ಲೋಕದರ್ಶನ ವರದಿ
ಬೆಳಗಾವಿ17: ವ್ಯಬಿಚಾರ ಅಪರಾಧವಲ್ಲ ಎಂಬ ಸುಪ್ರೀಂ ಕೋಟರ್ಿನ ತೀಪರ್ು ಭಾರತೀಯ ಸಂಸ್ಕೃತಿಯ ಮೂಲಕ್ಕೆ ಪೆಟ್ಟಾಗಿದ್ದು ಅದನ್ನು ಮರು ಪರಿಶೀಲಿಸ ಬೇಕಾಗಿರುವುದು ಅಗತ್ಯವಾಗಿದೆ ಎಂದು ರೇಲೈ ಮೇಲ್ಸೆತುವೆ ಬಳಿ ಇರುವ ವಿದ್ಯಾವಿಹಾರ ನವವೃಂದಾವನ ಶ್ರೀ ರಾಘವೇಂದ್ರ ಶ್ರೀಗಳ ಮಠದ ಕುಲಪತಿ ಪಂ,ವಿಜಯೇಂದ್ರ ಶಮರ್ಾ ಅವರು ಅಭಿಪ್ರಾಯ ಪಟ್ಟರು.
ನಾಡಹಬ್ಬ ಉತ್ಸವ ಸಮಿತಿ ವತಿಯಿಂದ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಸಮಿತಿ ವತಿಯಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಮಯರ್ಾದಾ ಪುರುಷೋತ್ತಮ ಶ್ರೀರಾಮಚಂದ್ರನ ಏಕಪತ್ನಿವೃತ ಜಗತ್ತಿಗೆ ಮಾದರಿಯಾಗಿದೆ. ಗೃಹ ಮುಚ್ಚತೆ ಯತ್ರ ನಾರ್ಯಂತೊ ಪೂಜ್ಯಂತೆ ಎಂಬುದು 5ಸಾವಿರ ವರ್ಷಗಳ ಹಿಂದೆ ಮನು ಮಹಾರಾಜರು ಹೇಳಿದ ದೃಢ ನೀತಿಯ ಕಾಯ್ದೆಯಾಗಿದೆ. ಇಂಥ ಆದರ್ಶಗಳ ರಾಷ್ಟ್ರದಲ್ಲಿ ಸವರ್ೋಚ್ಚ ನ್ಯಾಯಲಯದ ಆದೇಶ ದುರದೃಷ್ಟಕರವಾಗಿದೆ. ಇದನ್ನು ಪುನಃ ಪರಿಶೀಲನೆ ಮಾಡುವುದು ಸುಶಿಕ್ಷಿತರ, ಸುಸಂಸ್ಕ್ರತರ, ಭಾರತೀಯ ಸನಾತನ ಸಂಸ್ಕೃತಿಯ ಆರಾಧಕರ ಧ್ಯೇಯವಾಗಬೇಕು.
ಸ್ತ್ರೀ ಭೋಗ ವಸ್ತುವಲ್ಲ. ಅವಳು ಭುನೇಶ್ವರಿದೇವಿಯ ಪ್ರತಿಬಿಂಬವಾಗಿದ್ದಾಳೆ. ಮಾನನೀಯ ಸ್ತ್ರೀಯರಿಂದಲೇ ದೇಶ ರಕ್ಷಿತವಾಗಿದೆ. ಈಗಲು ಸುರಕ್ಷಿತವಾಗಿಡಲು ಎಲ್ಲ ಮಾತೆಯರ ಆಶಯ ಕರ್ತವ್ಯ ಆಗಿದೆ. ಕಿತ್ತೂರು ರಾಣಿ ಚೆನ್ನಮ್ಮಾ, ಝಾನ್ಸಿರಾಣಿ ಲಕ್ಷ್ಮೀಭಾಯಿ ಸೇರಿದಂತೆ ಅನೇಕ ಮಹಿಳೆಯರು ಸಂಸ್ಕೃತಿಯ ಮೂಲವಾದ ಈ ದೇಶದ ಅಸ್ತಿತ್ವಕ್ಕೆ ಪ್ರಾಣಾರ್ಪಣೆ ಮಾಡಿದ್ದಾರೆ. ಭಾರತೀಯ ಸಂವಿಧಾನದಲ್ಲಿ ಈ ಕುರಿತು ಸ್ಪಷ್ಟ ಅಳವಡಿಸಲಾಗಿದೆ.
270 ಜನರ ಸಮಿತಿಯ ಸಂವಿಧಾನದಲ್ಲಿ ಭಾರತೀಯ ಪರಂಪರೆ ದ್ಯೋತಕವಾದ ಶ್ರೀ ಕೃಷ್ಣ, ಶ್ರೀರಾಮ, ಕಬೀರ, ಅಕ್ಬರ ಸೇರಿದಂತೆ ಅನೇಕ ಮಹಾಪುರುಷರ ಚಿತ್ರಗಳಿವೆ. ಇಂಥ ಮಹಾನ್ ಗ್ರಂಥಕ್ಕೆ ನೆಹರು, ಅಂಬೇಡ್ಕರ್ ಸೇರಿದಂತೆ ಅನೇಕ ಮಹಾನುಭಾವರ ಸವರ್ಾನುಮತದಿಂದ ಹಸ್ತಾಕ್ಷರ ಮಾಡಿದ್ದಾರೆ. ಇತ್ತೀಚಿನ ಸುಪ್ರೀಂ ತೀಪರ್ು ಸಂವಿಧಾನದ ವಿಡಂಭನೆಯಾಗಿದ್ದು ಇದನ್ನು ಮರುಪರಿಶೀಲಿಸುವುದು ಅಗತ್ಯವಾಗಿದೆ ಎಂದು ವಿಜಯೇಂದ್ರ ಶಮರ್ಾ ಅಭಿಪ್ರಾಯ ಪಟ್ಟಿದ್ದಾರೆ.
ಕಾರ್ಯಕ್ರಮದಲ್ಲಿ ಕಾರಂಜಿಮಠದ ಶ್ರೀ ಗುರುಸಿದ್ಧಮಹಾಸ್ವಾಮಿಗಳು, ಸಂಸದ ಸುರೇಶ ಅಂಗಡಿ, ಶಾಸಕ ಅನಿಲ ಬೆನಕೆ, ಡಾ.ರಾಜಶೇಖರ, ಸಿ.ಕೆ.ಜೋರಾಪೂರೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.