ಸರಣಿ ಮನೆಗಳ್ಳತನ: ಜನತೆಯಲ್ಲಿ ಭೀತಿ

Serial home burglaries: Panic among the masses

ಸರಣಿ ಮನೆಗಳ್ಳತನ: ಜನತೆಯಲ್ಲಿ ಭೀತಿ  

ಜಮಖಂಡಿ 11: ನಗರದಲ್ಲಿ ತಡರಾತ್ರಿಯಲ್ಲಿ ಐದು ಮನೆಗಳು, ಒಂದು ಕಿರಾಣಿ ಅಂಗಡಿ ಸಮೇತ ಸರಣಿ ಕಳ್ಳತನ ಮಾಡಿರುವ ಘಟನೆ ನಡೆದಿದ್ದು ಇದರಿಂದ ಜನತೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. 

ನಗರದ ಅರ​‍್ತ ಕಾಲೋನಿಯಲ್ಲಿ ಐದು ಮನೆಗಳ ಬೀಗವನ್ನು ಮುರಿದು ಸರಣಿ ಕಳ್ಳತನ ನಡೆದಿರುವ ಘಟನೆಯನ್ನು ನೋಡಿದ ಕಾಲೋನಿಯ ಜನರು ಬೆಚ್ಚಿ ಬಿದ್ದಿದ್ದಾರೆ. ತಡರಾತ್ರಿಯಲ್ಲಿ ಕಳ್ಳರು ತಮ್ಮ ಕೈಚಳಕವನ್ನು ಮೆರೆದು ಮನೆಗಳಿಗೆ ಹಾಕಿದ ಬೀಗವನ್ನು ಮುರಿದು ಮನೆಯಲ್ಲಿ ಇರುವ ಟ್ರೇಜರಿಗಳನ್ನು ಒಡೆದು ಹಾಗೂ ಕಪಾಟ್‌ಗಳಲ್ಲಿ ಇರುವ ಸಾಮಾನುಗಳನ್ನು ಕಿತ್ತು ಹಾಕಿದ್ದು. ತಮಗೆ ಬೇಕಾದ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆಂದು ಅಲ್ಲಿನ ನಿವಾಸಿಗಳು ತಿಳಿಸಿದ್ದಾರೆ. 

ಅರ​‍್ತ ಕಾಲೋನಿಯ ನಿವಾಸಿಗಳಾದ ಲಕ್ಷ್ಮಣ ರಾಜಪ್ಪ ಬಜಂತ್ರಿ, ಕಲ್ಲಪ್ಪ ಬಜಂತ್ರಿ, ಶಬಾನ ಗಣಿ ಸಗರ, ಪಾರೂಕ ಸಲೀಮ ಪಟೇಲ್, ಯೂನಸ್ ಮಹ್ಮದ ಶೇಖ, ಅಲ್ಲಮ್ಮಪ್ರಭು ಸಂಗಪ್ಪ ಉಪ್ಪಿನ ಅವರು ಮನೆಗಳನ್ನು ಹಾಗೂ ಕಿರಾಣಿ ಅಂಗಡಿಯನ್ನು ಹೀಗೆ ತಡರಾತ್ರಿಯಲ್ಲಿ ಸರಣಿ ಕಳ್ಳತನ ಮಾಡಿದ್ದಾರೆಂದು ತಿಳಿಸಿದ್ದಾರೆ. 

ದಾನಮ್ಮ ಬಡಾವಣೆಯ ಉಪ್ಪಿನ ಅವರ ಕಿರಾಣಿ ಅಂಗಡಿಯ ಮೇಲಿನ ಪತ್ರಾಸ ಕಟ್ಟು ಮಾಡಿ ಅಂಗಡಿಯೊಳ್ಳಗೆ ನುಗ್ಗಿ ಅಲ್ಲಿನ ಚಿಲ್ಲರೆ ಕಾಸುಗಳನ್ನು ಹಾಗೂ ಆರ್‌ಎಮ್‌ಡಿ ಗುಟ್ಕಾ ಪ್ಯಾಕೇಟ್‌ಗಳನ್ನು ಕಳ್ಳತನ ಮಾಡಿದ್ದು, ಅರ​‍್ತ ಕಾಲೋನಿಯ ನಿವಾಸಿ ಪಾರೂಕ ಸಲೀಮ ಪಟೇಲ್ ಅರ್ಧ ತೊಲೆ ಬಂಗಾರದ ಆಭರಣವನ್ನು ಕಳ್ಳತನ ಮಾಡಿದ್ದಾರೆಂದು ಮಾಹಿತಿ ನೀಡಿದ್ದಾರೆ. 

ಸರಣಿ ಕಳ್ಳತನ ನಡೆದ ಕಾಲೋನಿಗೆ ಶಹರ ಪೋಲಿಸರು ಭೇಟಿ ನೀಡಿ, ತನಿಖೆಯನ್ನು ಮುಂದುವರಿಸಿದ್ದಾರೆ.