ರೈಲ್ವೆ ಇಲಾಖೆ ಸಂಪೂರ್ಣ ಖಾಸಗೀಕರಣ ಮಾಡುತ್ತಿಲ್ಲ : ಸಂಸದ ಅಂಗಡಿ

ಬೆಳಗಾವಿ : ಸಂಪೂರ್ಣ ರೈಲ್ವೆ ಇಲಾಖೆಯನ್ನು ಖಾಸಗೀಕರಣ ಮಾಡುತ್ತಿಲ್ಲ. ಆದರೆ ರೈಲ್ವೆ ಸಂಚಾರ ವ್ಯವಸ್ಥೆಯನ್ನು ಜನರಿಗೆ ಅನುಕೂಲವಾಗುವಂತೆ ಇನ್ನಷ್ಟು ವಿಸ್ತರಿಸಲು ಖಾಸಗಿ ಸಹಭಾಗಿತ್ವವನ್ನು ಪ್ರೇರೇಪಿಸಲು ಯೋಜಿಸಲಾಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ತಿಳಿಸಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಸಚಿವ ಸುರೇಶ ಅಂಗಡಿ ಅವರು ಮಾತನಾಡಿ, ರೈಲ್ವೆ ಇಲಾಖೆಯನ್ನು ಖಾಸಗೀಕರಣ ಮಾಡಲಾಗುತ್ತಿದೆ ಎಂದು ದೂರುವ ಅಗತ್ಯವಿಲ್ಲ. ಸಂಪೂರ್ಣ ರೈಲ್ವೆ ಇಲಾಖೆಯನ್ನು ಖಾಸಗೀಕರಣ ಮಾಡುತ್ತಿಲ್ಲ. ಆದರೆ ರೈಲ್ವೆ ಸಂಚಾರ ವ್ಯವಸ್ಥೆಯನ್ನು ಜನರಿಗೆ ಅನುಕೂಲವಾಗುವಂತೆ ರೂಪಿಸಲು ಯೋಜಿಸಲಾಗಿದೆ. ಉದಾಹರಣೆಗೆ ಹೇಳಬೇಕೆಂದರೆ ಮೊದಲು ಕೇಂದ್ರ ಸಕರ್ಾರದ ದೂರದರ್ಶನ ಒಂದೇ ಇತ್ತು.

ಖಾಸಗೀಕರಣಕ್ಕೆ ಅವಕಾಶ ನೀಡಿದ ಮೇಲೆ ಹಲವಾರು ಚಾನೆಲ್ಗಳು ಬಂದವು. ಉದ್ಯೋಗಾವಕಾಶ, ಆಥರ್ಿಕತೆ ಹೆಚ್ಚಿತು. ಇದು ಕೂಡ ಹಾಗೆಯೇ ಇದೆ. ಒಂದು ರೈಲು ಬಂದು ಹೋದ ನಂತರ ನಿಲ್ದಾಣ ಖಾಲಿ ಇರುತ್ತದೆ. ಮತ್ತಷ್ಟು ರೈಲುಗಳು ಅಲ್ಲಿ ಬರಲಿ, ಜನರಿಗೆ ಅನುಕೂಲ ಆಗಲಿ, ದೇಶದ ಆಥರ್ಿಕತೆ ಬೆಳೆಯಲಿ, ಉದ್ಯೋಗಗಳು ಸೃಷ್ಟಿಯಾಗಲಿ. ಇದು ನಮ್ಮ ಉದ್ದೇಶ ಎಂದು ಹೇಳಿದರು.

ಒಟ್ಟಿನಲ್ಲಿ ರೈಲ್ವೆ ಸೇವೆಯನ್ನು ಜನರಿಗೆ ಇನ್ನಷ್ಟು ಹತ್ತಿರವಾಗಿಸಲು, ಜನಸ್ನೇಹಿಯಾಗಿಸಲು, ರೈಲ್ವೆ ಸೇವೆಯಲ್ಲಿ ಸ್ಪಧರ್ಾತ್ಮಕ ಮನೋಭಾವ ಬೆಳೆಸಲು ಸಕರ್ಾರ ಸನ್ನದ್ಧವಾಗುತ್ತಿದೆ. ಇನ್ನಷ್ಟು ಉತ್ತಮ ರೈಲ್ವೆ ಸೇವೆ ಜೊತೆಗೆ ಆಥರ್ಿಕತೆ, ಉದ್ಯೋಗಾವಕಾಶ, ರೈಲ್ವೆ ಸೇವೆ ವಿಸ್ತರಣೆಯೂ ಸಾಕಾರಗೊಳ್ಳುವ ನಿರೀಕ್ಷೆ ಇದೆ

ಎನ್ನಲಾಗುತ್ತಿದೆ.