ಸೌರಭ ದಾಸ ಸಾಹಿತ್ಯ ವಿದ್ಯಾಲಯದ ಪರೀಕ್ಷೆ
ಬಳ್ಳಾರಿ 07: ನಗರದ ಸತ್ಯನಾರಾಯಣ ಪೇಟೆ ಬಡಾವಣೆಯ ಶ್ರೀಮದುತ್ತರಾಧಿ ಮಠ, ಶ್ರೀ ಮಧ್ವಸಂಘ ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ವಿಶ್ವ ಮಧ್ವ ಮಹಾ ಪರಿಷತ್ತಿನ ಅಂಗ ಸಂಸ್ಥೆಯಾದ ಸೌರಭ ದಾಸ ಸಾಹಿತ್ಯದ ವಿದ್ಯಾಲಯದಿಂದ ಆಯೋಜಿಸಿದ್ದ ವಿವಿಧ ಪರೀಕ್ಷೆಗಳು ನಡೆದವು.ಕಳೆದ ಜ.3,4 ಹಾಗೂ 5ರಂದು ದಾಸ, ದಾಸಶ್ರಿ, ದಾಸನಿಧಿ,ದಾಸರತ್ನ, ದಾಸ ಶಿರೋಮಣಿ, ದಾಸಭಾವ, ದಾಸಸಾಗರ ಮತ್ತು ದಾಸದರ್ಶನದ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಬರೆದರು. ಶ್ರೀಶ್ರೀಶ್ರೀ 1008 ಸತ್ಯಾತ್ಮತೀರ್ಥರ ಪರಮಾನುಗ್ರಹದಿಂದ ಹಾಗೂ ಎಲ್ಲ ಹಿರಿಯರ ಪುಣ್ಯದ ಫಲವಾಗಿ ಸೌರಭ ದಾಸ ಸಾಹಿತ್ಯದ ವಿದ್ಯಾಲಯದಿಂದ ಪರೀಕ್ಷೆಗಳು ನಡೆದಿದ್ದು, 8ನೇ ವರ್ಷಕ್ಕೆ ಕಾಲಿಟ್ಟಿದೆ. ವಿದ್ಯಾಲಯದ ಅಧ್ಯಕ್ಷ ಪಂ.ಪ್ರಮೋದ ಆಚಾರ್ಯ ಪೂಜಾರ ಅವರ ಅವಿರತ ಪ್ರಯತ್ನ ಹಾಗೂ ಸಕಲ ವಿದ್ವಾಂಸರ ಪರಿಶ್ರಮ, ಬಳ್ಳಾರಿಯ ಸಂಚಾಲಕಿ ಸೌಭಾಗ್ಯ ಕಾವಿ ಸೇರಿದಂತೆ ಅವರ ಜೊತೆಗೆ ಸಹಕರಿಸಿದ ಎಲ್ಲ ಸದಸ್ಯರ ಶ್ರಮದಿಂದ ಮುನ್ನಡೆಯುತ್ತಿದೆ. ದಾಸ ಸಾಹಿತ್ಯದ ಮೌಲ್ಯಗಳ ಬಗ್ಗೆ ಅರಿವು ಮೂಡಿಸಿ,ವಿದ್ಯಾಲಯದ ಬಗ್ಗೆ ಮಾಹಿತಿ ಕೊಟ್ಟು, ಪ್ರತಿ ವರ್ಷವೂ ಹೆಚ್ಚಿನ ಸಂಖ್ಯೆಯಲ್ಲಿ ದಾಸ ಸಾಹಿತ್ಯದ ಆಸಕ್ತರನ್ನು ಒಗ್ಗೂಡಿಸುವಲ್ಲಿ ಶ್ರೀ ಸೌರಭ ದಾಸ ಸಾಹಿತ್ಯ ಬಳ್ಳಾರಿ ವಿಭಾಗ ಉತ್ತರೋತ್ತರ ಅಭಿವೃದ್ಧಿಯನ್ನು ಹೊಂದುತ್ತಿದೆ. ಕೇವಲ ಅಂಕಗಳಿಗೆ ಸೀಮಿತವಾಗದೆ ಜ್ಞಾನರ್ಜನೆಗೆಂದು ವಿಶ್ವದಾದ್ಯಂತ 130 ಕೇಂದ್ರಗಳಲ್ಲಿ 13 ಸಾವಿರ ಸದಸ್ಯರಿಗೆ ಏಕ ಕಾಲದಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಇದು ಶ್ರೀ ಸೌರಭ ದಾಸ ಸಾಹಿತ್ಯ ವಿದ್ಯಾಲಯದ ಹೆಮ್ಮೆಯಾಗಿದೆ.