ತಾಳಿಕೋಟಿ ಬಂದ್ ಸಂಪೂರ್ಣ ಯಶಸ್ವಿ

The Talikote bandh was a complete success

ತಾಳಿಕೋಟಿ 31: ಡಾ. ಬಿ.ಆರ್‌.ಅಂಬೇಡ್ಕರ್ ಅವರ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ನೀಡಿರುವ ಅವಮಾನಕರ ಹೇಳಿಕೆಯನ್ನು ಖಂಡಿಸಿ ಮಂಗಳವಾರ ವಿವಿಧ ದಲಿತ ಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಕರೆ ಕೊಟ್ಟಿದ್ದ ತಾಳಿಕೋಟಿ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.  

ಪಟ್ಟಣದಲ್ಲಿ ಬೆಳಿಗ್ಗೆ 8 ಗಂಟೆಯಿಂದ ಸಂಜೆ 6:00 ವರೆಗೆ ಎಲ್ಲಾ ವ್ಯಾಪಾರ ವಹಿವಾಟಗಳು,ಸರ್ಕಾರಿ ಖಾಸಗಿ ಶಾಲಾ ಕಾಲೇಜುಗಳು ಮುಚ್ಚಲ್ಪಟ್ಟಿದ್ದವು.ಆಸ್ಪತ್ರೆ ಓಷಧ ಅಂಗಡಿ ವೈದ್ಯಕೀಯ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಿದವು.ಇಡೀ ಪಟ್ಟಣ ಸ್ತಬ್ಧಗೊಂಡು ಬಂದ್ ಸಂಪೂರ್ಣ ಯಶಸ್ವಿ ಯಾಯಿತು. ಸಂಜೆ 6:00 ಘಂಟೆ ಬಳಿಕ ಮತ್ತೆ ಎಲ್ಲಾ ವ್ಯಾಪಾರ ವಹಿವಾಟಗಳು ಆರಂಭವಾಗಿ ಪಟ್ಟಣ ಮತ್ತೆ ಸಹಜ ಸ್ಥಿತಿಗೆ ಮರಳಿತು. ಮುಂಜಾನೆ ಇಂದಲೇ ಅಂಬೇಡ್ಕರ್ ಭವನದ ಹತ್ತಿರ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಕೈಯಲ್ಲಿ ಡಾ.ಅಂಬೇಡ್ಕರ್ ಅವರ ಭಾವಚಿತ್ರದ ಪ್ಲೇ ಕಾರ್ಡ್‌ ಹಿಡಿದುಕೊಂಡು ಶ್ರೀ ಬಸವೇಶ್ವರ ವೃತ್ತದಲ್ಲಿ ಘೋಷಣೆಗಳನ್ನು ಕೂಗಿದರು.  

ಅಮಿತ್ ಶಾ ಅವರ ಅಣಕು ಶವ ಯಾತ್ರೆಯನ್ನು ನಡೆಸಿ ಪ್ರತಿಭಟನಾಕಾರರು ಎಲ್ಲರ ಗಮನ ಸೆಳೆದರು.ಅಲ್ಲಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಅಂಬೇಡ್ಕರ್ ಸರ್ಕಲ್, ಅಂಬಾಭವಾನಿ ಮಂದಿರ, ಕತ್ರಿ ಬಜಾರ್, ಶಿವಾಜಿ ಸರ್ಕಲ್, ಮಹಾರಾಣಾ ಪ್ರತಾಪ ಸಿಂಹ ಸರ್ಕಲ್,ಬಸ್ ನಿಲ್ದಾಣ ಮಾರ್ಗವಾಗಿ ಮತ್ತೇ ಬಸವೇಶ್ವರ ವೃತ್ತಕ್ಕೆ ತಲುಪಿ ಅಲ್ಲಿ ಬಹಿರಂಗ ಸಭೆಯಾಗಿ ಮಾರ​‍್ಪಟಟಿತು.ಅಲ್ಲಿ ಪ್ರತಿಭಟನಾಕಾರರು ಅಮಿತ್ ಶಾ ಅವರ ಪ್ರಕೃತಿ ಧಹಿಸಿ ಟೈರ್ ಸುಟ್ಟು ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಬಹಿರಂಗ ಸಭೆಯಲ್ಲಿ ಮಾತನಾಡಿದ ಯುವ ಮುಖಂಡ ಜೈ ಭೀಮ್ ಮುತ್ತಗಿ ಅವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಕೇಂದ್ರ ಸಚಿವ ಅಮಿತ್ ಶಾ ದಲಿತ ವಿರೋಧಿ ಮಾತ್ರವಲ್ಲ ಸಂವಿಧಾನ ವಿರೋಧಿ ವ್ಯಕ್ತಿ, ಅವರ ಈ ಉದ್ಧಟತನವನ್ನು ದಲಿತ ಸಮುದಾಯ ಎಂದೂ ಸಹಿಸುವುದಿಲ್ಲ,ಅವರ ಈ ಹೇಳಿಕೆಯನ್ನು ಜಿಲ್ಲೆಯ ಸಂಸದರಾಗಲಿ ಅಥವಾ ಇತರ ಜನ ಪ್ರತಿನಿಧಿಗಳಾಗಲಿ ಖಂಡಿಸದೆ ಇರುವುದು ದುಃಖದ ಸಂಗತಿ ಇದರ ಉತ್ತರವನ್ನು ನಾವು ಬರಲಿರುವ ದಿನಗಳಲ್ಲಿ ನೀಡುತ್ತೇವೆ ಎಂದ ಅವರು ಪ್ರಧಾನ ಮಂತ್ರಿ ಮೋದಿಯವರು ಇಲ್ಲಿವರೆಗೆ ಅವರ ರಾಜೀನಾಮೆಯನ್ನು ಪಡೆಯದೆ ಇರುವುದು ಇವರಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ ಎಂದು ತೋರಿಸುತ್ತದೆ, ಆದಷ್ಟು ಬೇಗ ಅವರ ರಾಜಿನಾಮೆ ಪಡೆದು ಅವರನ್ನು ಸಚಿವ ಸಂಪುಟದಿಂದ ವಜಾ ಗೊಳಿಸಬೇಕು, ಅವರ ಸಂಸತ್ ಸದಸ್ಯತ್ವವನ್ನೂ ರದ್ದುಗೊಳಿಸಬೇಕು ಹಾಗೂ ಅಮಿತ್ ಶಾ ಅವರು ಇಡೀ ದೇಶದ ಜನತೆಗೆ ಕ್ಷಮೆ ಯಾಚಿಸಬೇಕು ಅವರು ಹೀಗೆ ಮಾಡದೇ ಹೋದರೆ ಮುಂದಿನ ದಿನಗಳಲ್ಲಿ ಇದಕ್ಕಿಂತಲೂ ಉಗ್ರವಾದ ಹೋರಾಟವನ್ನು ನಾವು ನಡೆಸಬೇಕಾಗುತ್ತದೆ ಎಂದ ಅವರು ಇಂದಿನ ಬಂದ್ ಯಶಸ್ವಿಗೆ ಸಹಕರಿಸಿದ ಪಟ್ಟಣದ ಸರ್ವ ಸಮಾಜದ ಗಣ್ಯರಿಗೆ ಹಾಗೂ ಸೂಕ್ತ ಪೊಲೀಸ್ ಬಂದೋಬಸ್ತ್‌ ಕಲ್ಪಿಸಿದ ಪೊಲೀಸ್ ಇಲಾಖೆಗೂ ಒಕ್ಕೂಟವು ಋಣಿಯಾಗಿದೆ ಎಂದರು. 

ಇದೇ ಸಂದರ್ಭದಲ್ಲಿ ಡಿಎಸ್‌ಎಸ್ (ನಾಗವಾರ)ಬಣದ ರಾಜ್ಯ ಸಂಚಾಲಕ ಲಕ್ಷ್ಮಿ ನಾರಾಯಣ ಅವರು ನಿಧನರಾದ ಹಿನ್ನಲೆ ಅವರಿಗೆ ಒಕ್ಕೂಟದ ವತಿಯಿಂದ ಒಂದು ನಿಮಿಷದ ಮೌನ ಆಚರಿಸಿ ಶ್ರದ್ಧಾಂಜಲಿ ಅರ​‍್ಿಸಲಾಯಿತು. ನಂತರ ತಹಸಿಲ್ದಾರ್ ಕೀರ್ತಿ ಚಾಲಕ್ ಅವರ ಮೂಲಕ ಗೌರವಾನ್ವಿತ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.  

ಈ ಸಮಯದಲ್ಲಿ ವಿವಿಧ ದಲಿತ ಪರ ಸಂಘಟನೆಗಳ ಒಕ್ಕೂಟದ ಗೌರವ ಅಧ್ಯಕ್ಷರಾದ ಎಸ್‌.ಬಿ.ಕಟ್ಟಿಮನಿ,ಅಧ್ಯಕ್ಷ ಮುತ್ತಪ್ಪ ಚಮಲಾಪೂರ,ಉಪಾಧ್ಯಕ್ಷ ಬಸವರಾಜ ಕಟ್ಟಿಮನಿ, ಪ್ರಧಾನ ಕಾರ್ಯದರ್ಶಿ ದೇವೇಂದ್ರ ಹಾದಿಮನಿ, ಕಾರ್ಯದರ್ಶಿ ನಾಗೇಶ್ ಕಟ್ಟಿಮನಿ, ಮಹೇಶ ಚಲವಾದಿ, ಸಿದ್ದು ಬಾರಿಗಿಡದ, ಮುಸ್ಲಿಂ ಸಮಾಜದ ಮುಖಂಡ ಅಲ್ಲಾಭಕ್ಷ ನಮಾಜಕಟ್ಟಿ, ಎಂ.ಆರ್‌.ಮಕಾನದಾರ, ಮೋದಿನಸಾ ನಗಾರ್ಚಿ, ಗುರುರಾಜ ಗುಡಿಮನಿ, ಶಾಂತಪ್ಪ ತಮ್ಮದಡ್ಡಿ, ರವಿ ಕಟ್ಟಿಮನಿ, ಗುರುಪ್ರಸಾದ್ ಗೊಟಖಂಡಕಿ ಹಾಗೂ ತಾಲೂಕಿನ ದಲಿತ ಸಮಾಜದ ಮುಖಂಡರು ಹಿರಿಯರು ಇದ್ದರು.