ನವದೆಹಲಿ, ಫೆ 1: ಬೆನ್ನು ಮೂಳೆಯ ಶಸ್ತ್ರ ಚಿಕಿತ್ಸೆೆಗೆ ಒಳಗಾಗಿದ್ದ ಭಾರತ ತಂಡದ ಸ್ಟಾಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ತಮ್ಮ ಬೆನ್ನಿನ ಬಗ್ಗೆೆ ಶಸ್ತ್ರ ಚಿಕಿತ್ಸಕ ಜೇಮ್ಸ್ ಆಲಿಬೊನ್ ಅವರ ಬಳಿ ವಿಮರ್ಶೆ ಪಡೆಯಲು ಲಂಡನ್‌ಗೆ ತೆರಳುವ ಹಿನ್ನೆೆಲೆಯಲ್ಲಿ ನ್ಯೂಜಿಲೆಂಡ್ ವಿರುದ್ಧ ಮುಂಬರುವ ಟೆಸ್ಟ್ ಸರಣಿಯಿಂದ ಹೊರಗುಳಿಯಲಿದ್ದಾರೆ.
ಬಿಸಿಸಿಐ ಬಿಡುಗಡೆ ಮಾಡಿರುವ ಹೇಳಿಕೆ ಪ್ರಕಾರ, ಹಾರ್ದಿಕ್ ಪಾಂಡ್ಯ ಅವರೊಂದಿಗೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಫಿಜಿಯೊ ಆಶಿಷ್ ಕೌಶಿಕ್ ಅವರೂ ಲಂಡನ್‌ಗೆ ತೆರಳಲಿದ್ದಾರೆ. ಲಂಡನ್‌ನಿಂದ ಮರಳಿದ ಬಳಿಕ ಅವರು ಪಾಂಡ್ಯ ಸಂಪೂರ್ಣ ಕ್ರಿಯಾಶೀಲತೆ ಮರಳಿ ಪಡೆಯುವವರೆಗೂ ಎನ್‌ಸಿಎನಲ್ಲಿ ಪುನವರ್ಸತಿ ಪಡೆದುಕೊಳ್ಳಲಿದ್ದಾರೆ.
ಇದಕ್ಕೂ ಮುನ್ನ ಹಾರ್ದಿಕ್ ಪಾಂಡ್ಯ ಹಾಗೂ ಜಸ್ಪ್ರಿತ್ ಬುಮ್ರಾ ಅವರು ಡೆಲ್ಲಿ ಕ್ಯಾಪಿಟಲ್ಸ್ ಟ್ರೈನರ್ ರಜನಿಕಾಂತ್ ಶಿವಜ್ಞಾನಮ್ ಅವರ ಬಳಿ ಪುನಶ್ಚೇಚನ ಕಾರ್ಯದಲ್ಲಿ ತೊಡಗಿದ್ದರು. ಈ ಕಾರಣದಿಂದ ಎನ್‌ಸಿಎ ಇವರಿಬ್ಬರಿಗೂ ಫಿಟ್ನೆೆಸ್ ಟೆಸ್ಟ್ ನೀಡಲು ನಿರಾಕರಿಸಿತ್ತು. ನಂತರ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಪ್ರತಿಯೊಬ್ಬ ಆಟಗಾರರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಬೇಕು ಎಂದು ಹೇಳಿದ್ದರು.
‘‘ನಾನು ನಿನ್ನೆ ದ್ರಾವಿಡ್ ಅವರನ್ನು ಭೇಟಿಯಾಗಿದ್ದೆೆ ಮತ್ತು ನಾವು ಒಂದು ವ್ಯವಸ್ಥೆೆಯನ್ನು ಜಾರಿಗೆ ತಂದಿದ್ದೇವೆ. ಬೌಲರ್‌ಗಳು ಗಾಯಗೊಂಡರೆ ಎನ್‌ಸಿಎಗೆ ಹೋಗಬೇಕಾಗುತ್ತದೆ. ಬೇರೆ ಯಾರಿಗಾದರೂ ಚಿಕಿತ್ಸೆೆ ಅಗತ್ಯವಾದಲ್ಲಿ ಅವರು ಕೂಡ ಎನ್‌ಸಿಎಗೆ ಬರಬೇಕಾಗುತ್ತದೆ,’’ ಎಂದು ಗಂಗೂಲಿ ಹೇಳಿದ್ದಾರೆ.