ಮುಸ್ಲಿಂ ಸಮುದಾಯ ಶೈಕ್ಷಣಿಕವಾಗಿ ಮುಂದೆ ಬರುವ ಅಗತ್ಯವಿದೆ

ಲೋಕದರ್ಶನ ವರದಿ

ಘಟಪ್ರಭಾ 23: ಮುಸ್ಲಿಂ ಸಮುದಾಯ ಶೈಕ್ಷಣಿಕವಾಗಿ ಮುಂದೆ ಬರುವ ಅಗತ್ಯವಿದೆ. ಪಾಲಕರು ತಮ್ಮ ಮಕ್ಕಳ ಪೋಷನೆಯೊಂದಿಗೆ ವಿದ್ಯಾಬ್ಯಾಸದ ಬಗ್ಗೆ ಕಾಳಜಿ ವಹಿಸಬೇಕೆಂದು ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಸಿ.ಮನ್ನಿಕೇರಿ ಹೇಳಿದರು.

ಅವರು ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು  ಶಾಲೆ ಮಲ್ಲಾಪೂರ ಪಿ.ಜಿ ಇದರ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 7ನೇ ತರಗತಿ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮತನಾಡುತ್ತ, ಮುಸ್ಲಿಂ ಸಮುದಾಯದ ಪಾಲಕರು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿಲ್ಲ. ಇದರಿಂದ ಈ ಸಮಾಜ ಶಿಕ್ಷಣದಿಂದ ದೂರು ಉಳಿಯುತ್ತಿದೆ. ಸರ್ಕಾರ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಅವುಗಳ ಸದುಪಯೋಗ ಪಡೆದಕೊಂಡು ಉನ್ನತ ಶಿಕ್ಷಣ ಪಡೆಯುವತ್ತ ಕಾಳಜಿವಹಿಸಬೇಕೆಂದು  ಹೇಳಿದರು.   

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಅನ್ನದಾನೇಶ್ವರ ದೇವರು ಹಾಗೂ ಬಿಇಒ ಎ.ಸಿ.ಮನ್ನಿಕೇರಿ ಅವರನ್ನು ಸತ್ಕರಿಸಲಾಯಿತು. ಇದೇ ಸಂದರ್ಭದಲ್ಲಿ ಶಾಲೆಯ ಅಭಿವೃದ್ಧಿಗೆ ಧನ ಸಹಾಯ ಮಾಡಿದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿದ ವಿದ್ಯಾಥರ್ಿಗಳಿಗೆ ಬಹುಮಾನ ವಿತರಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. 

ವೇದಿಕೆಯ ಮೇಲೆ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಅಲ್ತಾಫ ಉಸ್ತಾದ, ಪ.ಪಂ ಸದಸ್ಯರಾದ  ಸಲೀಮ ಕಬ್ಬೂರ, ಇಮ್ರಾನ ಬಟಕುರ್ಕಿ, ಹಿರಿಯರಾದ ಜಾವೇದ ಕಬ್ಬೂರ, ಗೌಸ ಕಿತ್ತೂರಕರ, ಶೇಖರ ಕುಲಗೋಡ, ಜಿ.ಎಸ್.ರಜಪೂತ, ರಾಜೇಸಾಬ ಮುಲ್ಲಾ, ಕಬೀರ ಕಬ್ಬೂರ, ಎನ್.ಎಂ.ಬಾಗೆ, ಮುನ್ನಾ ಸೌದಾಗರ, ನೂರಜಾನ ಬೋರಗಾವಿ, ತಬಸ್ಸುಮ ಕಬ್ಬೂರ, ಸಿ.ಆರ್.ಪಿ ಬಿ.ಎ.ಡಾಂಗೆ, ಕೆ.ಟಿ.ಪಾಟೀಲ, ಶಿಕ್ಷಕ ಡಿ.ಜೆ.ಕಲಾರಕೊಪ್ಪ, ಡಿ.ಕೆ.ಜಮಾದಾರ, ಎಸ್.ಎಮ್.ಖಾನಜಾದೆೆ, ಎಸ್.ಎಮ್.ಬಾಗಸಿರಾಜ ಸೇರಿದಂತೆ ಅನೇಕರು ಇದ್ದರು. ಶಿಕ್ಷಕಿ ಎಮ್.ಎ.ಸಿದ್ಧಿಕಿ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.