ಷದ ಕೆಳಗೆ ಧ್ಯಾನಾಸಕ್ತನಾಗಿ ಕುಳಿತಾಗ ಸಿದ್ಧಾರ್ಥನಿಗೆ ಜ್ಞಾನೋದಯವಾಗುತ್ತದೆ. ಸಿದ್ಧಾರ್ಥ ಬುದ್ಧನಾಗಿ ತಾನು ಕಂಡುಕೊಂಡ ಸತ್ಯಗಳನ್ನು ಪ್ರಪಂಚಕ್ಕೆ ತಿಳಿಸಲು ಪ್ರಯತ್ನಿಸುತ್ತಾನೆ. ಗೌತಮ ಬುದ್ಧ ನೀಡಿದ ಸತ್ಯಸಂದೇಶಗಳು ಇಂದಿಗೂ ಜನಮಾನಸದಲ್ಲಿ ಸದಾ ಹಸಿರಾಗಿ ಉಳಿದಿವೆ.
'ನಾವು ಬೇರೆಯವರ ದ್ಟೃಯಲ್ಲಿ ಕೆಟ್ಟವರಾಗಲು ಅವರಿಗೆ ಕೆಡಕು ಮಾಡಬೇಕೆಂದಿಲ್ಲ. ಅವರು ಮಾಡುವ ತಪ್ಪುಗಳನ್ನು ಹೇಳಿದರೆ ಸಾಕು ಕೆಟ್ಟವರಾಗುತ್ತೇವೆ', 'ಬೇಡುವವರಿಗೆ ವರವನ್ನು ನೀಡುವ ಯಾವ ಅಗೋಚರ ಶಕ್ತಿಯೂ ಜಗತ್ತನಲ್ಲಿಲ್ಲ. ವ್ಯಕ್ತಿ ತಾನೇ ತನ್ನ ಪರಿಶ್ರಮದಿಂದ ಗಳಿಸಬೇಕು', 'ಸಂಬಂಧ ಕಡಿದು ಹೋದರೂ ಸಹ ನಿಜವನ್ನೇ ಹೇಳಿರಿ. ಸುಳ್ಳು ಹೇಳಿ ನಂಬಿಕೆಯನ್ನು ಮಾತ್ರ ಕಳೆದುಕೊಳ್ಳಬೇಡಿ. ಏಕೆಂದರೆ ತುಂಡಾದ ಸಂಬಂಧ ಎಂದಾದರೂ ತಿರುಗಿ ಒಂದಾಗಬಹುದು. ಆದರೆ ಕಳೆದುಹೋದ ನಂಬಿಕೆ "ಂದಿರುಗಿ ಬರುವುದಿಲ್ಲ', ನೀನು ಏನನ್ನು ಕಳೆದುಕೊಂಡಿರುವೆಯೋ ಅದಕ್ಕಿಂತ ಶ್ರೇಷ್ಠವಾದುದನ್ನು ಪಡೆಯುವೆ; ತಾಳ್ಮೆುರಬೇಕಷ್ಟೇ', 'ನೂರು ಉಪದೇಶಗಳಿಗಿಂತಲೂ ಆಪತ್ಕಾಲದಲ್ಲಿ ಮಾಡಿದ ಒಂದು ಸಹಾಯವೂ ಶ್ರೇಷ್ಠವಾದದ್ದು', 'ನಿನಗಾದ ನೋವನ್ನು ಮರೆತುಬಿಡು. ಆದರೆ ಆ ನೋವಿನಿಂದ ಕಲಿತ ಪಾಠವನ್ನು ಎಂದಿಗೂ ಮರೆಯಬೇಡ', 'ಜಾತಕ ನೋಡಿ ನಿನ್ನ ಭವಿಷ್ಯ ನಿರ್ಧರಿಸಲು ಯಾವ ಶಕ್ತಿುಂದಲೂ ಸಾಧ್ಯವಿಲ್ಲ. ನೀನು ಮನಸ್ಸು ಮಾಡಿದರೆ ನಿನ್ನ ಭವಿಷ್ಯ ನೀನೇ ಬರೆದುಕೊಳ್ಳುವೆ', 'ಇನ್ನೊಬ್ಬರ ಮೇಲೆ ದ್ವೇಷ ಸಾಧಿಸುವುದು ನಾವು ವಿಷ ಕುಡಿದು ಅವರು ಸಾಯಲಿ ಎಂದು ಕಾಯುತ್ತಾ ಕುಳಿತಂತೆ', 'ಜಗತ್ತಿನ ಅತಿ ದೊಡ್ಡ ಪ್ರಾರ್ಥನೆಯೆಂದರೆ ತಾಳ್ಮೆ', 'ಮನುಷ್ಯನಿಗೆ ಮಾತನಾಡಲು ಸ್ವಾಭಾ"ಕವಾಗಿ ಬರುತ್ತದೆ. ಆದರೆ ಮೌನವಾಗಿರುವುದಕ್ಕೆ ಕಠಿಣ ಅಭ್ಯಾಸ ಬೇಕು', 'ಜಗತ್ತಿನಲ್ಲಿ ಅತ್ಯಂತ ಪವಿತ್ರವಾದದ್ದು, ಈಗ ತಾನೆ ಜನಿಸಿದ ಮಗುವಿನ ಮೊದಲ ಅಳು ಮತ್ತು ಮೊದಲ ನಗು. ಎರಡರೊಳಗೂ ಶೂನ್ಯ ಸಂತೋಷ, ಶೂನ್ಯ ದುಃಖ', 'ಮನುಷ್ಯನ ಸ್ವಭಾವವೇ ಹಾಗೆ ತಪ್ಪು ತಮ್ಮದಾದರೆ ವಕೀಲರಾಗುತ್ತಾರೆ. ತಪ್ಪು ಬೇರೆಯವದಾದರೆ ನ್ಯಾಯಾಧೀಶರಾಗುತ್ತಾರೆ', ಅನ್ನ ಬೆಂದರೆ ತಿನ್ನಲು ಯೋಗ್ಯ. ಮನುಷ್ಯ ನೊಂದರೆ ಬದುಕಲು ಯೋಗ್ಯ'. ಇವು ಒಳ್ಳೆಯ ಬದುಕಿಗೆ ಗೌತಮ ಬುದ್ಧ ನೀಡಿದ ಸಂದೇಶಗಳು. ಇವುಗಳನ್ನು ಅನುಸರಿಸಿದ್ದೇ ಆದರೆ ನಮ್ಮನ್ನು ದುಃಖ ಬಾಧಿಸುವುದಿಲ್ಲ, ಚಿಂತೆ ಹಣಿಯುವುದಿಲ್ಲ, ನೋವು ಕುಸಿಯುವಂತೆ ಮಾಡುವುದಿಲ್ಲ, ಬದುಕಿನ ಆತ್ಮಸ್ಥೈರ್ಯ ಕುಂದುವುದಿಲ್ಲ, ಸಂಬಂಧಗಳು ಕೈಬಿಟ್ಟು ಹೋದರೂ ಕಣ್ಣೀರು ಕೆನ್ನೆ ತೋುಸುವುದಿಲ್ಲ. ಬುದ್ಧನ ಈ ಸಂದೇಶಗಳೇ ಅನೇಕ ಚಿಂತಕರನ್ನು, ಚಕ್ರವರ್ತಿಗಳನ್ನು ತನ್ನ ಕಡೆಗೆ ಸೆಳೆುತು. ಇತಿಹಾಸದಲ್ಲಿ ಅಜರಾಮರವಾಗಿ ಹೋದ ಮೌರ್ಯಚಕ್ರವರ್ತಿ ಅಶೋಕ, ಕುಶಾನರ ದೊರೆ ಕನಿಷ್ಕ, ಸಂ"ಧಾನಶಿಲ್ಪಿ ಅಂಬೇಡ್ಕರ್ ಬುದ್ಧನ ತತ್ವಗಳಿಗೆ ಮನಸೋತಿದ್ದನ್ನು ನಾವು ನೆನಪಿಸಿಕೊಳ್ಳಬಹುದು.
ವಸ್ತುಸ್ಥಿತಿ ಏನೆಂದರೆ ಇಂದು ನಾವು ವ್ಯಕ್ತಿಯ ಆದರ್ಶ, ತತ್ವ, ಸಂದೇಶಗಳನ್ನು ಅನುಸರಿಸುವುದನ್ನು ಬಿಟ್ಟು, ಪೂಜಿಸುವುದನ್ನು ಬಿಟ್ಟು ಬರೀ ವ್ಯಕ್ತಿಯನ್ನೇ ಪೂಜಿಸುತ್ತಿದ್ದೇವೆ. ಅವನ ಮೂರ್ತಿ ನಿಲ್ಲಿಸಿ ವಿಜೃಂಭಿಸುತ್ತಿದ್ದೇವೆ. ಹಾಗಾಗಿ ಕೆಡುಕಿಗೆ ದಾರಿಯನ್ನು ನಾವೇ ಸ್ಟೃಸಿಕೊಳ್ಳುತ್ತಿದ್ದೇವೆ. ಮಹಾಮಾನವತಾವಾದಿ ಗೌತಮ ಬುದ್ಧನ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದರ ಮುಖಾಂತರ ನಿಜವಾದ ಭಕ್ತಿ ಸಲ್ಲಿಸೋಣ. ಬದುಕಿನ ಅಂಧಕಾರವನ್ನು ಹೊಡೆದೋಡಿಸೋಣ.