ಜೈನ ಅಸೋಸಿಯೇಷನ್ನಿನ ಸದಸ್ಯರಾಗಿ ಸಂತೋಷ ಜೈನ್ ಆಯ್ಕೆ
ಹೂವಿನ ಹಡಗಲಿ 11: ಕರ್ನಾಟಕ ಜೈನ ಅಸೋಸಿಯೇಷನ್ನಿನ ನೂತನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಂತೋಷ ಜೈನ್ ಆಯ್ಕೆಯಾಗಿದ್ದಾರೆ. ಕರ್ನಾಟಕ ಜೈನ ಅಸೋಸಿಯೇಷನ್ನಿನ ನೂತನ ಕಾರ್ಯಕಾರಿ ಸಮಿತಿಗೆ ವಿಜಯನಗರ ಜಿಲ್ಲೆಯಿಂದ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ರಮೇಶ ಬೂ.ಸವದಿ ಸದಸ್ಯರ ಪ್ರಮಾಣ ಪತ್ರ ನೀಡಿ ಗೌರವಿಸಿದ್ದಾರೆ. ನಂತರ ಸಂತೋಷ ಮಾತನಾಡಿಜೈನ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆಂದು, ತೀರ್ಥಂಕರ ಭಗವಾನರ ಹೆಸರಿನಲ್ಲಿ ಪ್ರಮಾಣ ಮಾಡಿದರು.