ಪ್ರಯಾಗ್ ರಾಜ್, ನ 19 : ಆಯೋಧ್ಯೆ ಭೂ ವಿವಾದ ಕುರಿತು ಸುಪ್ರೀಂ ಕೋರ್ಟ್ ನ ಇತ್ತೀಚಿನ ತೀರ್ಪನ್ನು ಪ್ರಶ್ನಿಸಿ ಮರು ಪರಿಶೀಲನಾ ಆರ್ಜಿ ಸಲ್ಲಿಸಲು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ( ಎಐಎಂ ಪಿ ಎಲ್ ಬಿ)ಯ ನಿರ್ಧಾರವನ್ನು ಅಖಿಲ ಭಾರತೀಯ ಅಖಾರ ಪರಿಷತ್ ಅಧ್ಯಕ್ಷ ಮಹಂತ ನರೇಂದ್ರ ಗಿರಿ ಮಂಗಳವಾರ ಟೀಕಿಸಿದ್ದಾರೆ ದೇಗುಲ ನಿರ್ಮಿಸುವ ಪವಿತ್ರ ಕಾರ್ಯಕ್ಕೆ ಯಾವುದೇ ಅಡ್ಡಿಪಡಿಸದಂತೆ ಮುಸ್ಲಿಂ ವೈಯಕ್ತಿಕ ಮಂಡಳಿಗೆ ಸಲಹೆ ನೀಡಿರುವ ಅವರು, ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ದ ದೇಶದ ಹಿತಾಸಕ್ತಿಯಿಂದ ಮೇಲ್ಮನವಿ ಸಲ್ಲಿಸುವುದು ಬೇಡ. ತೀರ್ಪನ್ನು ಹೆಚ್ಚಿನ ಸಂಖ್ಯೆಯ ಮುಸ್ಲಿಮರು ಒಪ್ಪಿಕೊಂಡಿರುವಾಗ ವೈಯಕ್ತಿಕ ಕಾನೂನು ಮಂಡಳಿ ಯಾವುದೇ ಅಡೆತಡೆ ಒಡ್ಡಬಾರದು ಎಂದು ಹೇಳಿದ್ದಾರೆ. ಸುಪ್ರೀಂ ಕೋರ್ಟ್ ಐತಿಹಾಸಿಕ ತೀಪು ನೀಡಿದ ನಂತರ ದೇಶದಲ್ಲಿ ಶಾಂತಿ, ನೆಮ್ಮದಿ ನೆಲೆಸಿದೆ. ನ್ಯಾಯಾಂಗ ಹಾಗೂ ಸಂವಿಧಾನದ ಮೇಲೆ ವಿಶ್ವಾವಿಲ್ಲದವರು ಮಾತ್ರ ತೀರ್ಪನ್ನು ಪ್ರಶ್ನಿಸುತ್ತಿದ್ದಾರೆ ಎಂದರು. ತೀರ್ಪುನ್ನು ಗೌರವಿಸಿ, ಅದರ ವಿರುದ್ದ ಮರು ಪರಿಶೀಲನಾ ಆರ್ಜಿ ಸಲ್ಲಿಸದಿರಲು ನಿರ್ಧರಿಸಿರುವ ಬಾಬ್ರಿ ಮಸೀದಿ ಖಟ್ಲೆದಾರ ಇಕ್ಬಾಲ್ ಅನ್ಸಾರಿ, ಸುನ್ನಿ ವಕ್ಫ್ ಮಂಡಳಿ ಅಧ್ಯಕ್ಷ ಝಫರ್ ಫಾರೂಕಿ ಅವರ ನಿಲುವನ್ನು ಮಹಂತ ಗಿರಿ ಸ್ವಾಗತಿಸಿದರು.