ನವದೆಹಲಿ, 25 ಮಹಾರಾಷ್ಟ್ರ ಸಕರ್ಾರ ರಚನೆ ಬಿಕ್ಕಟ್ಟಿನ ಕುರಿತು ಇಂದು ಸುಪ್ರೀಂಕೋಟರ್್ ನಲ್ಲಿ ಮಹತ್ವದ ವಿಚಾರಣೆ ನಡೆಯಲಿದ್ದು, ಇಂದೇ ಸಕರ್ಾರದ ಭವಿಷ್ಯ ನಿಧರ್ಾರವಾಗುವ ಸಾಧ್ಯತೆಯಿದೆ. ಬಿಜೆಪಿ ಮತ್ತು ಎನ್ ಸಿಪಿ ಪಕ್ಷಗಳ ಸಕರ್ಾರ ರಚನೆ ಪ್ರಶ್ನಿಸಿ ಮಹಾವಿಕಾಸ ಅಘಾಡಿಯು ಸುಪ್ರೀಂಕೋಟರ್್ ಮೆಟ್ಟಿಲೇರಿದ್ದು, ನ್ಯಾಯಮೂತರ್ಿ ಎನ್.ವಿ.ರಮಣ ನೇತೃತ್ವದ ತ್ರಿಸದಸ್ಯ ಪೀಠ ಭಾನುವಾರ ವಿಶೇಷ ವಿಚಾರಣೆ ನಡೆಸಿತ್ತು. ಸಕರ್ಾರ ರಚಿಸಲು ತಮಗೆ ಬಹುಮತವಿದೆ. ಆದ್ದರಿಂದ ರಾಷ್ಟ್ರಪತಿ ಆಡಳಿತವನ್ನು ಹಿಂಪಡೆದು, ತಮಗೆ ಸಕರ್ಾರ ರಚಿಸಲು ಅವಕಾಶ ಕಲ್ಪಿಸಬೇಕು ಎಂದು ಕೋರಿ ಮುಖ್ಯಮಂತ್ರಿ ಅಭ್ಯಥರ್ಿ ದೇವೇಂದ್ರ ಫಡ್ನವೀಸ್ ಅವರು ರಾಜ್ಯಪಾಲರಿಗೆ ಸಲ್ಲಿಸಿರುವ ಪತ್ರ ಹಾಗೂ ಅದಕ್ಕೆ ಪ್ರತಿಯಾಗಿ ಸಕರ್ಾರ ರಚನೆಗೆ ಆಹ್ವಾನಿಸಿ ರಾಜ್ಯಪಾಲರು ನೀಡಿರುವ ದಾಖಲೆಗಳನ್ನು ಸಲ್ಲಿಸುವಂತೆ ನ್ಯಾಯಪೀಠ ಸೂಚಿಸಿದೆ. ರಾಜ್ಯಪಾಲರ ಈ ನಡೆ ಪೂರ್ವಗ್ರಹ ಪೀಡಿತವಾಗಿದ್ದು, ದುರುದ್ದೇಶದಿಂದ ಕೂಡಿದೆ. ಜೊತೆಗೆ, ಫಡ್ನವೀಸ್ ಅವರಿಗೆ ವಿಶ್ವಾಸ ಮತ ಸಾಬೀತುಪಡಿಸಲು ಸಮಯ ನಿಗದಿಪಡಿಸಿಲ್ಲ ಎಂದು ಅಜರ್ಿದಾರರು ಆಕ್ಷೇಪಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಬಿಜೆಪಿ, ಸಂವಿಧಾನದ 361ನೇ ವಿಧಿಯೆಡಿ ರಾಜ್ಯಪಾಲರಿಗೆ ವಿಶೇಷ ಅಧಿಕಾರವಿದ್ದು, ಅವರು ತಮ್ಮ ನಡೆಗಳಿಗೆ ಉತ್ತರ ನೀಡಬೇಕಿಲ್ಲ. ರಾಜ್ಯಪಾಲರ ಕ್ರಮ ನ್ಯಾಯಾಂಗದ ವ್ಯಾಪ್ತಿಗೆ ಬರುವುದಿಲ್ಲ ಎಂದು ವಾದಿಸಿದೆ. ರಾಜ್ಯದಲ್ಲಿ ಶಿವಸೇನೆ, ಎನ್ ಸಿ ಪಿ ಹಾಗೂ ಕಾಂಗ್ರೆಸ್ ನ ವಿಕಾಸ ಅಘಾಡಿ ಮೈತ್ರಿಕೂಟದಲ್ಲಿ ಸಕರ್ಾರ ರಚನೆಯ ಕಸರತ್ತು ನಡೆಸಿರುವಾಗಲೇ ಏಕಾಏಕಿ ಮಹಾರಾಷ್ಟ್ರದಲ್ಲಿ ಬಿಜೆಪಿ ಎನ್ ಸಿಪಿ ಸಕರ್ಾರ ರಚನೆಯಾಗಿತ್ತು. ಮುಖ್ಯಮಂತ್ರಿಯಾಗಿ ಬಿಜೆಪಿ ದೇವೇಂದ್ರ ಫಡ್ನವೀಸ್ ಹಾಗೂ ಉಪಮುಖ್ಯಮಂತ್ರಿಯಾಗಿ ಎನ್ ಸಿಪಿಯ ಅಜಿತ್ ಪವಾರ್ ಶನಿವಾರ ಪ್ರಮಾಣವಚನ ಸ್ವೀಕರಿಸಿದ್ದರು. ಬಿಜೆಪಿ ಈಗ ತಾವು ವಿಶ್ವಾಸ ಮತ ಯಾಚಿಸಲು ಸಿದ್ಧ , ಆದರೆ ಕಾಲಾವಕಾಶ ಬೇಕು ಎಂಬ ಹೇಳಿಕೆ ನೀಡುತ್ತಿದೆಯಾದರೂ, ಸುಪ್ರೀಂಕೋಟರ್್ ಅದಕ್ಕೆ ಗಡುವು ನಿಗದಿಪಡಿಸುವ ಸಾಧ್ಯತೆಯಿದೆ.