ಕೆ.ಎಸ್.ನಾಗರಾಜ
ರಾಣೇಬೆನ್ನೂರು: ಮೇ.24: ಕರೋನಾ ವೈರಸ್ ಹಾವಳಿಯಿಂದ ಭಯಭೀತಗೊಂಡಿರುವ ವಾಣಿಜ್ಯ ನಗರದ ನಾಗರೀಕರಿಗೆ "ಸಂಡೇ ಲಾಕ್ಡೌನ್ ಬಹುತೇಕ ಯಶಸ್ವಿ ಕಂಡಿದೆ. ಶುಕ್ರವಾರದಿಂದಲೇ ಪೋಲೀಸ್ ಇಲಾಖೆ ಸಾಮೂಹಿಕವಾಗಿ ಧ್ವನಿ ವರ್ಧಕದ ಮೂಲಕ ಸಂಡೇ ಲಾಕ್ಡೌನ್ ಯಾರೂ ಹೊರಗಡೆ ಬಾರದೇ, ಸ್ವಯಂ ಗೃಹದಿಗ್ಭಂಧನದಲ್ಲಿ ಇರಬೇಕೆಂಬ ಸಂದೇಶಕ್ಕೆ ಬೆಲೆ ನೀಡಿರುವ ನಾಗರೀಕರು ಅಗತ್ಯ ವಸ್ತುಗಳನ್ನು ಸಹ ಖರೀದಿ ಮಾಡಲು ಧಾವಿಸದೇ ಸಹಕರಿಸಿರುವುದು ಎಲ್ಲೆಡೆಯೂ ಕಂಡಿಬಂದಿತು.
ಕಳೆದ 64 ದಿವಸಗಳಿಂದ ಕರೋನಾ ವೈರಸ್ ಭೀತಿಯಿಂದ ಕಂಗೆಟ್ಟಿದ್ದ, ನಾಗರೀಕರಿಗೆ ಕಳೆದ 10 ದಿವಸಗಳಷ್ಟೇ ಹಿಂದಷ್ಟೇ ರಾಜ್ಯ ಸಕರ್ಾರವು ರಾಜ್ಯದಾದ್ಯಂತ ಲಾಕ್ಡೌನ್ನಲ್ಲಿ ಸಡಿಲೀಕರಣಗೊಳಿಸಿದ್ದು, ಇದರಿಂದ ಕಿರಾಣಿ, ಬೀದಿ ವ್ಯಾಪಾರಸ್ಥರು, ಹೊಟೇಲ್ ಉದ್ಯಮಿಗಳು ಸೇರಿದಂತೆ ಮತ್ತಿತರೆ ವ್ಯಾಪಾರಿಗಳು ಇರುವ 12 ತಾಸುಗಳ ಅವಧಿಯಲ್ಲಿಯೇ ತಮ್ಮ ವಹಿವಾಟು ನಡೆಸುತ್ತಿದ್ದರು. ಮುಂಜಾಗೃತಾಕ್ರಮವಾಗಿ ಇಲ್ಲಿನ ತಾಲೂಕಾಡಳಿತ ಮತ್ತು ಪೋಲೀಸ್ ಇಲಾಖೆ ಮುಂಜಾನೆ 7 ರಿಂದ ಸಂಜೆ 7 ರವರೆಗೆ ಅವಕಾಶ ಇದ್ದರೂ ಸಹ 6 ಗಂಟೆಯಿಂದಲೆ ಧ್ವನಿವರ್ಧಕದಲ್ಲಿ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸಕರ್ಾರದ ಆದೇಶದಂತೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕಡ್ಡಾಯವಾಗಿ ಸ್ಯಾನಿಟರೈಸ್ ಬಳಸಿ ತಮ್ಮ ವ್ಯಾಪಾರ ವಹಿವಾಟು ನಡೆಸುತ್ತಿರುವುದು ಸಗಟು ಜವಳಿ ಮಾರುಕಟ್ಟೆ ಎಂದೇ ಖ್ಯಾತಿ ಹೊಂದಿರುವ ಇಲ್ಲಿನ ದೊಡ್ಡಪೇಟೆಯ ಮಾರ್ವಾಡಿ ಸಮುದಾಯದ ಅಂಗಡಿಗಳಲ್ಲಿ ಪಾಲಿಸುತ್ತಿರುವುದು ಮತ್ತು ಗ್ರಾಹಕರ ಹೆಸರು, ವಿಳಾಸ ದೂರವಾಣಿ ಸಂಖ್ಯೆ ಪಡೆಯುತ್ತಿರುವುದು ತಾಲೂಕಾ ಆಡಳಿತ ಪ್ರಸಂಶೆಗೆ ಪಾತ್ರವಾಗಿದ್ದಾರೆ. ಆದರೆ, ಎಂ.ಜಿ.ರಸ್ತೆ, ಜನತಾ ಬಜಾರ್, ತರಕಾರಿ ಮಾರುಕಟ್ಟೆ , ನೆಹರು ಮಾರುಕಟ್ಟೆ, ಉಳ್ಳಾಗಡ್ಡಿ ಮಾರುಕಟ್ಟೆ ಸೇರಿದಂತೆ ಜನಜಂಗುಳಿ ಸೇರುವ ಪ್ರದೇಶಗಳಲ್ಲಿ ಈ ನಿಯಮಗಳು ಅನ್ವಯಿಸುವುದಿಲ್ಲವೇ? ಎನ್ನುವುದು ಬಹುತೇಕ ಪ್ರಜ್ಞಾವಂತ ನಾಗರೀಕರ ಪ್ರಶ್ನೆಯಾಗಿದೆ.
ಮುಂಜಾನೆ 7 ಗಂಟೆಗೆ ಆರಂಭಿಸುವ ತರಕಾರಿ ವ್ಯಾಪಾರಿಗಳು ಅಗತ್ಯ ದಿನಸಿ ವಸ್ತುಗಳ ಅಂಗಡಿಕಾರರು, ಇರುವಷ್ಟು ಸಮಯದಲ್ಲಿಯೇ ತಮ್ಮ ವ್ಯವಹಾರ ಮಾಡುತ್ತಿರುವುದು ಎಲ್ಲಡೆಯೂ ಕಂಡುಬರುತ್ತಿದೆ. ಆದರೆ, ಕೆಲವು ಕಡೆ ಸಮಯದ ನಿಯಮವೂ ಮೀರಿ ತಮ್ಮ ವ್ಯಾಪಾರ ವಹಿವಾಟು ಎಗ್ಗಿಲ್ಲದೇ, ನಡೆಸುತ್ತಿರುವುದನ್ನು ಕಾಣಬಹುದು.
ಕಾನೂನು ಎಲ್ಲರಿಗೂ ಒಂದೇ ಅವರಿಗೊಂದು ನ್ಯಾಯ ಇವರಿಗೊಂದು ನ್ಯಾಯ ಏಕೆ ಮಾಡಬೇಕು ಎನ್ನುವುದು ಸಾರ್ವಜನಿಕರ ಮೌನ ಪ್ರತಿಭಟನೆಯ ಮಾತುಗಳು ಅಲ್ಲಲ್ಲಿ ಕೇಳಿಬರುತ್ತಲಿದೆ. ಪೋಲೀಸ್ ಇಲಾಖೆ ಬಡವರು-ಬಲ್ಲಿದರು ಎನ್ನುವ ತಾರತಮ್ಯ ನೀತಿಯನ್ನು ಬಿಟ್ಟು ಎಲ್ಲರಿಗೂ ಒಂದೇ ಕಾನೂನು ಎನ್ನುವುದನ್ನು ಪರಿಪಾಲಿಸಲು ಮುಂದಾಗಬೇಕು ಎಂದು ಕೆಲವು ಬಡಾವಣೆಗಳಲ್ಲಿ ನಡೆಯುತ್ತಿರುವ ವ್ಯಾಪಾರ ಚಟುವಟಿಕೆಯಿಂದ ಬಂಡಾಯವೆದ್ದ, ನಾಗರೀಕರಿಂದ ಕೇಳಿ ಬರುವ ಮಾತಾಗಿದೆ.
ವಾಣಿಜ್ಯ ನಗರದ ಜನನೀಬೀಡ ಪ್ರದೇಶವೆಂದು ಗುರುತಿಸಲ್ಪಡುವ ಎಂ.ಜಿ.ರಸ್ತೆ, ಜನತಾ ಬಜಾರ್, ನೆಹರು ಮಾರುಕಟ್ಟೆ, ಕವಲಪೇಟೆ, ದೇವರಗುಡ್ಡ ರಸ್ತೆ, ಬಸವನಗುಡಿ ನಗರ, ದೊಡ್ಡಪೇಟೆ, ಮೇಡ್ಲೇರಿ ರಸ್ತೆ, ಬಸ್ಟ್ಯಾಂಡ್ ರಸ್ತೆ, ವಾಗೀಶ ನಗರ, ರಾಜೇಶ್ವರಿ ನಗರ, ಪಿ.ಬಿ.ರಸ್ತೆ, ಗೌರಿಶಂಕರ ನಗರ, ಕುರುಬಗೇರಿ ರಸ್ತೆ ಸೇರಿದಂತೆ ಮತ್ತಿತರೆ ಕಡೆಗಳಲ್ಲಿ 6 ಗಂಟೆಯಿಂದಲೇ ಆರಂಭವಾಗುತ್ತಿದ್ದ, ತರಕಾರಿ ವ್ಯಾಪಾರಿಗಳು ಸಂಡೇ ಲಾಕ್ಡೌನ್ಗೆ ಗೌರವ ನೀಡಿದ ವ್ಯಾಪಾರಿಗಳು, ಇಂದು ಯಾವುದೇ ಅಂಗಡಿಗಳನ್ನು ತೆರೆಯದೇ ಇರುವುದು ಸಾರ್ವಜನಿಕರ ಮತ್ತು ಆಡಳಿತದ ಹಾಗೂ ಪೋಲೀಸ್ ಇಲಾಖೆಯ ಪ್ರಸಂಶೆಗೆ ಭಾಜನರಾಗಿದ್ದಾರೆ.
ಕರೋನಾ ವೈರಸ್ ಘಟನೆಯಿಂದ ಜನಸಾಮಾನ್ಯರು ಅನೇಕ ರೀತಿಯಲ್ಲಿ ಆಥರ್ಿಕ ಸಮಸ್ಯೆಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಅಲ್ಲಲ್ಲಿ ಲಯನ್ಸ್ ಲಿಯೋ ಕ್ಲಬ್, ರೋಟರಿ ಕ್ಲಬ್, ಅಲ್ ಇಮ್ದಾದ್ ವೆಲ್ಫರ್ ಸೊಸೈಟಿ, ಸೇರಿದಂತೆ ಮತ್ತಿತರೆ ಸಂಘ ಸಂಸ್ಥೆಗಳು, ನಗರದ ಗಣ್ಯರು ತಮ್ಮ ಸಹಾಯ ಹಸ್ತ ಚಾಚುತ್ತಿರುವುದು ನೀರಿನಲ್ಲಿ ಮುಳುಗುವವನಿಗೆ ಹುಲ್ಲುಕಡ್ಡಿಯ ಆಸರೆ, ಎಂಬಂತಾಗಿದೆ.