ಸೋಮಯ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬಹುಮಾನ ವಿತರಣೆ
ಮಹಾಲಿಂಗಪುರ 07: ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಎಲ್ಲ ರಂಗಗಳಲ್ಲಿಯೂ ಮುಂದೆ ಬರುವಂತೆ ಮಾಡುವಲ್ಲಿ ಸೋಮಯ್ಯ ಆಂಗ್ಲ ಮಾಧ್ಯಮ ಶಾಲೆ ಮಾದರಿಯಾಗಿದೆ ಎಂದು ಖ್ಯಾತ ವ್ಯೆದ್ಯರಾದ ಡಾ. ಪ್ರತಿಭಾ ಮುರುಗೋಡ ಹೇಳಿದರು.
ಸಮೀಪದ ಸೋಮಯ್ಯ ಕೆ.ಜೆ ಸೋಮಯ್ಯ ಆಂಗ್ಲ ಮಾದ್ಯಮ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನದ ಅಂಗವಾಗಿ ಎರಿ್ಡಸಿದ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಗಮಿಸಿ ಮಾತನಾಡಿದ ಅವರು ಮಕ್ಕಳನ್ನು ಬರೀ ಅಂಕ ಪಡೆಯುವ ಯಂತ್ರಗಳಂತೆ ಕಾಣದೆ ಅವರಲ್ಲಿರುವ ವಿವಿಧ ಭಗೆಯ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ತಕ್ಕನಾದ ಪಾಠಮಾಡುವಲ್ಲಿ ಸೋಮಯ್ಯ ಶಾಲೆ ಸತತ ಪ್ರಯತ್ನ ಮಾಡುತ್ತಲೆ ಬಂದಿದೆ.ಇದರಿಂದ ಮಕ್ಕಳ ವಿದ್ಯಾರ್ಜನೆ ಜೋತೆಗೆ ಆಟಪಾಠಗಳಲ್ಲಿ ಕೂಡುವಿಕೆಯಿಂದ ಮಕ್ಕಳ ಆರೋಗ್ಯವು ಸುಧಾರಣೆಯಾಗುತ್ತದೆ ಎಂದರು.
ನಂತರ ಮಾತನಾಡಿದ ಪಿಟಿಎ ಮೆಂಬರ ಸಂಜಯ ಯಲಶೆಟ್ಟಿ ಮಕ್ಕಳಿಗೆ ಚಿಕ್ಕಂದಿನಿಂದಲೆ ಶಿಸ್ತು ಬದ್ದವಾತಾವರಣದ ಅವಶ್ಯಕತೆ ಇದೆ, ಶಿಸ್ತು ಮತ್ತು ಶೃದ್ದೆಯಿಂದ ಯಾರು ಚನ್ನಾಗಿ ಅಬ್ಯಾಸ ಮಾಡುತ್ತಾರೋ ಅವರ ಮುಂದಿನ ಜೀವನ ಯಶಸ್ಸು ಸಾಧಿಸುವುದರಲ್ಲಿ ಯಾವ ಸಂದೇಹವು ಇಲ್ಲ, ಮತ್ತು ಮಕ್ಕಳಿಗೆ ಸೋಲು ಗೆಲುವಿಗಿಂತ ಸ್ಪರ್ಧೇಗಳಲ್ಲಿ ಭಾಗವಹಿಸುವುನ್ನು ಕಲಿಸಬೇಕು, ವಿದ್ಯಾವಂತ ಮಕ್ಕಳಿಂದ ಮಾತ್ರ ದೇಶದ ಅಭಿವೃದ್ದಿ ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಪತ್ರಕರ್ತರಾದ ಮಹೇಶ ಆರಿ, ಅಭಿರಾಜ ಢವಳೇಶ್ವರ, ಮಂಗೇಶ ಶೆಟ್, ಪೂಜಾ ಓಸ್ವಾಲ್, ಅರ್ಚನಾ ಓಸ್ವಾಲ್, ವೈಶಾಲಿ, ಗೋಕಾಂವಿ,ಶಾಲಾ ಸಿಬ್ಬಂದಿ ತಬಸೂಮ ಘೋರಿ,ಸೀಮಾ ಕಾಡದೇವರ,ಸ್ಮೀತಾ ಸಬಕಾಳೆ, ರಮಾ ಕಮಲಾಕರ,ಅಹಲ್ಯಾ ಪಾಟೀಲ, ವೈಭವಿ ಮೈಂಡ, ದರೀತ್ರಿ ಜ್ಯೋಶಿ, ಸುರೇಶ ಬಾಗಡಿ,ಪಾಲಕರಾದ ಸವೀತಾ ಪಾಟೀಲ, ಬಾಗ್ಯಶ್ರೀ ಉಳ್ಳಾಗಡ್ಡಿ, ಮಹಾನಂದಾ ಉಳ್ಳಾಗಡ್ಡಿ, ಸುಮನ್ ಸೇರಿದಂತೆ ಹಲವರು ಇದ್ದರು.