ವಿದ್ಯಾರ್ಥಿಗಳು ತಮ್ಮ ಆಂತರಿಕ ಕೌಶಲ್ಯಗಳ ಪರಿಚಯಿಸಬೇಕು. -ರೋಹನ ಜುವಳಿ

Students should introduce their inner skills. - Rohana Juvali

ಬೆಳಗಾವಿ.ಜ.9 : ವಿದ್ಯಾರ್ಥಿಗಳು ತಮ್ಮ ಆಂತರಿಕ ಕೌಶಲ್ಯಗಳ ಬಗ್ಗೆ ತಿಳಿವಳಿಕೆ ಹೊಂದುವ ಮೂಲಕ ತಮ್ಮಲ್ಲಿನ ವಿಶೇಷ ಕೌಶಲ್ಯಗಳನ್ನು ಪರಿಚಯಿಸಬೇಕೆಂದು ಮೈನಾಕ್ಸ್‌ ಅಲಾಯ್ಸ್‌ ಪ್ರೈ ಲಿ. ವ್ಯವಸ್ಥಾಪಕ ನಿರ್ದೇಶಕ ರೋಹನ ಜುವಳಿ ಅವರು ತಿಳಿಸಿದರು.  

ಭರತೇಶ ಶಿಕ್ಷಣ ಸಂಸ್ಥೆಯ ಗ್ಲೋಬಲ ಬುಸಿನೆಸ್ ಸ್ಕೂಲ ಎಂ.ಬಿ.ಎ.ವಿದ್ಯಾಲಯದಲ್ಲಿ “ಟ್ರೆಶಹೋಲ್ಡ” ನೂತನವಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕಷ್ಟ ಪಡುವುದನ್ನು ಕಲಿಯಬೇಕು.  ಪ್ರತಿನಿತ್ಯದ ಆಗುಹೋಗುಗಳ ಬಗ್ಗೆ  ಸಾಮಾನ್ಯ ತಿಳಿವಳಿಕೆ ಹೊಂದಿರಬೇಕು. ಆಗ ಮಾತ್ರ ನಿಮ್ಮ ಕನಸು ನನಸು ಮಾಡಿಕೊಳ್ಳಲು ಸಾಧ್ಯ ಎಂದು ತಿಳಿಸಿದ ಅವರು, ಜೀವನದಲ್ಲಿ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕೆಂದು ಅವರು ಹೇಳಿದರು.  

ಸಮಾರಂಭಕ್ಕೆ ಆಗಮಿಸಿದ ಇನ್ನೋರ್ವ ಅತಿಥಿ ಲೇಟಕೋರ ಇಂಡಿಯಾ ಪ್ರೈ.ಲಿ.ಮಾನವ ಸಂಪನ್ಮೂಲ ವಿಭಾಗದ ಹಿರಿಯ ವ್ಯವಸ್ಥಾಪಕ ಸತೀಶ ಹೆಗಡೆ ಅವರು ಮಾತನಾಡಿ,ಉತ್ತಮ ಜೀವನ ರೂಪಿಸುವಲ್ಲಿ  ವಿಶೇಷ ಕೌಶಲ್ಯಗಳನ್ನು ಹೊಂದಿರುವುದು ಅವಶ್ಯಕತೆಯಾಗಿದೆ. ಬಹುರಾಷ್ಟ್ರೀಯ ಕಂಪನಿಗಳು ಯಾವ ರೀತಿಯಲ್ಲಿ ವ್ಯವಹಾರ ನಡೆಸುತ್ತವೆ ಎಂಬುದರ ಬಗ್ಗೆ ನಿರಂತರ ಅಧ್ಯಯನ ನಡೆಸಬೇಕು.ಇದರಿಂದ  ಮಾರುಕಟ್ಟೆ ಜ್ಞಾನ ಬೆಳೆದು ನಿಮ್ಮ  ವ್ಯವಹಾರದಲ್ಲಿ ಸುಧಾರಣೆ ತರಲು ಸಹಕಾರಿಯಾಗುತ್ತದೆ ಎಂದರು.  

ಸಮಾರಂಭದಲ್ಲಿ ಎಂ.ಬಿ.ಎ.ಮಹಾವಿದ್ಯಾಲಯದ ನಿರ್ದೇಶಕ ಡಾ.ಪ್ರಸಾದ ದಡ್ಡಿಕರ ಅವರು ಅತಿಥಿಗಳನ್ನು  ಸ್ವಾಗತಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯ ಶರದ ಬಾಳಿಕಾಯಿ ಅವರು ವಹಿಸಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.  

ಈ ಕಾರ್ಯಕ್ರಮವನ್ನು ಡಾ,.ಪದ್ಮಪ್ರೀಯಾ ಕತಗಲ, ರಂಜನಾ ಚೌಗುಲೆ, ಮಾಣಿಕಚಂದ ಬಸ್ತವಾಡೆ, ಡಾ. ನಿಖಿಲ ರಾಗಶೆಟ್ಟಿ ಅವರು ಆಯೋಜಿಸಿದ್ದರು. ಆಯೇಶಾ ಜಿ. ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.  

ಈ ಶಿಬಿರವು ಭರತೇಶ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಹಾಗೂ ಭಾರತೀಯ ಜೈನ ಸಂಘಟನೆಯ ಸಹಯೋದಲ್ಲಿ ನಡೆಯಲಿದ್ದು, ಈ ಶಿಬಿರದಲ್ಲಿ ಅಮೇರಿಕದ ಡಾ. ಲ್ಯಾರಿ ವೈನಸ್ಟೈನ ಖ್ಯಾತ ಪ್ಲಾಸ್ಟಿಕ ಸರ್ಜನ ಅವರು ಶಸ್ತ್ರಚಿಕಿತ್ಸೆ ನಡೆಸಲಿದ್ದಾರೆ. ಈ ಶಿಬಿರದಲ್ಲಿ ಸಿಳು ತುಟಿ, ಮುಖದ ಮೇಲಿನ ಗುರುತುಗಳು, ಬಾಹ್ಯ ಕಿವಿ ವಿರೂಪತೆ, ನರಗಳ ಮೇಲೆ ಶಸ್ತ್ರಚಿಕಿತ್ಸೆ ನಡೆಸಲಾಗುವುದು.  

ಮೊದಲು 400 ನೋಂದಾಯಿತ ರೋಗಿಗಳನ್ನು ಪರೀಕ್ಷಿಸಿ ಅಗತ್ಯ ಶಸ್ತ್ರ ಚಿಕಿತ್ಸೆ ಮಾಡಲಾಗುವುದು. ಡಾ.ಅಮೇಯ ಜಠಾರ,9886621394, ಡಾ.ಸಾಗರ ಪಾಟೀಲ 8050424354 ಇವರನ್ನು ಸಂಪರ್ಕಿಸಿ ಈ ಶಿಬಿರದಲ್ಲಿ  ಹೆಸರು ನೋಂದಾಯಿಸಬಹುದಾಗಿದೆ ಎಂದು  ಪ್ರಕಟಣೆಯಲ್ಲಿ ತಿಳಿಸಲಾಗಿದೆ.