ಪ್ರತ್ಯೇಕ ಉತ್ತರ ಕನರ್ಾಟಕ ರಾಜ್ಯ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಕಟ್ಟೇಗೌಡ್ರಗೆ ಸನ್ಮಾನ


ಲೋಕದರ್ಶನ ವರದಿ

ಹಾವೇರಿ: ಪ್ರತ್ಯೇಕ ಉತ್ತರ ಕನರ್ಾಟಕ ರಾಜ್ಯ ಹೋರಾಟ ಸಮಿತಿಯ ನೂತನ ರಾಜ್ಯಾಧ್ಯಕ್ಷ ವಿ.ಎಫ್. ಕಟ್ಟೇಗೌಡ್ರ ಅವರಿಗೆ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳು ಸನ್ಮಾನಿಸಿದರು. 

ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿರುವ ವಕೀಲರ ಕೊಠಡಿಯಲ್ಲಿ ನಡೆದ ಸಭೆಯಲ್ಲಿ ಸನ್ಮಾನಿಸಲಾಯಿತು. 

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ವಕೀಲರ ಸಂಘದ ಮಾಜಿ ಅಧ್ಯಕ್ಷ ಎನ್.ಎಸ್.ಪಾಟೀಲ ಅವರು, ಉತ್ತರ ಕನರ್ಾಟಕ ಪ್ರತ್ಯೇಕ ಹೋರಾಟ ಇಂದು ಅನಿವಾರ್ಯವಾಗಿದೆ. ಈ ಹೋರಾಟಕ್ಕೆ ಕಟ್ಟೇಗೌಡ್ರರಂತಹ ಹಿರಿಯ ವಕೀಲರು ಮುಂದಾಳತ್ವ ವಹಿಸಿದ್ದು, ಹೆಮ್ಮೆಯ ವಿಷಯವಾಗಿದೆ. ಈ ಹೋರಾಟ ಯಶಸ್ವಿಯಾಗಲು ನಾವೇಲ್ಲರೂ ಸಹಕಾರ ನೀಡುತ್ತೇವೆ.  ಇದರ ಜೊತೆಗೆ ರಾಜ್ಯಾಧ್ಯಕ್ಚ ಕಟ್ಟೇಗೌಡ್ರು, ಉತ್ತರ ಕನರ್ಾಟಕ ಭಾಗದ 13 ಜಿಲ್ಲೆಗಳಿಗೆ ಭೇಟಿ, ನೀಡಿ ಅಲ್ಲಿನ ವಕೀಲರ ಸಂಘ ವಿಶ್ವಾಸ ಪಡೆದುಕೊಳ್ಳುವ ಮೂಲಕ ಹೋರಾಟಕ್ಕೆ ಶಕ್ತಿ ತುಂಬಬೇಕು ಎಂದು ತಿಳಿಸಿದರು. 

ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರತ್ಯೇಕ ಉತ್ತರ ಕನರ್ಾಟಕ ರಾಜ್ಯ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ವಿ.ಎಫ್.ಕಟ್ಟೇಗೌಡ್ರ, ಉತ್ತರ ಕನರ್ಾಟಕ ಪ್ರತ್ಯೇಕ ರಾಜ್ಯ ಹೋರಾಟ ಒಂದು ವ್ಯವಸ್ಥಿತವಾಗಿ ಮಾಡಬೇಕು. ಅದಕ್ಕೆ ಒಂದು ಹೋರಾಟ ಸಮಿತಿಯನ್ನು ನೊಂಧಣಿ ಮಾಡಿಸಬೇಕು.ಆದರೆ, ಈ ಹಿಂದೆ ರಾಜ್ಯಾಧ್ಯಕ್ಷರಾಗಿದ್ದ ಕೊತಂಬರಿ ವಕೀಲರು ಹೋರಾಟ ಸಮಿತಿಯನ್ನು  ನೊಂಧಣಿ ಮಾಡಿಸದೇ, ಆ. 2 ಬಂದ್ ಗೆ ಕರೆ ನೀಡಿದ್ದರು, ಬಳಿಕ ಬಂದ್ ಹಿಂದಿನ ದಿನ ಕರೆ ಕೊಟ್ಟಿದ್ದ ಬಂದ್ ವಾಪಾಸ್ಸು ಪಡೆಯುವ ಮೂಲಕ ಈ ಭಾಗದ ಜನರಿಗೆ ನೋವು ತರುವ ಕೆಲಸ ಮಾಡಿದರು.  ಆ ಕಾರಣದಿಂದ ನಾವು ಕರೆ ನೀಡಿದ್ದ ಬಂದ್ ಹಾಗೂ ಪ್ರತಿಭಟನೆ ಯಶಸ್ವಿಯಾಗುವಂತೆ  ಮಾಡಿದೆವು. 

ಆ ಹೋರಾಟದಲ್ಲಿ ಭಾಗವಹಿಸಿ ರೈತರು, ವಿವಿಧ ಸಂಘಟನೆಗಳ ಮುಖಂಡರು ತಮ್ಮನ್ನು ಹೋರಾಟ ಸಮಿತಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿದರು. ಆ ಜನರ ನಂಬಿಕೆಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುವೆ. ಅದರ ಭಾಗವಾಗಿ ಹೋರಾಟ ಸಮಿತಿ ನೊಂದಣಿಯಾದ ಬಳಿಕ ಎಲ್ಲ 13 ಜಿಲ್ಲೆಗಳಿಗೆ ಸಂಚರಿಸಿ ಸಂಘಟನೆ ಹಾಗೂ ಜಾಗೃತಿ ಮೂಡಿಸುವೆ. ಹೈ-ಕನರ್ಾಟಕ ಭಾಗದ ಜನರಲ್ಲಿ 371(ಜೆ) ತೊಂದರೆಯಾಗುತ್ತದೆ ಎಂಬ ಕಲ್ಪನೆ ಇದೆ. ಆದರೆ, ಪ್ರತ್ಯೇಕ ರಾಜ್ಯ ಅಸ್ತಿತ್ವಕ್ಕೆ ಬಂದರೆ, ಅದಕ್ಕೆ ಯಾವ ತೊಂದರೆಯಾಗಲ್ಲ. ಉತ್ತರ ಕನರ್ಾಟಕ ಪ್ರತ್ಯೇಕ ರಾಜ್ಯ ಅಸ್ತಿತ್ವಕ್ಕೆ ಬಂದರು 371(ಜೆ) ಪ್ರಕಾರ ಶೇ. 10 ಉದ್ಯೋಗ ಮೀಸಲಾತಿ ದೊರೆಯಲಿದೆ. ಜೊತೆಗೆ ಉಳಿದ ಶೇ.90 ರಷ್ಟು ಭಾಗದಲ್ಲಿ ಮೀಸಲಾತಿ ದೊರೆಯಲಿದೆ. ಅದರ ಬಗ್ಗೆ ಆ ಭಾಗದ ಜನರೊಂದಿಗೆ ಸಮಾಲೋಚನೆ ನಡೆಸುವೆ ಎಂದು ತಿಳಿಸಿದರು.

   ಈ ಸಂದರ್ಭದಲ್ಲಿ ಜಿಲ್ಲಾ ವಕೀಲರ ಸಂಘದ ಕಾರ್ಯದಶರ್ಿ ನಾಯ್ಡು, ಎಂ.ವಿ.ಕುಂಟೆ, ಕಳ್ಳಿಮನಿ, ಸಿ.ಟಿ.ಜಾವಗಲ್, ಪಿ.ಆರ್.ಮುಂಜೋಜಿ, ಎನ್.ಬಿ.ಕಾಯಕದ, ಸಿಂಧೇ, ಎ.ಎಚ್.ಕುಲಕಣರ್ಿ, ಎನ್.ಎಸ್.ಪ್ರಕಾಶ, ವಿ.ಎಲ್.ಅಕರ್ಾಚಾರಿ, ಆಡೂರ ಸೇರಿದಂತೆ ಮುಂತಾದವರು ಹಾಜರಿದ್ದರು.