ಲೋಕದರ್ಶನ ವರದಿ
ಅಂಕೋಲಾ 17: ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ನೀಡುವ ತೀಪರ್ು ಮರು ಪರಿಶೀಲಿಸಿ ತೀರ್ಪನ್ನು ಹಿಂಪಡೆಯಲು ಒತ್ತಾಯಿಸಿ ಹಿಂದೂ ಹಿತರಕ್ಷಣಾ ವೇದಿಕೆ, ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯಿಂದ ಶನಿವಾರ ಬೃಹತ್ ಪ್ರತಿಭಟನೆ ನಡೆಸಿ ತಹಶೀಲ್ದಾರ ಮೂಲಕ ರಾಷ್ಟ್ರಪತಿ ಯವರಿಗೆ ಮನವಿ ಸಲ್ಲಿಸಿದರು.
ನಗರದ ಶಾಂತಾದುಗರ್ಾ ದೇವಸ್ಥಾನಂದ ಹೊರಟ ಮೆರವಣಿಗೆ ಮೂಲಕ ಹೊರಟ ಭಕ್ತರು 'ಅಯ್ಯಪ್ಪ ಸ್ವಾಮಿ ದೇಗುಲ ಪಾವಿತ್ರ್ಯತೆ ಕಾಪಾಡಿ' 'ಹಿಂದು ಧರ್ಮದ ಮೌಲ್ಯ ಉಳಿಸಿ' ಎಂದು ಘೋಷಣೆ ಕೂಗಿದರು. ನೂರಾರು ಜನರಿದ್ದ ಮೆರವಣಿಗೆ ಮುಖ್ಯ ರಸ್ತೆ ಮೂಲಕ ತಹಶೀಲ್ದಾರ ಕಚೇರಿಗೆ ಆಗಮಿಸಿದರು.
ಹಿಂದೂಪರ ಸಂಘಟನೆಯ ಜಗದೀಶ ನಾಯಕ ಮಾತನಾಡಿ ವಿನಾಕಾರಣ ಅಯ್ಯಪ್ಪ ಸ್ವಾಮಿ ದೇಗುಲದ ವಿಚಾರದಲ್ಲಿ ವಿವಾದ ಸೃಷ್ಟಿಸಲಾಗಿದೆ. ಹಿಂದು ಧರ್ಮಕ್ಕೆ ಸೇರಿರದ ಮಹಿಳೆಯೊಬ್ಬರು ದೇವಾಲಯ ಪ್ರವೇಶಿ ಸುವ ಪ್ರಯತ್ನ ನಡೆಸಿದರು. ಉದ್ದೇಶಪೂರ್ವಕವಾಗಿ ಹಿಂದು ಆಚರಣೆಗಳನ್ನು ಹತ್ತಿಕ್ಕಲು ಹುನ್ನಾರ ಮಾಡಲಾ ಗುತ್ತಿದೆ. ಮಹಿಳೆಯರಿಗೆ ದೇವಾಲಯದಲ್ಲಿ ಪ್ರವೇಶವಿಲ್ಲ ಎನ್ನುವುದು ಶತಮಾನಗಳಿಂದ ಪಾಲಿಸಲಾಗುತ್ತಿರುವ ನಿಯಮ. ಧರ್ಮಕ್ಕೆ ತೊಂದರೆ ಕೊಡುವವರಿಂದಾಗಿ ವಿವಾದ ಉದ್ಭವವಾಗಿದೆ. ಸುಪ್ರೀಂ ಕೋಟರ್್ ತೀಪರ್ಿನ ಬಗ್ಗೆ ಮತ್ತೊಮ್ಮೆ ವಿಚಾರಿಸಿ ತೀರ್ಪನ್ನು ನೀಡಬೇಕು ಆಗ್ರಹಿಸಿದರು.
ಈ ಸಭೆಯನ್ನುದ್ದೇಶಿಸಿ ಮಾತನಾಡಿದ ಹಿರಿಯ ಗುರುಸ್ವಾಮಿಗಳಾದ ಸುರೇಶ ನಾಯ್ಕ, ಮಾರುತಿ ಗುನಗಾ ಮತ್ತು ಶ್ರೀಕಾಂತ ನಾಯ್ಕ, ಅಯ್ಯಪ್ಪ ಸನ್ನಿಧಿಯಲ್ಲಿ 800 ವರ್ಷಗಳಿಂದ ಪಾಲಿಸಿಕೊಂಡು ಬರುತ್ತಿರುವ ಸಂಪ್ರ ದಾಯವನ್ನು ಮುರಿಯುತ್ತಿರುವುದು ನಮ್ಮಂತಹ ಲಕ್ಷಾಂತರ ಭಕ್ತರಿಗೆ ಬೇಸರವಾಗಿದೆ. ಈ ಸನ್ನಿಧಿಯಲ್ಲಿ ಮಹಿಳೆಯರಿಗೆ ಪ್ರವೇಶ ನಿರಾಕರಿಸಿಲ್ಲ. 10 ವರ್ಷದ ಕೆಳಗೆ ಮತ್ತು 50 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ದರ್ಶನ ಪಡೆಯುತ್ತಿದ್ದಾರೆ. ವಿನಾಕಾರಣ ಇಲ್ಲಿ ಗೊಂದಲ ನಿಮರ್ಾಣವಾಗುತ್ತಿದ್ದು, ಇದನ್ನು ಬಗೆಹರಿಸಬೇಕು ಎಂದು ಒತ್ತಾಯ ಮಾಡಿದರು. ನಿತ್ಯಾನಂದ ಗಾಂವಕರ್, ರಾಜೇಂದ್ರ ನಾಯ್ಕ, ಉಮೇಶ ಎನ್. ನಾಯ್ಕ, ನ್ಯಾಯವಾದಿ ನಾಗರಾಜ ನಾಯಕ ಮತ್ತಿತರರು ಮಾತನಾಡಿ, ಕೇರಳ ಸಕರ್ಾರ ನ್ಯಾಯಾಲಯದ ಮುಂದೆ ಭಕ್ತರ ಪರವಾದ ಮಹಿತಿ ಇರಿಸದೇ ದೇಗುಲದ ಸಂಪ್ರದಾಯಕ್ಕೆ ಚ್ಯುತಿ ತರುವ ಷಡ್ಯಂತ್ರ ಮಾಡಿದೆ. ಹಿಂದೂ ಭಾವನೆ ಘಾಸಿಗೊಳಿಸುವ ಆಳ ಪಿತೂರಿ ಇದರ ಹಿಂದಿದೆ ಎಂದು ಆರೋಪ ಮಾಡಿದರಲ್ಲದೇ ಸುಪ್ರೀಂ ನಲ್ಲಿ ಸಲ್ಲಿಕೆಯಾಗಿರುವ ಮರುಪರಿಶೀಲನಾ ಅಜರ್ಿಯಲ್ಲಿ ನ್ಯಾಯ ಸಿಗುವ ಆಶಯ ವ್ಯಕ್ತಪಡಿಸಿದರು. ತಹಶೀಲ್ದಾರ ವಿಜಯಲಕ್ಷೀ ಮನವಿ ಸ್ವೀಕರಿಸಿದರು.
ರಾಜೇಂದ್ರ ನಾಯ್ಕ, ನಿತ್ಯಾನಂದ ಗಾಂವಕರ, ನ್ಯಾಯವಾದಿಗಳಾದ ನಾಗರಾಜ ನಾಯ್ಕ, ಉಮೇಶ ಎನ್.ನಾಯ್ಕ ಮಾತನಾಡಿದರು.
ಪ್ರಮುಖರಾದ ಭಾಸ್ಕರ ನಾವರ್ೇಕರ, ಎಂ.ಎಂ.ಕಕರ್ಿಕರ್, ಅರುಣ ಶೇಣ್ವಿ, ನಾಗೇಂದ್ರ ನಾಯ್ಕ, ಸಂಜಯ ನಾಯ್ಕ, ದಾಮೋದರ ರಾಯ್ಕರ, ವಿನಾಯಕ ಪಡ್ತಿ, ವೆಂಕಟೇಶ ಗೌಡ, ಹೂವಾ ಜಿ. ಖಂಡೇಕರ್, ರಾಮಚಂದ್ರ ಹೆಗಡೆ, ಬಿಂದೇಶ ನಾಯಕ ಹಿಚ್ಕಡ, ದಾಮೋದರ ರಾಯ್ಕರ, ನಾಗೇಂದ್ರ ನಾಯ್ಕ, ನಾಗೇಶ ಗೌಡ, ನಾಗೇಶ ಕೀಣಿ, ಕೃಷ್ಣಕುಮಾರ ಮಹಾಲೆ, ಸುರೇಶ ನಾಯ್ಕ ಸೇರಿದಂತೆ ನೂರಾರು ಜನರು ಉಪಸ್ಥಿ ತರಿದ್ದರು. ಸಿಪಿಐ ಬಿ.ಪ್ರಮೋದ ಕುಮಾರ ಮತ್ತು ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿದರು.