ನವದೆಹಲಿ. ಫೆ 10, ದಕ್ಷಿಣ ಆಫ್ರಿಕಾ ಆತಿಥ್ಯದಲ್ಲಿ ಭಾನುವಾರ 10 ವಯೋಮಿತಿ ವಿಶ್ವಕಪ್ ಪೈನಲ್ ಹಣಾಹಣಿಯಲ್ಲಿ ಚಾಂಪಿಯನ್ಸ್ ಬಾಂಗ್ಲಾದೇಶ ತಂಡದ ಆಟಗಾರರ ವರ್ತನೆಯನ್ನು ಭಾರತ ತಂಡದ ನಾಯಕ ಪ್ರಿಯಮ್ ಗರ್ಗ್ ಟೀಕಿಸಿದ್ದಾರೆ. ಪಂದ್ಯದ ಸೋಲಿನ ಬಳಿಕ ತೀವ್ರ ನಿರಾಸೆಗೆ ಒಳಗಾಗಿದ್ದ ಭಾರತ ತಂಡದ ನಾಯಕ ಪ್ರಿಯಮ್ ಗರ್ಗ್," ಬಾಂಗ್ಲಾ ಆಟಗಾರರು ವರ್ತನೆ ಅಸಹ್ಯ ಮೂಡಿಸಿತ್ತು. ಇಂಥ ಘಟನೆ ನಡೆಯಬಾರದಿತ್ತು ಎಂದು ಭಾವಿಸುತ್ತೇನೆ. ಆದರೂ ಪರವಾಗಿಲ್ಲ ನಾವು ಸಮಾಧಾನವಾಗಿ ವರ್ತಸಿದೆವು. ಇದೆಲ್ಲವು ಆಟದ ಒಂದು ಭಾಗ ಎಂದು ಭಾವಿಸಿದೆವು,'' ಎಂದು ಹೇಳಿದರು.
ನಾವು ಒಂದನ್ನು ಗೆದ್ದುಕೊಂಡರೆ , ಮತ್ತೊಂದನ್ನು ಕಳೆದುಕೊಳ್ಳುತ್ತೇವೆ ಎಂದು ಪ್ರಿಯಮ್ ಬಾಂಗ್ಲಾ ತಂಡವನ್ನು ಪರೋಕ್ಷವಾಗಿ ಟೀಕಿಸಿದರು. ತಂಡದ ಆಟಗಾರರ ದುರ್ವರ್ತನೆ ಬಗ್ಗೆ ಪ್ರತಿಕ್ರಿಯಿಸಿದ ಬಾಂಗ್ಲಾದೇಶ ತಂಡದ ನಾಯಕ ಅಕ್ಬರ್ ಅಲಿ, ’’ಈ ರೀತಿಯ ಘಟನೆ ನಡೆಯಬಾರದಿತ್ತು. ಅಲ್ಲಿ ಏನು ನಡೆಯಿತು ಎಂಬ ಬಗ್ಗೆ ನನಗೂ ಸರಿಯಾದ ಮಾಹಿತಿ ಇಲ್ಲ. ಆದರೆ, ಪೈನಲ್ ಪಂದ್ಯದಲ್ಲಿ ಆಟಗಾರರು ಭಾವೋದ್ವೇಗಕ್ಕೆ ಒಳಗಾಗುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ನಾವು ಎದುರಾಳಿ ತಂಡವನ್ನು ವಿಶ್ವಾಸದಿಂದ ಕಾಣಬೇಕಿತ್ತು. ಕ್ರೀಡೆಯನ್ನು ಗೌರವಿಸಬೇಕು. ಕ್ರಿಕೆಟ್ ಜಂಟಲ್‌ಮ್ಯಾನ್‌ಗಳ ಆಟ ಎಂಬುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕಾಗಿತ್ತು. ತಂಡದ ಪರ ನಾನು ಕ್ಷಮೆ ಕೋರುತ್ತೇನೆ, ಎಂದು ತಿಳಿಸಿದ್ದಾರೆ.
ಏನದು ದುರ್ವರ್ತನೆ ? ಕಿರಿಯರ ವಿಶ್ವಕಪ್ ಫೈನಲ್ ಪಂದ್ಯದ ಬಳಿಕ ಬಾಂಗ್ಲಾದೇಶ ತಂಡದ ಆಟಗಾರರ ಪಿಚ್ ಸಮೀಪ ಶರವೇಗದಲ್ಲಿ ಧಾವಿಸಿ ಐತಿಹಾಸಿಕ ಜಯವನ್ನು ಸಂಭ್ರಮಿಸಿದರು. ಈ ವೇಳೆ ಬಾಂಗ್ಲಾದೇಶದ ಕಾಯ್ದಿರಿಸಿದ ಆಟಗಾರನೊಬ್ಬ ಆಡಿದ ಮಾತು ಭಾರತೀಯ ಆಟಗಾರರನ್ನು ಕೆಣಕಿತು. ಇದರಿಂದ ಉಭಯ ತಂಡಗಳ ಆಟಗಾರರ ನಡುವೆ ಮಾತಿನ ಚಕಮಕಿ ನಡೆಯಿತು. ಇದು ಪರಸ್ಪರ ಆಟಗರಾರನನ್ನು ತಳ್ಳಲು ಎಡೆ ಮಾಡಿಕೊಟ್ಟಿತು. ಭಾವನೆಗಳನ್ನು ತಡೆಯಲಾಗದ ಆಟಗಾರರು ಪರಸ್ಪರ ಕೈ ಮಿಲಾಯಿಸಲು ಮುಂದಾಗಿದ್ದರು. ಈ ವೇಳೆ ತೀರ್ಪುಗಾರರು ಪರಿಸ್ಥಿತಿ ನಿಯಂತ್ರಿಸಿದರು.