ಸಂತ ಬಾಳುಮಾಮಾ ದೇವರ ಜಾತ್ರೆ

ಲೋಕದರ್ಶನ ವರದಿ

ಸಂಬರಗಿ: ಕನರ್ಾಟಕ ಮಹಾರಾಷ್ಟ್ರ ಗಡಿ ಪ್ರದೇಶದಲ್ಲಿರುವ ಶಿರೂರ ಗ್ರಾಮದಲ್ಲಿ ಸಂತ ಬಾಳುಮಾಮಾ ದೇವರ ಜಾತ್ರೆಯನ್ನು ಡಿಸೆಂಬರ್ 8 ರಿಂದ 10 ರವರೆಗೆ ಜರುಗಲಾಗುವದು.

ಡಿಸೆಂಬರ್ 8 ರಂದು ದೇವರ ವಿಶೇಷ ಪೂಜೆ ಹಾಗೂ ರಾತ್ರಿ ಡೊಳ್ಳಿನ ಪದಗಳು ಹಾಗೂ ಸಾಂಸ್ಕೃತೀಕ ಕಾರ್ಯಕ್ರಮಗಳು ಡಿಸೆಂಬರ್ 9 ರಂದು ಮಹಾ ನೈವೆಧ್ಯ ವಿಶೇಷ ಪೂಜೆ ಹಾಗೂ ಸಾಂಸ್ಕೃತೀಕ ಕಾರ್ಯಕ್ರಮಗಳು ರಾತ್ರಿ ಡೊಳ್ಳಿನ ಪದಗಳು ಡಿಸೆಂಬರ್ 10 ರಂದು ದೇವರ ಪಲ್ಲಕ್ಕಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹಾಗೂ ಜಾತ್ರಾ ಮುಕ್ತಾಯ.

ಜಾತ್ರೆಯಲ್ಲಿ 3 ದಿನ ಕಾಲ ಸದ್ಗುರು ಕೊಂಡಿಬಾ ಮಹಾರಾಜ ಇವರ ಮಠದಿಂದ ಮಹಾಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ. ಜಾತ್ರೆಗೆ ಬರುವ ಭಕ್ತಾದಿಗಳು ಅಥಣಿ, ಮಿರಜ, ಕವಟೆ ಮಹಾಂಕಾಲ ಘಟಕದಿಂದ ಬಸ್ಸ್ ಸೌಲಭ್ಯ ಕಲ್ಪಿಸಲಾಗಿದೆ. 

ಜಾತ್ರೆಯನ್ನು ಶಾಂತಿಯುತವಾಗಿ ಮುಕ್ತಾಯಗೊಳಿಸಬೇಕೆಂದು ಜಾತ್ರಾ ಕಮಿಟಿ ಮುಖಂಡರು ವಿಲಾಸ ಮೊಟೆ, ಡಾ ಎಸ್ ಎಲ್ ಪಾಟೀಲ, ಶ್ರಿಮಂತ ಕಾರಕೆ ವಿನಂತಿಸಿದ್ದಾರೆ