ನವದೆಹಲಿ, ನ 22 : ಜೆಎನ್ಯು ವಿಷಯದ ಬಗ್ಗೆ ರಾಜ್ಯಸಭೆಯು ಶುಕ್ರವಾರ ಕೋಲಾಹಲಕ್ಕೆ ಸಾಕ್ಷಿಯಾಯಿತು.
ಸಭೆಯ ನಿಯಮಗಳನ್ನು ಪಾಲಿಸದಿದ್ದರೆ ಗಂಭೀರ ವಿಷಯಗಳ ಬಗ್ಗೆ ಚಚರ್ಿಸುವುದಾದರೂ ಹೇಗೆ, ಪ್ರತಿಯೊಬ್ಬರೂ ಸಂಯಮದಿಂದ ವತರ್ಿಸಿ ಎಂದು ವಂತೆ ಅಧ್ಯಕ್ಷರು ಸದಸ್ಯರಿಗೆ ಸೂಚಿಸಿದರಾರೂ ಯಾರೊಬ್ಬರೂ ಕಿವಿಗೊಡಲಿಲ್ಲ
ಸಿಪಿಐ ಸದಸ್ಯ ಕೆ.ಕೆ. ರಾಗೇಶ್ ಅವರು ಜೆಎನ್ಯು ವಿದ್ಯಾಥರ್ಿಗಳನ್ನು ತಮ್ಮ ಕ್ಯಾಂಪಸ್ನಿಂದ ಸಂಸತ್ ಭವನಕ್ಕೆ ಶಾಂತಿಯುತ ಮೆರವಣಿಗೆ ನಡೆಸುತ್ತಿರುವಾಗ ದೆಹಲಿ ಪೊಲೀಸರು ಇಲ್ಲಿಗೆ ಕ್ರೂರವಾಗಿ ಥಳಿಸಿದ್ದಾರೆ ಎಂಬ ವಿಷಯವನ್ನು ಎತ್ತಿದರು.
"ವಾಕ್ ಸ್ವಾತಂತ್ರ್ಯ ಇಲ್ಲವೇ? ಸಂಘದ ಸ್ವಾತಂತ್ರ್ಯ ಇಲ್ಲವೇ? ಸಭೆ ಸೇರುವ ಸ್ವಾತಂತ್ರ್ಯ ಇಲ್ಲವೇ? ಜೆಎನ್ಯು ವಿದ್ಯಾಥರ್ಿಗಳಿಗೆ ನಾಗರಿಕ ಸ್ವಾತಂತ್ರ್ಯವನ್ನು ಏಕೆ ನಿರಾಕರಿಸಲಾಗಿದೆ. ಕ್ಯಾಂಪಸ್ನಲ್ಲಿ ತುತರ್ು ರೀತಿಯ ಪರಿಸ್ಥಿತಿ ಏಕೆ ಇದೆ" ಎಂದು ಪ್ರಶ್ನಿಸಿದ ರಾಗೇಶ್, ಪೊಲೀಸ್ ಕ್ರಮದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಜೆಎನ್ಯುಗೆ ಉತ್ತಮ ಇತಿಹಾಸವಿದೆ ಎಂದು ಬಿಜೆಪಿ ಸದಸ್ಯ ಪ್ರಭಾತ್ ಝಾ, ಇದು ನೊಬೆಲ್ ಪ್ರಶಸ್ತಿ ವಿಜೇತ ಅಭಿಜಿತ್ ಬ್ಯಾನಜರ್ಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಂತಹ ವ್ಯಕ್ತಿಗಳನ್ನು ನೀಡಿದ ಸಂಸ್ಥೆಯಾಗಿದೆ, ಆದರೆ ಜೆಎನ್ಯು ಒಳಗೆ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ದುಷ್ಕಮರ್ಿಗಳು ಏಕೆ ಧ್ವಂಸಗೊಳಿಸಿದರು ಎಂದು ತಿಳಿಯಲು ಬಯಸುವುದಾಗಿ ಹೇಳಿದರು.
ಸ್ವಾಮಿ ವಿವೇಕಾನಂದರ ಪ್ರತಿಮೆ ಇರುವ ವೇದಿಕೆಯಲ್ಲಿ ಕೆಂಪು ಬಣ್ಣದಲ್ಲಿ 'ಭಗವಾ ಜಲಗ (ಕೇಸರಿ ಸುಡುತ್ತದೆ)' ಎಂದು ಬರೆದ ಜನರ ವಿರುದ್ಧ ಏಕೆ ತನಿಖೆ ಇಲ್ಲ ಎಂದು ಅವರು ಪ್ರಶ್ನಿಸಿದ ಕೂಡಲೇ, ವಿರೋಧ ಪಕ್ಷದ ಸದಸ್ಯರು ಪ್ರತಿಭಟನೆ ಆರಂಭಿಸಿದರು.
ಇದು ಹಿರಿಯರ ಸದನವಾಗಿದೆ. ನಿಯಮಗಳನ್ನು, ಸಭ್ಯತೆಯನ್ನು ಪಾಲಿಸಿ ಎಂದು ಸಭಾಧ್ಯಕ್ಷರು ಒತ್ತಾಯಿಸಿದರಾದರೂ, ಸದನ ಭಾರಿ ಕೋಲಾಹಲಕ್ಕೆ ಸಾಕ್ಷಿಯಾಯಿತು.