ಮುಂಬೈನಿಂದ ವಿಜಯಪುರಕ್ಕೆ 13 ಜನರ ಆಗಮನ

ವಿಜಯಪುರ, ಮೇ 11, ಆರಂಭದಲ್ಲಿ ಹಸಿರು ವಲಯವಾಗಿದ್ದರೂ, ನಂತರ ಕೊರೋನಾ ಸೋಂಕಿನ ದಾಳಿಯಿಂದ ಕಂಗೆಟ್ಟಿರುವ ವಿಜಯಪುರ ಜಿಲ್ಲೆಗೆ ಸೋಮವಾರ ಬೆಳಗ್ಗೆ ಮುಂಬೈನಿಂದ 13 13 ಜನ ತಬ್ಲಿಘ್ ಜಮಾತ್ ಸದಸ್ಯರು ಬಂದಿಳಿದಿದ್ದಾರೆ. ಇವರೆಲ್ಲರ ತಪಾಸಣೆ ನಡೆಸಿ, ಇನ್ಸಿಟ್ಯೂಷನಲ್ ಕ್ವಾರಂಟೈನ್ ಮಾಡಲಾಗಿದೆ. ಅವರ ಗಂಟಲು ದ್ರವ ಮಾದರಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮಾಹಿತಿ ನೀಡಿದ್ದಾರೆ.ವಿಜಯಪುರದಲ್ಲಿ 49 ಜನರಿಗೆ ಸೋಂಕು ತಗುಲಿದ್ದು, 33 ಮಂದಿ ಗುಣಮುಖರಾಗಿದ್ದಾರೆ. ಸದ್ಯ ಅಲ್ಲಿ 13 ಸಕ್ರಿಯ ಪ್ರಕರಣಗಳಿದ್ದು, ಮೂವರು ಮರಣಹೊಂದಿದ್ದಾರೆ.