ಯಾವುದೇ ಕಲೆಯ ಸಾಧನೆ ಅನನ್ಯ ಪ್ರಯತ್ನದಿಂದ ಮಾತ್ರ ಸಾಧ್ಯ

The achievement of any art is possible only through unique effort.

ಯಾವುದೇ ಕಲೆಯ ಸಾಧನೆ ಅನನ್ಯ ಪ್ರಯತ್ನದಿಂದ ಮಾತ್ರ ಸಾಧ್ಯ  

ಹಾವೇರಿ 20 : ಪ್ರತಿಭೆಗೆ, ಕಲೆಗೆ ವಯಸ್ಸು ಎಂದು ಮುಖ್ಯ ವಾಗುವುದಿಲ್ಲ, ಯಾವುದೇ ಕಲೆಯ ಸಾಧನೆ ಎಲ್ಲರಿಂದಲೂ ಸಾಧ್ಯವಿಲ. ದೈವ ಕೃಪೆ, ಸಂಸ್ಕಾರ, ಅನನ್ಯ ಪ್ರಯತ್ನ ಮಾತ್ರದಿಂದಲೇ ಸಾಧ್ಯ ಎಂದು ಕರ್ಕಿಹಳ್ಳಿ ಸ್ವಾಮೀಜಿ ಹೇಳಿದರು. ತಾಲೂಕಿನ ಅಗಡಿ ಆನಂದವನದಲ್ಲಿ ಶ್ರೀ ಶೇಷಾಚಲ ಸದ್ಗುರುಗಳ 177 ನೇ ಜಯಂತಿ ಉತ್ಸವದ ಅಂಗವಾಗಿ ಮಕ್ಕಳ ಸಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಾರ್ವರಿಶ ನಾಟ್ಯ ಕೇಂದ್ರದ ಪಿ.ಆರ್‌. ಗಗನ ಗೌತಮಿ ಸಹೋದರಿಯರ ಸೀತಾ ಸ್ವಯಂವರ ಭರತನಾಟ್ಯ ವಿಶೇಷ ಗಮನ ಸೆಳೆಯಿತು. ಹತ್ತಕ್ಕೂ ಅಧಿಕ ಮಕ್ಕಳು ಭಕ್ತಿ ಗೀತೆ, ಮೋಜಿನ ವೇಷ ಹಾಗೂ ನೃತ್ಯ ಪ್ರದರ್ಶಿಸಿದರು. ಗುರುದತ್ತಮೂರ್ತಿ ಚಕ್ರವರ್ತಿ ಸ್ವಾಮೀಜಿ, ವಿಶ್ವನಾಥ ಚಕ್ರವರ್ತಿ ಸ್ವಾಮೀಜಿ ಹಾಗೂ ಸುರೇಶ್ ಮಹಾರಾಜರು ಉಪಸ್ಥಿತರಿದ್ದರು. ಭಾಗ್ಯಲಕ್ಷ್ಮಿ ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.