ದುಬೈ, ಏ 20,ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಏಪ್ರಿಲ್ 23ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಮಿತಿ(ಸಿಇಸಿ) ಸಭೆಯನ್ನು ಕರೆದಿದೆ.
12 ಪೂರ್ಣ ಸದಸ್ಯರ ಸಿಇಒಗಳು ಮತ್ತು ಮೂವರು ಸಹಾಯಕ ಪ್ರತಿನಿಧಿಗಳನ್ನು ಒಟ್ಟುಗೂಡಿಸುವ ಈ ಸಭೆಯು ಸಿಇಸಿಗೆ ಕೋವಿಡ್-19 ಸಾಂಕ್ರಾಮಿಕ ರೋಗದ ಪ್ರಭಾವವನ್ನು ಒಟ್ಟಾಗಿ ಪರಿಗಣಿಸಲು ಅವಕಾಶವನ್ನು ಕಲ್ಪಿಸಲಿದೆ ಎಂದು ಐಸಿಸಿ ತಿಳಿಸಿದೆ.ಈ ಸಮಯದಲ್ಲಿ ಸದಸ್ಯರ ಆದ್ಯತೆಗಳ ಬಗ್ಗೆ ಸಂಪೂರ್ಣ ತಿಳುವಳಿಕೆಯನ್ನು ಪಡೆಯುವುದು ಮತ್ತು ಪ್ರತಿ ಪ್ರದೇಶದ ಸರ್ಕಾರದ ಸಲಹೆಯ ಆಧಾರದ ಮೇಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಅನ್ನು ಪುನರಾರಂಭಿಸಲು ಅಗತ್ಯವಾದ ಪ್ರಮುಖ ತಗ್ಗಿಸುವಿಕೆಯ ಅಂಶಗಳನ್ನು ಚರ್ಚಿಸುವುದು ಮತ್ತು ಹಂಚಿಕೊಳ್ಳುವುದು ಸಭೆಯ ಉದ್ದೇಶವಾಗಿದೆ.
ಇದಲ್ಲದೆ 2023ರವರೆಗೆ ಇರುವ ಫ್ಯೂಚರ್ ಟೂರ್ ಪ್ರೋಗ್ರಾಮ್(ಎಫ್ ಟಿಪಿ), ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ (ಡಬ್ಲ್ಯುಟಿಸಿ) ಮತ್ತು ಕ್ರಿಕೆಟ್ ವಿಶ್ವ ಕಪ್ ಸೂಪರ್ ಲೀಗ್ ಸರಣಿಗಳನ್ನು ಮುಂದೂಡುವ ಬಗ್ಗೆ ಸಿಇಸಿ ವಿಸ್ತೃತ ಚರ್ಚೆ ನಡೆಸಲಿದೆ. ಮುಖ್ಯವಾಗಿ ಕ್ರೀಡೆಯ ಮೇಲೆ ಕೊರೊನಾ ವೈರಸ್ ಉಂಟು ಮಾಡಿರುವ ಬಿಕ್ಕಟ್ಟನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಸಭೆಯಲ್ಲಿ ಚರ್ಚಿಸಲು ನಿರ್ಧರಿಸಲಾಗಿದೆ.