ವಿಜಯಪುರ ಮೇ. 21 : ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಡಿ ನಿಗದಿತ ಗುರಿಗೆ ತಕ್ಕಂತೆ ಪ್ರಗತಿ ಸಾಧಿಸುವಂತೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಸಂಭಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು ಮೊದಲ ಜೀವಂತ ಹೆರಿಗೆಗೆ ಮಾತ್ರ ಸೀಮಿತವಾಗಿ 2017ರ ಜನೇವರಿ 1ರ ನಂತರ ಗಭರ್ಿಣಿಯಾಗಿರುವ ಎಲ್ಲ ಮಹಿಳೆಯರಿಗೆ ಅನ್ವಯವಾಗುವಂತೆ 5 ಸಾವಿರ ರೂಗಳನ್ನು ನೇರ ನಗದು ವಗರ್ಾವಣೆ ಮೂಲಕ ಫಲಾನುಭವಿಗಳ ಖಾತೆಗೆ ಸಹಾಯಧನ ಒದಗಿಸುವ ಯೋಜನೆ ಇದಾಗಿದ್ದು ಈ ಯೋಜನೆಯಡಿ ಗುರಿಗೆ ತಕ್ಕಂತೆ ಸೂಕ್ತ ಪ್ರಗತಿ ಸಾಧಿಸುವಂತೆ ಅವರು ಸೂಚನೆ ನೀಡಿದ್ದಾರೆ.
ಈ ಯೋಜನೆಯಡಿ ಗಭರ್ಿಣಿ ನೊಂದಣಿಯಾದಾಗ 1ನೇ ಕಂತಾಗಿ 1 ಸಾವಿರ ರೂಪಾಯಿ, ಗಭರ್ಿಣಿಯಾಗಿ 6 ತಿಂಗಳ ಸಂದರ್ಭದಲ್ಲಿ ಆರೋಗ್ಯ ತಪಾಸಣೆಗೆ 2 ಸಾವಿರ ರೂಪಾಯಿ ಮತ್ತು ಮಗು ಜನನ ನೊಂದಣಿ ಮೊದಲನೇ ಹಂತದ ಚುಚ್ಚುಮದ್ದು ನೀಡುವ ಸಂದರ್ಭದಲ್ಲಿ ಮೂರನೇ ಕಂತಾಗಿ 2 ಸಾವಿರ ರೂಪಾಯಿ ಸಹಾಯಧನವನ್ನು ನೇರ ನಗದು ಮೂಲಕ ವಗರ್ಾಯಿಸಬೇಕು. ಆರ್.ಸಿ.ಎಚ್ ದಾಖಲಾತಿ ಪ್ರಕಾರ 2018ರ ಎಪ್ರೀಲ್ 1ರಿಂದ 2019ರ ಮಾರ್ಚ 31ರ ವರೆಗೆ 1ನೇ ಗಭರ್ಿಣಿ ಸಂಖ್ಯೆಗೆ 56369 ಗುರಿಯನ್ನು ನೀಡಲಾಗಿದ್ದು ಈವರೆಗೆ 12,506 ಮಾತ್ರ ಗುರಿ ಸಾಧಿಸಲಾಗಿದೆ. ಇನ್ನುಳಿದ ತೊಂದರೆಗಳನ್ನು ನಿವಾರಿಸಿಕೊಂಡು ಅರ್ಹ ಫಲಾನುಭವಿಗಳಿಗೆ ಈ ಸೌಲಭ್ಯ ದೊರೆಯುವಂತೆ ನೋಡಿಕೊಳ್ಳಲು ಅವರು ಸೂಚಿಸಿದರು.
ಅದೇ ರೀತಿ ವಿಜಯಪುರ ನಗರ, ಗ್ರಾಮೀಣ, ಬ.ಬಾಗೇವಾಡಿ, ಮುದ್ದೇಬಿಹಾಳ, ಸಿಂದಗಿ, ಇಂಡಿ ಹಾಗೂ ಚಡಚಣ ತಾಲೂಕಾ ವ್ಯಾಪ್ತಿಯಲ್ಲಿ ಸಾಧಿಸಲಾಗುತ್ತಿರುವ ಪ್ರಗತಿಯ ಕುರಿತು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳ ಗಮನಕ್ಕೆ ತರಬೇಕು. ಈ ಯೋಜನೆಯಡಿ ಪ್ರಗತಿ ಸಾಧಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪರಿಹಾರ ಕಂಡುಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಅವರು ಮಾತನಾಡಿ ನಿಗದಿತ ಗುರಿಗೆ ತಕ್ಕಂತೆ ಪ್ರಗತಿ ಸಾಧಿಸದೆ ಇರುವ ಬಗ್ಗೆ ಅಸಮಾದಾನ ವ್ಯಕ್ತ ಪಡಿಸಿ ಈ ಕುರಿತು ಸಂಬಂಧಪಟ್ಟಅಧಿಕಾರಿಗಳು ಇನ್ನೂ ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿದರ್ೇಶಕ ಆಲಗೂರ ಮತ್ತು ಆರ್.ಸಿ.ಎಚ್ ಅಧಿಕಾರಿ ಮಹೇಶ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಚೌಹಾಣ, ಮಕ್ಕಳ ರಕ್ಷಣಾ ಘಟಕ ಅಧಿಕಾರಿ ನಿರ್ಮಲಾ ಸುರಪೂರ ಸೇರಿದಂತೆ ಇತರರು ಉಪಸ್ಥಿತರಿದ್ದರು