ವಿಜಯಪುರ ಸರ್ವ ರಂಗದ ಏಳಿಗೆಗೆ ಶ್ರಮಿಸಿದ ಲಯನ್ಸ್‌ ಕ್ಲಬ್ ಪರಿವಾರ

ವಿಜಯಪುರ ಸರ್ವ ರಂಗದ ಏಳಿಗೆಗೆ ಶ್ರಮಿಸಿದ ಲಯನ್ಸ್‌ ಕ್ಲಬ್ ಪರಿವಾರ The Lions Club family worked hard for the overall progress of Vijayapura

ಲಯನ್ಸ್‌ ಕ್ಲಬ್ ಆಫ್ ಬಿಜಾಪುರ ಪರಿವಾರದ ಪದಗ್ರಹಣ ಸಮಾರಂಭದಲ್ಲಿ ವೀರನಗೌಡ ಹೀರೆಗೌಡರ ಮೆಚ್ಚುಗೆ 

ವಿಜಯಪುರ 01: ಸಾಮಾಜಮುಖಿ ಕಾರ್ಯಗಳಲ್ಲಿ ಲಯನ್ಸ್‌ ಕ್ಲಬ್ ಹಲವು ದಶಕಗಳಿಂದ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಸರ್ವ ರಂಗದ ಏಳಿಗೆಗೆ ಶ್ರಮಿಸಿದೆ ಎಂದು ಲಯನ್ಸ್‌ ಅಂತಾರಾಷ್ಷ್ರೀಯ ಸಂಸ್ಥೆಯ 317-ಃ ಜಿಲ್ಲಾ ವಲಯದ ಮಾಜಿ ಡಿಸ್ಟ್ರಿಕ್ಟ್‌ ಗವರ್ನರೂ ಹಾಗೂ ಪಿಡಬ್ಲ್ಯುಡಿ ಇಲಾಖೆಯ ಎಕ್ಸಿಕ್ಯೂಟಿವ ಇಂಜನಿಯರ್ ಎಂ.ಜೆ.ಎಫ್ ಹಾವೇರಿಯ ಲಯನ್ ವೀರನಗೌಡ ಹೀರೆಗೌಡರ ಬಣ್ಣಿಸಿದರು. 

ನಗರದ ಮಧುವನ ಹೋಟೆಲ್‌ನಲ್ಲಿ ನಡೆದ ಲಯನ್ಸ್‌ ಕ್ಲಬ್ ಆಫ್ ಬಿಜಾಪುರ ಪರಿವಾರದ 2025-26ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ವಿಜಾಪುರ ಲಯನ್ಸ್‌ ಕ್ಲಬ್ ಪರಿವಾರದವರು ಕೂಡ ಈ ನಿಟ್ಟಿನಲ್ಲಿ ಕಾರ್ಯೋನ್ಮುಕರಾಗಿ ಸೇವೆಗೈಯುತ್ತಿರುವುದು ಅಭಿನಂದನಾರ್ಹ ಎಂದು ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಅವರು ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. 

ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ ಮಾತನಾಡಿ, ಲಯನ್ಸ್‌ ಸಂಸ್ಥೆ ಕೇವಲ ಒಂದು ಜಿಲ್ಲೆ, ತಾಲೂಕುಗೆ ಸಿಮೀತವಾಗದೇ ಒಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಸಾಮಾಜಿಕ ಸೇವೆ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಲಯನ್ಸ್‌ ಪರಿವಾರದ ಮಾರ್ಗದರ್ಶಕ ಅಧಿಕಾರಿ ಜಮಖಂಡಿ ಲಯನ್ಸ ಕ್ಲಬ್ಬಿನ ಪ್ರೊ.ಬಸವರಾಜ ಕೊಣ್ಣುರ ಮಾತನಾಡಿ, ಕೇವಲ ವ್ಯಕ್ತಿಯಾಗಿ ಕೆಲಸ ಮಾಡುವುದಕಿಂತ ಸಾಮೂಹಿಕವಾಗಿ ಶ್ರಮಪಟ್ಟರೆ ಅತಿ ಹೆಚ್ಚು ಸಾಧನೆ ಮಾಡಲು ಸಾಧ್ಯ. ಹೀಗಾಗಿ ಸಂಘ-ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಹೆಚ್ಚಚ್ಚು ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.  

ವಿಶೇಷ ಅತಿಥಿಗಳಾಗಿ ಆಗಮಿಸಿದ್ದ ಸಮಾಜ ಸೇವಕಿ ಶುಭದಾ ನಾವದಗಿ ಮಾತನಾಡಿ, ಮುಂಬರುವ ದಿನಗಳಲ್ಲಿ ಲಯನ್ಸ ಪರಿವಾರ ಕೈಗೊಳ್ಳುವ ಯವುದೇ ಸಮಾಜಮುಖಿ ಚಟುವಟಿಕೆಗಳಿಗೆ ತಮ್ಮಿಂದ ಯಾವುದೇ ರೀತಿಯ ಸಹಾಯ ಬೇಕಾದರೇ ಮಾಡಲು ಸಿದ್ಧ ಎಂದು ಹೇಳಿದರು.  

ನೂತನ ಅಧ್ಯಕ್ಷರಾಗಿ ಸಹಕಾರ ಸಂಘಗಳ ನಿವೃತ್ತ ನೋಂದಣಿ ಜಿಲ್ಲಾ ಅಧಿಕಾರಿ ಚಿದಾನಂದ ನಿಂಬಾಳ, ಕಾರ್ಯದರ್ಶಿಗಳಾಗಿ ವಿದ್ಯಾ ಕೊಟೆನ್ನವರ, ಖಜಾಂಚಿಗಳಾಗಿ ಪುಷ್ಪಾ ಮಹಾಂತಮಠ, ಸಂಪರ್ಕ ಅಧಿಕಾರಿಯಾಗಿ ಸಂಸ್ಥಾಪಕ ಡಾ. ಅಶೋಕಕುಮಾರ ರಾ.ಜಾಧವ, ಸದಸ್ಯತ್ವ ಸಮಿತಿಯ ಚೇರಮನ್ನರಾಗಿ ಫಯಾಜ ಕಲಾದಗಿ ಇವರುಗಳೊಂದಿಗೆ ಇನ್ನಿತರ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ವೇದಿಕೆಯ ಮೇಲೆ ಅತಿಥಿಗಳಲ್ಲದೇ, ನಿಕಟಪೂರ್ವ ಅಧ್ಯಕ್ಷರಾದ ಶಶಿಕಲಾ ಇಜೇರಿ, ರಾಜೇಶ ಗಾಯಕವಾಡ, ಪುಷ್ಪಾ ಮಹಾಂತಮಠ, ವಿದ್ಯಾ ಕೊಟೆನ್ನವರ, ವಲಯ ಚೇರಮನ್ನರಾದ ಪ್ರೋ. ಎಸ. ಎಸ. ರಾಜಮಾನ್ಯ, ಡಾ. ಬಾಬುರಾಜೇಂದ್ರ ನಾಯಕ ಇದ್ದರು. 

ಇದೇ ಸಂದರ್ಭದಲ್ಲಿ ನಿರ್ದೇಶಕರುಗಳಾದ ವಾಲು ಚವ್ಹಾಣ, ಜಯಶ್ರೀ ಲದ್ವಾ, ಎಸ್‌.ಎಸ್‌. ಗಂಗನಳ್ಳಿ, ಡಾ.ಗೀರೀಶ ಕುಲ್ಲೊಳ್ಳಿ, ಶಾಂತಾ ಉತ್ಲಾಸರ, ಇಂದುಮತಿ ಕನ್ನೂರ, ರಜನಿ ಸಂಬಣ್ಣಿ, ಸಾದೀಕ ಜಾನ್ವೇಕರ, ಪ್ರೋ. ಎಂ.ಬಿ. ರಜಪೂತ, ಅನೀತಾ ಕುಮಸಿ, ತಾರಾಸಿಂಗ ದೊಡಮನಿ, ಧೊಂಡಿಬಾ ರಾಠೋಡ, ಧರ್ಮರಾಯ ಮಮದಾಪುರ, ಅನಸೂಯಾ ನಿಂಬರಗಿ, ಸತ್ಯಕಾಮ ಕಟ್ಟಿ, ಮೋಹನ ಚವ್ಹಾಣ, ಛಾಯಾದೇವಿ ಮಸಿಯನವರ, ನೂತನ ಸದಸ್ಯರಾದ ಸುಜಾತಾ ಹತ್ತು, ಪುಜಾ ಗುಬ್ಬಿ, ಶ್ರೀದೇವಿ ಲೊಗಾಂವಿ, ಮಾಯಾ ಚೌಧರಿ, ಸುಜಾತ ವಾಡಕರ; ಭಾರತಿ ತೆಗ್ಗಿಹಳ್ಳಿಮಠ, ಮಹೇಶ ನಾಯಕ, ಸಿದ್ದು ಇಂಗಳೇಶ್ವರ,ಮಲ್ಲನಗೌಡ ಬಿರಾದಾರ, ರಾಜು ಹಿಪ್ಪರಗಿ ಅಲ್ಲದೇ ನಗರದ ಗಣ್ಯರಾದ ಬಾಬಾಸಾಹೇಬ ವಿಜಯದಾರ, ನಾಗರಾಜ ಲಂಬು, ರಾಜೇಶ ತೊರವಿ, ಅಲ್ಲದೇ ನೂತನ ಪದಾಧಿಕಾರಿಗಳಿಗೆ ಅಭಿನಂದಿಸಲು ಕುಟುಂಬ ಸದಸ್ಯರು; ಬಂಧು-ಮಿತ್ರರು ್ಘ ಹಲವಾರು ಅಭಿಮಾನಿಗಳು ಉಪಸ್ಥಿತರಿದ್ದರು. 

ಲಯನ್ಸ್‌ ಪರಿವಾರದ ಸಂಸ್ಥಾಪಕ ಡಾ.ಅಶೋಕಕುಮಾರ ರಾ.ಜಾಧವ ಅವರು ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾ ಕೊಟೆನ್ನವರ ವಂದನಾರೆ​‍್ಣ ಹಾಗೂ ಶೈಲಜಾ ಬಸವಪ್ರಭು ನಿರೂಪಣೆ ಮಾಡಿದರು.