ಹರ್ತಿ ಗ್ರಾಮದಲ್ಲಿ ಜ. 13 ರಂದು ವಚನ ದರ್ಶನ ಕಾರ್ಯಕ್ರಮದ ಸಮಾರೋಪ ಸಮಾರಂಭ
ಗದಗ : ತಾಲ್ಲೂಕಿನ ಶ್ರೀಕ್ಷೇತ್ರ ಹರ್ತಿ ಗ್ರಾಮದಲ್ಲಿ ಹಿರೇವಡ್ಡಟ್ಟಿಹಿಮಣಕವಾಡ ದೇವಮಂದಿರ ಮಹಾಮಠದ ಪೂಜ್ಯಶ್ರೀ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳಿಂದ ಜ. 2 ರಿಂದ ಆರಂಭಗೊಂಡ ವಚನ ದರ್ಶನ ಆಧ್ಯಾತ್ಮಿಕ ಪ್ರವಚನವು ಇದೇ ಜ. 13 ರಂದು ಸಂಜೆ 6.30 ಗಂಟೆಗೆ ಮಂಗಲ ಸಮಾರೋಪಗೊಳ್ಳಲಿದೆ.
ಈ ಕಾರ್ಯಕ್ರಮದಲ್ಲಿ ಹಾವೇರಿ ಹುಕ್ಕೇರಿಮಠದ ಶ್ರೀಮದ್ ವೀರಶೈವ ಶಿವಯೋಗ ಮಂದಿರದ ಉಪಾಧ್ಯಕ್ಷರಾದ ಪೂಜ್ಯಶ್ರೀ ಸದಾಶಿವ ಮಹಾಸ್ವಾಮಿಗಳು ಹಾಗೂ ಹುಬ್ಬಳ್ಳಿ- ವಿಜಯಪುರದ ಶಾಂತಾಶ್ರಮದ ಪೂಜ್ಯಶ್ರೀ ಸದ್ಗುರು ಅಭಿನವ ಸಿದ್ದಾರೂಡ ಮಹಾಸ್ವಾಮಿಗಳು ಸಾನಿಧ್ಯವಹಿಸಿವರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ.ಪಾಟೀಲ, ಸಂಸದರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ವಿಧಾನ ಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರ, ಮುಳಗುಂದದ ಬಿ.ಸಿ. ಬಂಗಾರಿ ಪ್ರಾಥಮಿಕ ಶಾಲೆಯ ಅಧ್ಯಕ್ಷರಾದ ಷಣ್ಮುಖಪ್ಪ ಬಡ್ನಿ, ಕುರ್ತಕೋಟಿ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರಾದ ಅಪ್ಪಣ್ಣ ಇನಾಮತಿ, ಗುತ್ತಿಗೆದಾರ ಕೆ.ವಿ.ಹಂಚಿನಾಳ, ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಮೋಹನ ದುರಗಣ್ಣವರ ಸೇರಿದಂತೆ ಮುಂತಾದವರು ಆಗಮಿಸುವರು.
ಜ. 2 ರಿಂದ 13 ರ ವರೆಗೆ ವಚನ ದರ್ಶನ ಆಧ್ಯಾತ್ಮಿಕ ಪ್ರವಚನದಲ್ಲಿ ಸಂಗೀತ ಸೇವೆ ನೀಡಿದ ಕಲಬುರಗಿಯ ಪಂ. ಸಂಗಮೇಶ ಪಾಟೀಲ ಹಾಗೂ ತಬಲಾ ಸಾಥ್ ನೀಡಿದ ಕರಡಕಲ್ಲಿನ ತೋಟೆಂದ್ರ ಕುಮಾರ ಅವರನ್ನು ಹಾಗೂ ಈ ಕಾರ್ಯಕ್ರಮಕ್ಕೆ ಸಹಾಯ, ಸಹಕಾರ ನೀಡಿದ ದಾನಿಗಳಿಗೆ ಸನ್ಮಾನ ಮಾಡಲಾಗುವುದು ಎಂದು ವಚನ ದರ್ಶನ ಆಧ್ಯಾತ್ಮಿಕ ಪ್ರವಚನ ಸೇವಾ ಸಮಿತಿ ಹಾಗೂ ಹರ್ತಿ ಗ್ರಾಮದ ಗುರು ಹಿರಿಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.