ಲೋಕದರ್ಶನ ವರದಿ
ಸಿದ್ದಾಪುರ; ಕನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು
ಇವರ ಪ್ರಾಯೋಜಕತ್ವದಲ್ಲಿ ಯಕ್ಷಮಿತ್ರ ಬಳಗ ಗಾಳಿಜಡ್ಡಿ ಇದರ ಅಡಿಯಲ್ಲಿ ಯಕ್ಷಗಾನ ತರಬೇತಿ ಶಿಬಿರ ಉಮಾಪತಿ
ಹೆಗಡೆ ರಂಗಮಂದಿರ ಗಾಳಿಜಡ್ಡಿಯಲ್ಲಿ ಉದ್ಘಾಟನೆಗೊಂಡಿತು. ಕನರ್ಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು
ಇದರ ಸದಸ್ಯರಾದ ನಾಗರಾಜ ಜೋಶಿ ಸೋಂದಾ ಇವರು ದೀಪ ಬೆಳಗಿಸುವುದರ
ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪಠ್ಯೇತರ
ಚಟುವಟಿಕೆಗಳಲ್ಲಿ ಮಕ್ಕಳು ತಮ್ಮನ್ನು ತಾವು ತೊಡಗಿಸಿಕೊಂಡರೆ ವ್ಯಕ್ತಿತ್ವ ವಿಕಸನ ಗೊಳ್ಳುವುದರ ಜೊತೆಗೆ
ಸ್ವತಂತ್ರವಾಗಿ ನಿಧರ್ಾರಗಳನ್ನು ತೆಗೆದುಕೊಳ್ಳುವಂತಹ ಮನೋಧರ್ಮ ತಾನಾಗಿಯೇ ಬೆಳೆಯುತ್ತದೆ. ಯಕ್ಷಗಾನ-ನಾಟಕ-ಸಂಗೀತ
ಇವುಗಳನ್ನು ಕಲಿಯುವುದರ ಮೂಲಕ ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೇಳೆಸಲು ಅನೂಕೂಲವಾಗುತ್ತದೆ. ಹಳ್ಳಿ
ಹಳ್ಳಿ ಗಳಲ್ಲಿ ತರಬೇತಿಗಳನ್ನು ನಡೆಸಿ ನಮ್ಮ ಅಕಾಡೆಮಿಯ ಸಹಾಯ ಸೌಲಭ್ಯಗಳು ಗ್ರಾಮೀಣ ಮಟ್ಟದಲ್ಲಿ ಮುಟ್ಟಬೆಕು
ಎನ್ನುವುದೇ ನಮ್ಮ ಉದ್ದೇಶ ಅಕಾಡೆಮಿಯ ಕೆಲಸ ಕಾರ್ಯಗಳ ಕುರಿತಾಗಿ ತಿಳಿಸಿದರು.
ಟಿ.ಎಸ್.ಎಸ್
ಶಿರಸಿ ಸಂಸ್ಥೆಯ ನಿಧರ್ೆಶಕರಾದ ರವೀಂದ್ರ ಹೆಗಡೆ ಹಿರೇಕೈ ಅವರು ಕಾರ್ಯಕ್ರಮದ ಅಧ್ಯಕ್ಷತೆ
. ಗ್ರಾ.ಪಂ.
ಹಾಸರ್ಿಕಟ್ಟಾ ದ ಮಾಜಿ ಉಪಾಧ್ಯಕ್ಷರಾದ ಅಶೋಕ ಹೆಗಡೆ ಹಿರೇಕೈ, ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ರಘುಪತಿ ಹೆಗಡೆ ಹೂಡೆಹದ್ದ, ಯಕ್ಷಗಾನ ಕಲಿಕಾ ಶಿಕ್ಷಕರು
ಮತ್ತು ಯಕ್ಷಗಾನ ವೇಷಧಾರಿಗಳಾದಂತಹ ನರೇಂದ್ರ ಹೆಗಡೆ
ಅತ್ತಿಮುಡರ್ು ಇವರುಗಳು ಕಾರ್ಯಕ್ರಮಕ್ಕೆ ಶುಭಕೋರಿದರು.
ಸತೀಶ ಹೆಗಡೆ ದಂಟಕಲ್ ಸ್ವಾಗತಿಸಿ ಪ್ರಾಸ್ತವಿಕ ಮಾತುಗಳನ್ನಾಡಿದರು, ಸುಜಾತಾ ದಂಟಕಲ್ ನಿರೂಪಿಸಿ ವಂದಿಸಿದರು.