ಅಲೆಮಾರಿ ಸಮುದಾಯದ ಹೋರಾಟಗಾರರ ಮನವಿ

ಲೋಕದರ್ಶನ ವರದಿ

ಬೆಳಗಾವಿ 16: ಅಲೆಮಾರಿ ಜನಾಂಗದ ಎಲ್ಲ ಉಪ ಪಂಗಡಗಳನ್ನು ಪ್ರವರ್ಗ 1 ರಿಂದ ಪರಿಶಿಷ್ಟ ಜಾತಿಗೆ ಸೇರಿಸುವಂತೆ ಆಗ್ರಹಿಸಿ ಅಖಿಲ ಕನರ್ಾಟಕ ಅಲೆಮಾರಿ ಸಮುದಾಯದ ಹೋರಾಟಗಾರರು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಅಲೆಮಾರಿ ಜನಾಂಗದ ಬೈಲಪತರ, ಹೆಳವರ ಮುಂತಾದ ಪಂಗಡಗಳನ್ನು ಈಗ ಪ್ರವರ್ಗ 1 ರಲ್ಲಿ ಸೇರಿಸಿರುವದರಿಂದ ಸೌಲಭ್ಯಗಳಿಂದ ಈ ಸಮಾಜ ವಂಚಿತವಾಗುತ್ತಿದೆ. ಅಲೆಮಾರಿ ಜನಾಂಗವು ಒಂದೆ ಕಡೆ ಇರುವದಿಲ್ಲ. ಚಿಮ್ಮಣಕಿ, ಉಂಗುರ, ಹಾಲಗಡಗಾ, ಕಬ್ಬಿಣ, ತಾಮ್ರ, ಹಿತ್ತಾಳೆಯಿಂದ ಚಿಕ್ಕಪುಟ್ಟ ವಸ್ತುಗಳನ್ನು ಸಿದ್ದ ಪಡಿಸಿಕೊಂಡು ಆಯಾ ಊರುಗಳ ಜಾತ್ರೆ ಮತ್ತು ಹಳ್ಳಿ ಹಳ್ಳಿಗಳಿಗೆ ತಿರುಗುತ್ತಾರೆ. ಇಂತಹ ತೀರ ಹಿಂದುಳಿದ ಸಮುದಾಯವನ್ನು ಪ್ರವರ್ಗ 1 ರಲ್ಲಿ ಸೇರ್ಪಡೆ ಮಾಡಿರುವದು ತುಂಬ ಅನ್ಯಾಯವಾಗಿದೆ ಎಂದು ತಿಳಿಸಿದ್ದಾರೆ.

ಅಲೆಮಾರಿ ಸಮುದಾಯವು ಶೈಕ್ಷಣಿಕವಾಗಿ, ಆಥರ್ಿಕವಾಗಿ, ಸಾಮಾಜಿಕವಾಗಿ ತೀರ ಹಿಂದುಳಿದಿದೆ. ಒಂದೆ ಕಡೆ ನೆಲೆಸಿ ಶಿಕ್ಷಣ ಪಡೆಯುವ ಸೌಲಭ್ಯ ಇಲ್ಲದರಿಂದ ಈ ಸಮುದಾಯದ ಜನರಿಗೆ ಸರಕಾರಿ ನೌಕರಿಗಳು ಇಲ್ಲ. ಹಾಗೂ ಇತರ ಸೌಲಭ್ಯಗಳು ಇಲ್ಲದರಿಂದ ಇಂದಿಗೂ ಕಡು ಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಮನವಿ ಸ್ವೀಕರಿಸಿದ ಡಾ. ಈ.ಪರಮೇಶ್ವರ ಅವರು ಮನವಿಯನ್ನು ಪರಿಶೀಲಿಸುವ ಭರವಸೆ ನೀಡಿದರು.

ಹನಮಂತ ಟಿಕೋಳ, ಅಪ್ಪೂಶಾ ಸಂಪ್ಲಿಸಿ, ನಾಗೇಶ ಪಂಚಮಿ, ಪ್ರಲ್ಹಾದ ಸಂಪ್ಲಿಸಿ, ಶಂಕರ ಪಂಚಮಿ ಮುಂತಾದವರು ಉಪಸಥಿತರಿದ್ದರು.