ಬೆಂಗಳೂರು, ಆ 05 ರಾಜ್ಯಾದ್ಯಂತ ಸೋಮವಾರ ಸೋದರ ಬಾಂಧವ್ಯ ಬೆಸೆಯುವ, ನಾಡಿನ ದೊಡ್ಡ ಹಬ್ಬ ಎನಿಸಿಕೊಂಡಿರುವ ನಾಗರ ಪಂಚಮಿ ಹಾಗೂ ಗರುಡ ಪಂಚಮಿ ಹಬ್ಬವನ್ನು ಭಕ್ತಿ ಶ್ರದ್ಧೆಗಳಿಂದ ಆಚರಿಸಲಾಗಿದೆ
ಕೆಲವರು ಹುತ್ತಕ್ಕೆ ತನಿಯೆರೆದರೆ, ಹಲವರು ನಾಗರ ವಿಗ್ರಹಕ್ಕೆ ಹಾಲೆರೆದು, ಹೂವು, ಹಣ್ಣುಗಳನ್ನು ಅಪರ್ಿಸಿದ್ದಾರೆ ಆದಿಶೇಷ ಅಥವಾ ಹಾವುಗಳು ಶಿವ ಮತ್ತು ವಿಷ್ಣು ಇಬ್ಬರಿಗೂ ಪ್ರಿಯವಾದ ಕಾರಣ, ಶೈವ ಹಾಗೂ ವೈಷ್ಣವ ದೇಗುಲಗಳಲ್ಲಿ ವಿಶೇಷ ಪೂಜೆ, ರುದ್ರಾಭಿಷೇಕ ಸಲ್ಲಿಸಲಾಗಿದೆ
ಮದುವೆಯಾದ ಹೆಣ್ಣುಮಕ್ಕಳು ತವರಿಗೆ ಬಂದು ಅಣ್ಣ ತಮ್ಮಂದಿರನ್ನು ಹರಸಿ, ಚಿಗಳಿ, ತಂಬಿಟ್ಟು ಹಾಲು, ಹಣ್ಣು ಕೊಡುತ್ತಾರೆ. ಕೆಲವು ಕಡೆ ಹಾಲಿನಿಂದ ಸೋದರ, ಸೋದರಿಯರು ಪರಸ್ಪರರ ಬೆನ್ನು ತೊಳೆದು ನಂತರ ಬಾಳೆಹಣ್ಣು, ತಂಬಿಟ್ಟು, ಚಿಗಳಿ ಕೊಡುವ ಸಂಪ್ರದಾಯವೂ ಇದೆ
ನಾಗರ ಪಂಚಮಿ ಆಚರಣೆಯ ಹಿಂದೆ ಹಲವು ಕಥೆಗಳಿವೆ ಪುರಾಣದ ಪ್ರಕಾರ ಕಶ್ಯಪ ಮಹಷರ್ಿಗಳ ಪತ್ನಿಯರಾದ ಕದ್ರು ಹಾಗೂ ವಿನುತೆ ಅಕ್ಕತಂಗಿಯರು ಹಾವುಗಳು ಕದ್ರುವಿನ ಸಂತಾನವಾದರೆ, ಅರುಣ ಹಾಗೂ ಗರುಡ ವಿನುತೆಯ ಮಕ್ಕಳು ನಾಗರಗಳು ಮತ್ತು ಗರುಡ ದ್ವೇಷವನ್ನು ತೊರೆದು, ಸೋದರ ಬಾಂಧವ್ಯ ಮೆರೆದ ದಿನವನ್ನೇ ನಾಗರ ಪಂಚಮಿ ಅಥವಾ ಗರುಡ ಪಂಚಮಿಯನ್ನಾಗಿ ಆಚರಿಸಲಾಗುತ್ತದೆ
ವಾಸುಕಿ ಹೆಸರಿನ ನಾಗ ಈ ಭೂಮಿಯ ಭಾರವನ್ನು ಹೊತ್ತು ಸಮತೋಲನ ಸಾಧಿಸುತ್ತಿದ್ದಾನೆ ಎಂಬ ನಂಬಿಕೆಯೂ ಇದೆ ಮತ್ತೊಂದು ಕಥೆಯ ಪ್ರಕಾರ, ಜನಮೇಜಯ ಮಹಾರಾಜನು ತನ್ನ ತಂದೆ ಪರೀಕ್ಷಿತ್ರನನ್ನು ಕಚ್ಚಿ ಕೊಂದ ತಕ್ಷಕನ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿ 'ಸರ್ಪಯಾಗ' ಆರಂಭಿಸುತ್ತಾನೆ 12 ವರ್ಷಗಳ ಕಾಲ ನಡೆದ ಈ ಯಾಗದಲ್ಲಿ ಅನೇಕ ಹಾವುಗಳು ಬಲಿಯಾಗುತ್ತವೆ ಕೊನೆಗೆ ತಕ್ಷಕನ ಸೋದರಿ ಜರಾತ್ಕಾರುವಿನ ಪುತ್ರ 'ಆಸ್ತಿಕ'ನ ಮಧ್ಯಪ್ರವೇಶದಿಂದ ಯಾಗ ಸ್ಥಗಿತೊಂಡು ತಕ್ಷಕ ಹಾಗೂ ಇನ್ನಿತರ ಹಾವುಗಳ ಪ್ರಾಣ ಉಳಿಯುತ್ತದೆ ಅಂದಿನ ದಿನ ಶ್ರಾವಣ ಶುದ್ಧ ಪಂಚಮಿಯಾಗಿದ್ದು, ನಾಗಗಳ ಸಂಕಷ್ಟ ನಿವಾರಣೆಯಾಗಿದ್ದರಿಂದ ನಾಗರ ಪಂಚಮಿ ಆಚರಣೆ ರೂಢಿಗೆ ಬಂತು ಎನ್ನಲಾಗಿದೆ
ಅಗ್ನಿ ಪುರಾಣ, ಸ್ಕಂದ ಪುರಾಣ, ನಾರದ ಪುರಾಣ, ಮಹಾಭಾರತಗಳಲ್ಲಿ ಸರ್ಪಗಳ ಉಲ್ಲೇಖವಿದೆ. ನಾಗದೇವತೆಯ ಆರಾಧನೆಯಿಂದ ದಾಂಪತ್ಯ ಸೌಖ್ಯ ದೊರಕುತ್ತದೆ, ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ ಹಾವುಗಳು ಇಲಿ, ಹೆಗ್ಗಣಗಳನ್ನು ನುಂಗುವ ಮೂಲಕ ರೈತನಿಗೆ ಪರೋಕ್ಷ ಮಿತ್ರನೂ ಆಗಿದೆ ಎನ್ನಬಹುದು ಹುತ್ತದ ಮಣ್ಣು ಚರ್ಮರೋಗ ನಿವಾರಕ ಎನ್ನಲಾಗುತ್ತದೆ
ಭಕ್ತಿಯ ಹೆಸರಿನಲ್ಲಿ ಹುತ್ತದೊಳಗೆ ಹಾಲು ಸುರಿದರೆ, ಅಲ್ಲಿರುವ ಹಾವುಗಳಿಗೆ ತೊಂದರೆಯಾಗುತ್ತದೆ ಹೀಗಾಗಿ ಅದೇ ಹಾಲನ್ನು ಬಡ ಮಕ್ಕಳಿಗೆ ಕೊಟ್ಟು ತೃಪ್ತಿ ಹೊಂದುವುದು ಉತ್ತಮ ಎಂಬುದು ಪ್ರಾಜ್ಞರ ಸಲಹೆ.