ಲೋಕದರ್ಶನ ವರದಿ
ಹೊಸಪೇಟೆ01: 25ನೇ ವಾಡರ್ಿನ ಸಿದ್ದಲಿಂಗಪ್ಪ ಚೌಕಿಯಲ್ಲಿ ತಾಲೂಕು ಅಹಿಂದ ಯುವ ವೇದಿಕೆಯ 25ನೇ ಮಹಿಳಾ ಘಟಕವನ್ನು ಉದ್ಘಾಟಿಸಲಾಯಿತು. ಈ ಕಾರ್ಯಕ್ರಮದಲ್ಲಿ ನೂರ್ಜಹಾನ್ 9ನೇ ವಾರ್ಡ ನಗರ ಸಭಾ ಸದಸ್ಯರು ಹಾಗೂ ಕೆ.ಗೌಸ್, ನಗರ ಸಭೆ ಸದಸ್ಯರು ಜಂಟಿಯಾಗಿ ಉದ್ಘಾಟಿಸಿದರು. ನೂರ್ ಜಹಾನ್ ಅವರು ಮಹಿಳೆಯರು ಹೆಚ್ಚು ಹೆಚ್ಚು ಸಂಘಟಿತರಾಗಬೇಕು ಮಹಿಳೆಯರಲ್ಲಿ ಅನೇಕ ಸಮಸ್ಯೆಗಳಿಗೆ ಸಂಘಟನೆ ಮೂಲಕ ಸಕರ್ಾರದಿಂದ ಬರುವ ಸೌಲಭ್ಯಗಳನ್ನು ಪಡೆಯಬೇಕು. ಆಥರ್ಿಕವಾಗಿ ಪ್ರಬಲರಾಗಬೇಕೆಂದು ಕಿವಿಮಾತು ಹೇಳಿದರು ಇನ್ನೊಬ್ಬ ನಗರ ಸಭಾ ಸದಸ್ಯರಾದ ಕೆ.ಗೌಸ್ರವರು ಮಾತನಾಡಿ ನಾನು ಸ್ವತಃ ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದವನಾಗಿದ್ದು ಮಹಿಳೆಯರ ಹಾಗೂ ಅಲ್ಪ ಸಂಖ್ಯಾತರ ಸಾಮಾಜಿಕ ಸಮಸ್ಯೆಗಳ ಬಗ್ಗೆ ನನಗೆ ಅರಿವಿದೆ ನಿಮ್ಮ ಸಂಘದ ಬೆಂಬಲಕ್ಕೆ ನಾನು ನಿಂತು ನಮ್ಮ ನಗರ ಸಭೆಯಲ್ಲಿ ಬರುವ ಸೌಲಭ್ಯಗಳನ್ನು ಆದ್ಯತೆ ಮೇರೆಗೆ ಆ ಸಂಘಟನೆಯಲ್ಲಿರುವ ಮತ್ತು ಈ ಸಮುದಾಯಗಳಲ್ಲಿ ಅತ್ಯಂತ ನಿಷ್ಕೃಷ್ಟವಾಗಿ ಬದುಕುತ್ತಿರುವ ಕುಟುಂಬಗಳಿಗೆ ಹೆಚ್ಚಿನ ಮಟ್ಟದಲ್ಲಿ ಒದಗಿಸಿಕೊಡಬೇಕೆಂದು ತಿಳಿಸಿದರು.
ಇನ್ನೊಬ್ಬ ಮುಖ್ಯ ಅತಿಥಿಗಳಾಗಿ ಭಾಗವಹಿಸಿರುವ ಆರ್.ಮಂಜುನಾಥ್ ರವರು ಹಿಂದುಳಿದ ಹಾಗೂ ಅಲ್ಪ ಸಂಖ್ಯಾತರ ಸಮಾಜಗಳಲ್ಲಿ ಸಮಸ್ಯೆಗಳು ಸಹಜ. ಆದರೆ ಅದನ್ನು ಮೆಟ್ಟಿನಿಲ್ಲುವ ಸ್ಥೈರ್ಯಬೇಕು. ಒಬ್ಬರಿಂದ ಯಾವುದನ್ನೂ ಮಾಡಲು ಸಾಧ್ಯವಿಲ್ಲ. ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಸಂಘಟಿತರಾಗಬೇಕು. ಈ ಮೂಲಕ ಸಮಾಜದ ಪರಿವರ್ತನೆಗೆ ನಾಂದಿ ಹಾಡಬೇಕು.
ಮಹಿಳೆಯರು ಸಂಘಟನೆಗೆ ಹೆಚ್ಚು ಶಕ್ತಿ ಇರುತ್ತದೆ. ಸಂಘಗಳು ಸಂಘರ್ಷಕ್ಕೆ ದಾರಿ ಮಾಡಿಕೊಡಬಾರದು. ಅನ್ಯಾಯದ ವಿರುದ್ಧ ಹೋರಾಡುವ ಬಗ್ಗೆ ಯೋಚಿಸಬೇಕು ಎಂದು ಹೇಳಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಬೇರ ದಲ್ಲಾಲಿ ಅಧ್ಯಕ್ಷರು ತಾಲೂಕು ಅಹಿಂದ ಯುವ ವೇದಿಕೆ ಇವರು ಮಾತನಾಡಿದರು.
ಅತಿಥಿಗಳಾಗಿ ನಗರ ಸಭೆ ಸದಸ್ಯರಾದ ನೂರ್ ಜಹಾನ್, ನಗರ ಸಭೆ ಸದಸ್ಯರಾದ ಕೆ.ಗೌಸ್, ಆರ್.ಮಂಜುನಾಥ ಶಿಕ್ಷಕರು, ಅಹಿಂದ ಯುವ ವೇದಿಕೆ ತಾಲೂಕು ಅಧ್ಯಕ್ಷ ಕುಬೇರ ದಲಾಲಿ ಕಾಮರ್ಿಕ ಘಟಕದ ಅಧ್ಯಕ್ಷ ಎಸ್.ಬಿ.ಮಂಜುನಾಥ, ಕೆ.ರವಿಕುಮಾರ್, ಬಂದಿ ಭರಮಪ್ಪ, ಸಿ.ಕೊಟ್ರೇಶ್, ಆದಿಶೇಷ, ಚಂದ್ರಶೇಖರ್, ದ್ಯಾಮಣ್ಣ, ಉದಯ, ಎ.ಹೆಚ್.ಆದಿ ಹಾಗೂ ಇನ್ನು ಮುಂತಾದವರು ಉಪಸ್ಥಿತರಿದ್ದರು.