ಸಮಾಜದಲ್ಲಿ ಸಲಹೆ ಮಾರ್ಗದರ್ಶನ ಮಹತ್ವ: ಶಾಸಕ ಆನಂದ

ಸವದತ್ತಿ 13:     ಸರಕಾರಿ ನೌಕರರಿಗೆ ನಿವೃತ್ತಿ ಎಂಬುದು ವಯೋಮಾನದ ಮೇಲೆ ಅವಲಂಬಿತವಾಗಿದ್ದರೂ ಸಹಿತ ನಿವೃತ್ತಿ ನಂತರ ಸಮಾಜದಲ್ಲಿ ಅವರ ಸಲಹೆ ಮತ್ತು ಮಾರ್ಗದರ್ಶನ ಮಹತ್ವದ ಪಾತ್ರವನ್ನು ವಹಿಸುತ್ತವೆ ಎಂದು ಶಾಸಕ ಆನಂದ ಮಾಮನಿ ಹೇಳಿದರು.

ಸ್ಥಳೀಯ ಮಾಮನಿ ಕಲ್ಯಾಣ ಮಂಟಪದಲ್ಲಿ ಕನರ್ಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘದ 2018-19ನೇ ಸಾಲಿನ ಹಾಗೂ ಹಿರಿಯ ನಾಗರೀಕರ ಕ್ಷೇಮಾಭಿವೃದ್ದಿ ಸಂಘದ ವಾಷರ್ಿಕ ಸರ್ವ ಸಾಧಾರಣ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಸರಕಾರಿ ಹುದ್ದೆಯಲ್ಲಿ ತಮ್ಮ ಕರ್ತವ್ಯವನ್ನು ಪಾಲನೆ ಮಾಡಿ ನಿವೃತ್ತರಾಗಿರುವ ಹಿರಿಯ ನಾಗರೀಕರಿಗೆ ನಾವು ಗೌರವ ನೀಡಬೇಕಿದೆ ಎಂದ ಅವರು, ನಿವೃತ್ತ ನೌಕರರ ಅವಶ್ಯಕ ಬೇಡಿಕೆಗಳಿಗೆ ಸ್ಪಂಧಿಸುವದಾಗಿ ಭರವಸೆ ನೀಡಿದರು.

ಜಿ.ಜಿ.ಚೋಪ್ರಾ ಸರಕಾರಿ ಪ.ಪೂ ಕಾಲೇಜಿನ ಪ್ರಾಚಾರ್ಯ ಡಾ.ವೈ.ಎಮ್.ಯಾಕೊಳ್ಳಿ ಉಪನ್ಯಾಸ ನೀಡಿದರು.

ಚಿದಂಬರೇಶ್ವರಮಠದ ಶ್ರೀ ದಂಡಪಾಣಿ ದೀಕ್ಷಿತರು ಸಾನ್ನಿಧ್ಯವಹಿಸಿ ಮಾತನಾಡಿ, ನಿವೃತ್ತ ನಂತರದ ಬದುಕು ಧಾಮರ್ಿಕತೆಯತ್ತ ಸಾಗಿದಲ್ಲಿ ಮಾನಸಿಕ ನೆಮ್ಮದಿಯನ್ನು ಕಂಡುಕೊಳ್ಳಬಹುದಾಗಿದೆ ಎಂದರು. 

ನಿವೃತ್ತ ಉಪನ್ಯಾಸಕ ಎನ್.ಬಿ.ಮಲಕಣ್ಣವರ ರಚಿಸಿದ ಅನುಭಾವದೆಡೆಗೆ ನಾಟಕ ಗ್ರಂಥವನ್ನು ಬಿಡುಗಡೆಗೊಳಿಸಲಾಯಿತು. 75 ವಸಂತ ಪೂರೈಸಿದ ಸಂಘದ ಹಿರಿಯ ನಿವೃತ್ತ ಸದಸ್ಯರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.

ನಿವೃತ್ತ ನೌಕರರ ಸಂಘದ ಗೌರವಾಧ್ಯಕ್ಷ ಟಿ.ಎಲ್.ಬಿಜತ್ಕರ ಅಧ್ಯಕ್ಷತೆವಹಿಸಿದ್ದರು. ಬಿ.ಸಿ.ಪಾಟೀಲ, ಎ.ಎಮ್.ಲೋದಿ, ಸಂಘದ ಅಧ್ಯಕ್ಷ ಬಿ.ಬಿ.ಗೊರವನಕೊಳ್ಳ, ಕಾರ್ಯದಶರ್ಿ ಬಿ.ವಿ.ವಾಂಗಿ ಉಪಸ್ಥಿತರಿದ್ದರು.