ಸಂತ ಎಂಬ ಪದಕ್ಕೆ ಅನ್ವರ್ಥದಂತಿದ್ದ ಸಿದ್ದೇಶ್ವರ ಸ್ವಾಮಿಜಿ : ಆರತಿ ಶಹಾಪೂರ

Siddeshwar Swamiji, who was not worthy of the word saint: Aarti Shahapoor

ಸಂತ ಎಂಬ ಪದಕ್ಕೆ ಅನ್ವರ್ಥದಂತಿದ್ದ  ಸಿದ್ದೇಶ್ವರ ಸ್ವಾಮಿಜಿ : ಆರತಿ ಶಹಾಪೂರ 

ವಿಜಯಪುರ 10 : ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್‌ ನಂ.33ರ ಸಾಯಿ ನಗರದಲ್ಲಿ ಜ್ಞಾನಯೋಗಿ ಪರಮಪೂಜ್ಯ  ಸಿದ್ದೇಶ್ವರ ಸ್ವಾಮಿಜಿಗಳ ಗುರು ನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  

ಕಾರ್ಯಕ್ರಮದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮಿಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿದ ಬಳಿಕ ಮಾತನಾಡಿದ ವಾರ್ಡ್‌ ನಂ.33ರ ಪಾಲಿಕೆ ಸದಸ್ಯೆಯೂ ಆಗಿರುವ ಕಾಂಗ್ರೇಸ್ ಯುವನಾಯಕಿ ಕು.ಆರತಿ ಶಹಾಪೂರ ಅವರು ಸಂತ ಎಂಬ ಪದಕ್ಕೆ ಅನ್ವರ್ಥದಂತಿದ್ದ ಜ್ಞಾನಯೋಗಿ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮಿಜಿಗಳು ವಿಜಯಪುರದ ಅಸ್ಮಿತೆಯಾಗಿದ್ದು, ಶ್ರೀ ಸಿದ್ದೇಶ್ವರ ಸ್ವಾಮಿಜಿಗಳು ಬಸವಣ್ಣನ ಜನ್ಮಭೂಮಿಯಲ್ಲಿ ಅವತರಿಸಿದ ಆಧುನಿಕ ಬಸವಣ್ಣ ಎಂದು ಬಣ್ಣಿಸಿದರು. 

ಅಕ್ಷರಶಃ ನಡೆದಾಡುವ ದೇವರಂತಿದ್ದ ಪರಮಪೂಜ್ಯ  ಸಿದ್ದೇಶ್ವರ ಸ್ವಾಮಿಜಿಗಳಂತಹ ಪ್ರಮಥರು ಈ ಭೂಮಿಯ ಮೇಲೆ ಮತ್ತೆ ಮತ್ತೆ ಹುಟ್ಟಿ ಬರುವುದು ಬಹಳ ವಿರಳ. ಆದ್ದರಿಂದಲೇ ಪರಮಪೂಜ್ಯ  ಸಿದ್ದೇಶ್ವರ ಸ್ವಾಮಿಜಿಗಳನ್ನು ಸಹಸ್ರಮಾನದ ಸಂತ ಎಂದೇ ಕರೆಯಲಾಗುತ್ತದೆ ಎಂದು ಹೇಳಿದರು. 

ಪರಮಪೂಜ್ಯ  ಸಿದ್ದೇಶ್ವರ ಸ್ವಾಮಿಜಿಗಳು ಜ್ಞಾನಯೋಗಿಯಾಗಿ ತಮ್ಮ ಪ್ರವಚನದ ಮೂಲಕ ಜ್ಞಾನದ ಬೆಳಕಿನಿಂದ ಎಲ್ಲರ ಬದುಕನ್ನು ಹಸನುಗೊಳಿಸಿದವರು. ಇಂತಹವರ ಜ್ಞಾನದ ಬೆಳಕಿನಲ್ಲಿಯೇ ನಮ್ಮೆಲ್ಲರ ಬದುಕು ಸಂತಸದಿಂದ ಸಾಗುತ್ತಿದೆ. ಇಂತಹ ಪ್ರಮಥರು ಈ ಪುಣ್ಯಭೂಮಿಯಲ್ಲಿ ಮತ್ತೆ ಮತ್ತೆ ಹುಟ್ಟಿ ಬರಲಿ ಎಂದರು. 

ಈ ಸಂದರ್ಭದಲ್ಲಿ ವಾರ್ಡ್‌ ನಂ.33ರ ಸಾಯಿ ನಗರದ ಹಿರಿಯರು, ಮಹಿಳೆಯರು, ಯುವಕರು, ಮಕ್ಕಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.