ಸರಳತೆಯ ಸಾಧಕಿ ಸುಧಾ ಮೂರ್ತಿ

ಸಮಾಜದಲ್ಲಿ ಶೋಷಿತ ವರ್ಗದವರಿಗೆ ನೆರವು ನೀಡುವ ಉದ್ದೇಶದಿಂದ ಶಿಕ್ಷಣ, ಗ್ರಾಮೀಣ ಅಭಿವೃದ್ಧಿ, ಆರೋಗ್ಯ ಸೇವೆ ಹಾಗೂ ನಿರ್ಗತಿಕರ ಪುನರ್ವಸತಿ ಕ್ಷೇತ್ರಗಳಲ್ಲಿ ಪ್ರತಿಷ್ಠಾನದ ಮೂಲಕ ಸುಧಾ ಮೂತರ್ಿ ಅವರು ಮಾಡುತ್ತಿರುವ ಸೇವೆ ಅನುಪಮವಾದದು. ಅವರು ಇನ್ಫೋಸಿಸ್ ಪ್ರತಿಷ್ಠಾನದ ಮೂಲಕ ಮಾಡುತ್ತಿರುವ ಸಮಾಜಸೇವೆ ಬಹುಮುಖಿ ಮತ್ತು ಬಹುರೂಪಿಯಾದದ್ದು. ಅವರು ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಸಾಹಿತ್ಯಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿ ಪ್ರಖ್ಯಾತರಾಗಿದ್ದಾರೆ. ಸಾಹಿತಿ ಸುಧಾ ಮೂತರ್ಿಯವರ ಸರಳತೆ ಅವರ ವ್ಯಕ್ತಿತ್ವಕ್ಕೆ ವಿಶೇಷ ಮೆರುಗನ್ನು ನೀಡಿದೆ.

ಹಾವೇರಿ ಜಿಲ್ಲೆಯ ಶಿಗ್ಗಾಂವದ ಕುಲಕಣರ್ಿ ಮೆನೆತನದಲ್ಲಿ 1950ರ ಅಗಸ್ಟ್ 19ರಂದು ಸುಧಾರವರು ಜನಿಸಿದರು. ತಂದೆ ರಾಮಚಂದ್ರ ಕುಲಕಣರ್ಿ ತಾಯಿ ವಿಮಲಾ ಕುಲಕಣರ್ಿ. ಅವರ ತಂದೆಯವರು ಹುಬ್ಬಳ್ಳಿಯ ಕೆ. ಎಮ್. ಸಿ. ಯಲ್ಲಿ ಸ್ತ್ರೀರೋಗತಜ್ಞರು ಮತ್ತು ಪ್ರಾಧ್ಯಾಪಕರು. ಸುಧಾರವರು ಪ್ರಾಥಮಿಕ ಶಿಕ್ಷಣವನ್ನು ಶಿಗ್ಗಾಂವದಲ್ಲಿಯೇ ಪೂರೈಸಿದರು. 1966ರಲ್ಲಿ ಹುಬ್ಬಳ್ಳಿಯ ಗಲ್ಸರ್್ ಇಂಗ್ಲೀಷ್ ಸ್ಕೂಲ್ನಿಂದ ಎಸ್.ಎಸ್.ಎಲ್.ಸಿ. ಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾದರು. 1972ರಲ್ಲಿ ಬಿ. ವಿ. ಬಿ. ಇಂಜನಿಯರಿಂಗ್ ಕಾಲೇಜಿನಿಂದ ಇಲೆಕ್ಟ್ರಿಕಲ್ ಇಂಜನಿಯರಿಂಗ್ದಲ್ಲಿ ಮೊದಲ ರ್ಯಾಂಕ ಪಡೆದು ಪದವೀಧರೆಯಾದರು. 1974ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಿಂದ ಕಂಪ್ಯೂಟರ್ ಸಾಯನ್ಸ್ನಲ್ಲಿ ಎಂ. ಇ. ಸ್ನಾತಕೋತ್ತರ ಪದವಿಯನ್ನು ಚಿನ್ನದ ಪದಕದೊಂದಿಗೆ ಅತ್ಯುನ್ನತ ಸ್ಥಾನ ಪಡೆದು ತೇರ್ಗಡೆಯಾದರು.

ವಿಶೇಷವೆಂದರೆ ಆಗ ಕಾಲೇಜಿನಲ್ಲಿ 150 ವಿದ್ಯಾಥರ್ಿಗಳಿದ್ದ ತರಗತಿಯಲ್ಲಿ ಸುಧಾ ಅವರು ಒಬ್ಬರೇ ವಿದ್ಯಾಥರ್ಿನಿಯಾಗಿದ್ದರು. ಆ ಕಾರಣಕ್ಕಾಗಿ ಎಲ್ಲ ರೀತಿಯ ಚುಡಾಯಿಸುವಿಕೆಗಳನ್ನು ಧೈರ್ಯದಿಂದ ಎದುರಿಸಿ, ಆತ್ಮವಿಶ್ವಾಸದಿಂದ ಗುರಿಯನ್ನು ತಲುಪಿದರು. ಟಾಟಾ ಸಮೂಹದ ಟೆಲ್ಕೋ ಕಂಪನಿ ಇಂಜನೀಯರ್ಗಳನ್ನು ನೇಮಿಸಿಕೊಳ್ಳಲು ಜಾಹೀರಾತನ್ನು ನೀಡಿತ್ತು. ಆದರೆ ಜಾಹೀರಾತಿನಲ್ಲಿ ಮಹಿಳೆಯರು ಅಜರ್ಿ ಸಲ್ಲಿಸುವದನ್ನು ನಿಷೇಧಿಸಿತ್ತು. ಇದನ್ನು ಕಂಡು ಸುಧಾ ಅವರು ನೇರವಾಗಿ ಕಂಪನಿಯ ಅಧ್ಯಕ್ಷರಿಗೆ ಪ್ರಶ್ನಿಸಿ ಪತ್ರ ಬರೆದರು. ಆಶ್ಚರ್ಯವೆಂದರೆ ಅವರ ಪತ್ರಕ್ಕೆ ಪ್ರತಿಕ್ರಿಯಿಸಿ ಅವರನ್ನು ಸಂದರ್ಶನಕ್ಕೆ ಕರೆದದ್ದೂ ಅಲ್ಲದೇ ಸುಧಾ ಅವರಿಗೆ ಉದ್ಯೋಗವನ್ನು ನೀಡಲಾಯಿತು. ಅವರು ಟೆಲ್ಕೊ ಕಂಪನಿಯಲ್ಲಿ ನೇಮಕಗೊಂಡು, ಪ್ರಥಮ ಮಹಿಳೆಯಾಗಿ ದಾಖಲೆಯನ್ನು ನಿಮರ್ಿಸಿದರು. ಟೆಲ್ಕೊ ಕಂಪನಿಯ ಪುಣೆ, ಮುಂಬಯಿ ಹಾಗೂ ಜಮ್ಶೇಡ್ಪುರ ಶಾಖೆಗಳಲ್ಲಿ ಡೆವಲಪ್ಮೆಂಟ್ ಇಂಜನೀಯರ್ ಆಗಿ ಸುಧಾ ಅವರು ಕಾರ್ಯನಿರ್ವಹಿಸಿದರು. ನಂತರ ಪುಣೆಯ ವಾಲಚಂದ ಗ್ರೂಪ್ ಆಫ್ ಇಂಡಸ್ಟ್ರೀಜನಲ್ಲಿ ಸೀನಿಯರ್ ಸಿಸ್ಟಮ್ಸ್ ಅನಲಿಸ್ಟ್ ಆಗಿ ಕೆಲಕಾಲ ಸೇವೆಸಲ್ಲಿಸಿದರು.

ಸುಧಾ ಕುಲಕಣರ್ಿಯವರು ನಾರಾಯಣ ಮೂತರ್ಿ ಅವರನ್ನು ಅತ್ಯಂತ ಸರಳ ರೀತಿಯಲ್ಲಿ ಮದುವೆಯಾದರು. ಪತಿ ನಾರಾಯಣ ಮೂತರ್ಿಯವರ ಇಚ್ಛೆಗೆ ಅನುಗುಣವಾಗಿ ಹೊಸ ಕಂಪನಿ ಕಟ್ಟಲು ತಾವು ಕೂಡಿಟ್ಟಿದ್ದ ಹತ್ತು ಸಾವಿರ ರೂಪಾಯಿಗಳನ್ನು ನೀಡಿ, ಅವರ ಕನಸನ್ನು ನನಸು ಮಾಡಲು ಅನುವು ಮಾಡಿಕೊಟ್ಟರು. 1996ರಲ್ಲಿ ಇನ್ಫೋಸಿಸ್ ಫೌಂಡೇಶನ್ ಪ್ರಾರಂಭವಾಯಿತು. ಸುಧಾ ಮೂತರ್ಿಯವರು ಬೆಂಗಳೂರಿನ ಇನ್ಫೋಸಿಸ್ ಸಂಸ್ಥೆಯನ್ನು ಪತಿ ನಾರಾಯಣ ಮೂತರ್ಿ ಹಾಗೂ ಅವರ ಜೊತೆಗಾರರ ಸಹಯೋಗದೊಂದಿಗೆ ಕಟ್ಟಿ ಬೆಳೆಸಿದರು. ಸದ್ಯ ಇನ್ಫೋಸಿಸ್ ಸಂಸ್ಥೆಯು ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ  ವಿಶ್ವದ ಅಗ್ರಗಣ್ಯ ಸಂಸ್ಥೆಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ. ವೃತ್ತಿ ಜೀವನ ಆರಂಭಿಸುವ ದಿನಗಳಲ್ಲಿ ವಿಪ್ರೋ ಸಂಸ್ಥೆಯು ಪತಿ ನಾರಾಯಣ ಮೂತರ್ಿ ಅವರಿಗೆ ಕೆಲಸ ನೀಡಲು ನಿರಾಕರಿಸಿತ್ತು. ಇಂದು ನಾರಾಯಣ ಮೂತರ್ಿಯವರು ಸಾವಿರಾರು ಕೋಟಿಯ ಒಡೆಯನಾಗಲು ಸುಧಾ ಮೂತರ್ಿ ಅವರ ತ್ಯಾಗ, ಪ್ರೀತಿ ಮತ್ತು ನಂಬಿಕೆಯೇ ಕಾರಣ ಎನ್ನುವದನ್ನು ಮರೆಯುವಂತಿಲ್ಲ. ಸಾವಿರಾರು ಕೋಟಿ ಒಡತಿಯಾಗಿದ್ದರೂ ಅವರು ಸರಳತೆ, ಸಜ್ಜನಿಕೆಯಿಂದ ಜನರ ಮನಸ್ಸಿಗೆ ಹತ್ತಿರವಾಗುತ್ತಾ ಆದರ್ಶ ವ್ಯಕ್ತಿಯಾಗಿದ್ದಾರೆ.

ಸುಧಾ ಮೂತರ್ಿಯವರು ಸಮಾಜಸೇವೆಯಲ್ಲಿ ತೊಡಗಿಕೊಂಡಿದ್ದು, ಇನ್ಫೋಸಿಸ್ ಪ್ರತಿಷ್ಠಾನದಿಂದ ಶಿಕ್ಷಣ, ಆರೋಗ್ಯ ಸೇವೆ, ಸಾರ್ವಜನಿಕ ಶುಚಿತ್ವ, ಮಹಿಳಾ ಸಬಲೀಕರಣ, ಕಲೆ ಮತ್ತು ಸಂಸ್ಕೃತಿ, ಬಡತನ ನಿವಾರಣೆ ಹೀಗೆ ಎಲ್ಲ ಕ್ಷೇತ್ರಗಳಿಗೂ ಸಮಾಜ ಸೇವೆ ವ್ಯಾಪಿಸಿದೆ. ಅವರು ಪ್ರತಿಷ್ಠಾನದ ಮೂಲಕ ಪ್ರವಾಹ ಪೀಡಿತ ಪ್ರದೇಶಗಳಲ್ಲಿ 2300ಕ್ಕೂ ಹೆಚ್ಚು ಮನೆಗಳನ್ನು ನಿಮರ್ಿಸಿದ್ದಾರೆ. ಅಲ್ಲದೇ ಗ್ರಾಮೀಣ ಪ್ರದೇಶಗಳಲ್ಲಿ 16000ಕ್ಕೂ ಹೆಚ್ಚು ಶೌಚಾಲಯಗಳನ್ನು ಪ್ರತಿಷ್ಠಾನ ನಿಮರ್ಿಸಿದೆ. ರಾಷ್ಟ್ರಕ್ಕಾಗಿ ಅಸುನೀಗಿದ 800 ಯೋಧರ ಕುಟುಂಬಗಳಿಗೆ ಹತ್ತು ಕೋಟಿಗೂ ಮೀರಿದ ಹಣವನ್ನು ನೀಡಿದೆ. ಇತ್ತೀಚಿನ ಕೊರೋನಾ ವೈರಸ್ ಪಿಡುಗಿನ ಸಂದರ್ಭದಲ್ಲಿ ಆಸ್ಪತ್ರೆಗಳಿಗೆ ಪಿ. ಪಿ. ಇ. ಕಿಟ್ಗಳನ್ನು ಒದಗಿಸುವದಕ್ಕಾಗಿ ಅಂದಾಜು 150 ಕೋಟಿ ರೂಪಾಯಿಗಳನ್ನು ನೀಡಿದೆ. ಅವರು ಹಲವಾರು ಅನಾಥಾಶ್ರಮಗಳನ್ನು ಸ್ಥಾಪಿಸಿದ್ದಾರೆ. ಕನರ್ಾಟಕದ ಸಕರ್ಾರಿ ಶಾಲೆಗಳಿಗೆ ಕಂಪ್ಯೂಟರ್ ಮತ್ತು ಗ್ರಂಥಾಲಯ ಸೌಲಭ್ಯಗಳನ್ನು  ಪರಿಚಯಿಸುವ ದಿಟ್ಟ ಕ್ರಮವನ್ನು ಪ್ರಾರಂಭಿಸಿದರು. ದೇಶದಲ್ಲಿ 70,000ಕ್ಕೂ ಹೆಚ್ಚು ಗ್ರಂಥಾಲಯಗಳನ್ನು ಸ್ಥಾಪಿಸಿದ್ದಾರೆ. ಅಲ್ಲದೇ ಹಾರ್ವರ್ಡ ವಿಶ್ವವಿದ್ಯಾಲಯದಲ್ಲಿ 'ದಿ ಮೂತಿ ಕ್ಲಾಸಿಕಲ್ ಲೈಬ್ರರಿ ಆಫ್ ಇಂಡಿಯಾ' ವನ್ನು ಸ್ಥಾಪಿಸಿದ್ದಾರೆ. ಪ್ರವಾಹ ಸಂತ್ರಸ್ತರಿಗೆ, ಕೊರೋನಾ ಪೀಡಿತರಿಗೆ ತಮ್ಮ ಸಂಸ್ಥೆಯಿಂದ ಸೂರು ಕಲ್ಪಿಸಿ ಅಗತ್ಯವಸ್ತುಗಳನ್ನು ಪೂರೈಸುವ ಮೂಲಕ ಮಾತೃ ಹೃದಯದ ಪ್ರೀತಿಯನ್ನು ಸಮಾಜಕ್ಕೆ ಪರಿಚಯಿಸಿದ್ದಾರೆ.

ಸುಧಾ ಮೂತರ್ಿ ಅವರಿಗೆ ಸಮಾಜ ಸೇವೆಯ ಜೊತೆಗೆ ಸಾಹಿತ್ಯದಲ್ಲಿ ಅಪರಿಮಿತ ಆಸಕ್ತಿ. ಅವರು ಕನ್ನಡ ಹಾಗೂ ಇಂಗ್ಲೀಷ್ನಲ್ಲಿ ಅನೇಕ ಕೃತಿಗಳನ್ನು ರಚಿಸಿ ಸಾಹಿತ್ಯ ವಲಯದಲ್ಲಿಯೂ ಖ್ಯಾತಿ ಪಡೆದಿದ್ದಾರೆ. ವಿಶೇಷವೆಂದರೆ ಕನ್ನಡದಲ್ಲಿ ರಚಿಸಿದ ಅನೇಕ ಪುಸ್ತಕಗಳು ಇಂಗ್ಲೀಷ್ ಮತ್ತು ಇತರ ಅನೇಕ ಭಾಷೆಗಳಿಗೆ ಅನುವಾದಗೊಂಡಿರುವದು. ಅವರು ಹಕ್ಕಿಯ ತೆರದಲಿ, ಶಾಲಾ ಮಕ್ಕಳಿಗಾಗಿ ಕಂಪ್ಯೂಟರ್, ಕಾವೇರಿಯಿಂದ ಮೇಕಾಂಗಿಗೆ, ಡಾಲರ್ ಸೊಸೆ, ಮಹಾಶ್ವೇತ, ಅತಿರಿಕ್ತೆ, ಪರಿಧಿ, ಮನದ ಮಾತು, ಗುಟ್ಟೊಂದು ಹೇಳುವೆ, ಸಾಮಾನ್ಯರಲ್ಲಿ ಅಸಾಮಾನ್ಯರು, ತುಮುಲ, ಋಣ, ಯಶಸ್ವಿ, ಏರಿಳಿತದ ದಾರಿಯಲ್ಲಿ, ನೂನಿಯ ಸಾಹಸಗಳು ಮುಂತಾದ ಕೃತಿಗಳನ್ನು ರಚಿಸಿ ಕನ್ನಡ ಸಾರಸ್ವತಲೋಕಕ್ಕೆ ಅಪರ್ಿಸಿದ್ದಾರೆ. ಇಂಗ್ಲೀಷ್ ಭಾಷೆಯಲ್ಲಿಯೂ ಅವರು ಹದಿನೇಳಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ದಿ ಸಪರ್ೆಂಟ್ಸ್ ರಿವೆಂಜ್, ಹೌ ಆಯ್ ಥಾಟ್ ಮೈ ಗ್ರ್ಯಾಂಡ್ ಮದರ್ ಟು ರೀಡ್, ದಿ ಡೇ ಆಯ್ ಸ್ಟಾಪ್ಡ್ ಡ್ರಿಂಕಿಂಗ್ ಮಿಲ್ಕ್, ಜೆಂಟ್ಲಿ ಫಾಲ್ಸ್ ದಿ ಬಕುಲಾ, ಡಾಲರ್ ಬಹೂ, ಹೌಸ್ ಆಫ್ ಕಾಡ್ರ್ಸ, ತ್ರಿ ಥೌಸಂಡ್ ಸ್ಟಿಚಿಸ್, ದಿ ಮ್ಯಾನ್ ಪ್ರಾಮ್ ದಿ ಎಗ್, ಮ್ಯಾಜಿಕ್ ಆಫ್ ದಿ ಲಾಸ್ಟ್ ಟೆಂಪಲ್ ಇತ್ಯಾದಿ ಕೃತಿಗಳನ್ನು ಆಂಗ್ಲಭಾಷೆಯಲ್ಲಿ ರಚಿಸಿ ಪ್ರಖ್ಯಾತರಾಗಿದ್ದಾರೆ. ಅವರ ಡಾಲರ್ ಸೊಸೆ, ಗುಟ್ಟೊಂದು ಹೇಳುವೆ, ಋಣ, ಹಕ್ಕಿಯ ತೆರದಲ್ಲಿ, ಕಾವೇರಿಯಿಂದ ಮೆಕಾಂಗಿಗೆ ಬಹಳ ಜನಪ್ರಿಯ ಪುಸ್ತಕಗಳಾಗಿವೆ. ಅವರ 'ನನ್ನ ಅಜ್ಜಿಗೆ ನಾ ಹೇಗೆ ಓದಲು ಕಲಿಸಿದೆ ಮತ್ತು ಇತರ ಕಥೆಗಳು' ಕೃತಿಯು ಹದಿನೈದು ಭಾಷೆಗಳಿಗೆ ಭಾಷಾಂತರಗೊಂಡಿರುವದು ವಿಶೇಷ.

ಸರಳತೆಗೆ ಇನ್ನೊಂದು ಹೆಸರೇ ಸುಧಾ ಮೂತರ್ಿ. ಅವರ ಉಡುಗೆ-ತೊಡುಗೆ, ಮಾತು, ಚಟುವಟಿಕೆಗಳಲ್ಲೇ ಅದು ತಿಳಿಯುತ್ತದೆ. ಆ ಮೂಲಕ ಎಷ್ಟೋ ಹೆಣ್ಣು ಮಕ್ಕಳಿಗೆ ಪ್ರೇರಣೆ, ಸ್ಫೂತರ್ಿ ಆಗಿರುವ ಅವರು ದೇವದಾಸಿ ಪದ್ಧತಿ ಕಿತ್ತೊಗೆಯಲು ಹೋರಾಟ ಮಾಡಿದ್ದಾರೆ. ಈ ಅನಿಷ್ಠ ಪದ್ಧತಿಯ ಆಚರಣೆಯಲ್ಲಿ ತೊಡಗಿಕೊಂಡಿದ್ದ ರಾಯಚೂರಿನ ಅಂದಾಜು 20 ಸಾವಿರಕ್ಕೂ ಹೆಚ್ಚು ಹೆಣ್ಣು ಮಕ್ಕಳನ್ನು ಇದರ ಸುಳಿಯಿಂದ ಪಾರು ಮಾಡಿ, ಅವರಿಗೆ ಕೌದಿ ಹೊಲಿಯುವದನ್ನು ಹೇಳಿಕೊಟ್ಟು ಸ್ವಾವಲಂಬಿಯಾಗಿ ಬದುಕಲು ಕಲಿಸಿಕೊಡುವ ಮೂಲಕ ಅವರ ಪಾಲಿಗೆ ದಾರಿ ದೀಪವಾಗಿದ್ದಾರೆ. ಸುಧಾ ಮೂತರ್ಿಯವರ ಬದುಕು, ಸಾಹಿತ್ಯ ಕುರಿತಾಗಿ ಹಲವು ಪಿಹೆಚ್.ಡಿ. ಮಹಾಪ್ರಬಂಧಗಳು ವಿವಿಧ ವಿಶ್ವವಿದ್ಯಾಲಯಗಳಲ್ಲಿ ಸಲ್ಲಿಕೆಯಾಗಿ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿರುವದು ಹೆಮ್ಮೆಯ ಸಂಗತಿ.  ಅಲ್ಲದೇ ಅವರ ಜೀವನ ಚರಿತ್ರೆ ಕುರಿತು ಬಾಲಿವುಡ್ನಲ್ಲಿ ನಿದರ್ೇಶಕಿ ಅಶ್ವಿನಿ ತಿವಾರಿ ಅವರು  ಚಿತ್ರವನ್ನು ತಯಾರಿಸಲು ಸಜ್ಜಾಗಿರುವದು ಸಂತಸದ ವಿಷಯ. ಸುಧಾ ಮೂತರ್ಿ ಅವರ ಸಮಾಜಸೇವೆಗಾಗಿ ಹಾಗೂ ಸಾಹಿತ್ಯ ಕೃಷಿಗಾಗಿ ಅನೇಕ ಪ್ರಶಸ್ತಿ-ಪುರಸ್ಕಾರಗಳು ಅವರನ್ನು ಅರಸಿಕೊಂಡು ಬಂದಿವೆ. ಭಾರತದ ಅತ್ಯುನ್ನತ ನಾಗರೀಕ ಗೌರವ 'ಪದ್ಮಶ್ರೀ', ಸಾಮಾಜಿಕ ಕಾರ್ಯಗಳಿಗಾಗಿ ಓಜಸ್ಟಿನಿ ಪ್ರಶಸ್ತಿ, ಮಿಲೇನಿಯಮ್ ಮಹಿಳಾ ಶಿರೋಮಣಿ ಪ್ರಶಸ್ತಿ, ಆರ್. ಕೆ. ನಾರಾಯಣ ಅವರ ಸಾಹಿತ್ಯ ಪ್ರಶಸ್ತಿ, ಲೈಫ್ ಟೈಮ್ ಅಚೀವ್ಮೆಂಟ್ ಪ್ರಶಸ್ತಿ, ದೂರದರ್ಶನದ ಹೆಮ್ಮೆಯ ಕನ್ನಡಿಗ ಪ್ರಶಸ್ತಿ, ಭಾರತದ ವಿಶ್ವವಿದ್ಯಾಲಯಗಳಿಂದ ಏಳು ಗೌರವ ಡಾಕ್ಟರೇಟ್ ಹೀಗೆ ಹತ್ತು ಹಲವು ಪ್ರಶಸ್ತಿ-ಪುರಸ್ಕಾರಗಳಿಗೆ ಅವರು ಭಾಜನರಾಗಿದ್ದಾರೆ.

ಸುಧಾ ಮೂತರ್ಿಯವರು ದೇಶ ಕಂಡ ಶ್ರೇಷ್ಠ ಮಹಿಳೆಯರಲ್ಲಿ ಒಬ್ಬರು. ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಉನ್ನತ ಸ್ಥಾನದಲ್ಲಿದ್ದರೂ ಕನ್ನಡ ಭಾಷೆ, ನೆಲದ ಋಣ ತೀರಿಸುವ ಕೆಲಸ ಮಾಡುತ್ತಲೇ ಮುನ್ನಡೆದಿದ್ದಾರೆ. ಅವರು ಜಗತ್ತಿನಾದ್ಯಂತ ಜನರಿಗೆ ಸ್ಪೂತರ್ಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.