ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆ ಎಲ್ಲರೂ ಪಾಲಿಸಬೇಕಾದ ಅವಶ್ಯಕತೆ ಇದೆ

ಬೆಳಗಾವಿ: 13 : ಸಮಾಜದಲ್ಲಿ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೊಳದಿದ್ದರೆ ಸಮಾಜದಲ್ಲಿ ಸ್ತ್ರಿ ಪುರುಷರ ಲಿಂಗಾನುಪಾತದಲ್ಲಿ ಸಾಕಷ್ಟು ವ್ಯತ್ಯಾಸ ಕಂಡು ಬಂದು ಸಮಾಜದ ಸ್ಥಿತಿಗತಿ ಏರುಪೇರಾಗಿ ನಾವು ತುಂಬಾ ಕ್ಲಿಷ್ಟಕರ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ ಎಂದು ಜಿಲ್ಲಾ ಸಕ್ಷಮ ಪ್ರಾಧಿಕಾರ ಮತ್ತು ಸಲಹಾ ಸಮಿತಿ ಪಿ.ಸಿ ಮತ್ತು ಪಿಎನ್ಡಿಟಿ ಅಧ್ಯಕ್ಷರಾದ ಡಾ.ಸಂಜಯ ಹೊಸಮಠ ಅವರು ಹೇಳಿದರು.

ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ ಹಾಗೂ ಜಿಲ್ಲಾ ಸಕ್ಷಮ ಪ್ರಾಧಿಕಾರ ಮತ್ತು ಸಲಹಾ ಸಮಿತಿ ಪಿ.ಸಿ ಮತ್ತು ಪಿಎನ್ಡಿಟಿ ಬೆಳಗಾವಿ ಇವರುಗಳ ಸಂಯುಕ್ತಾಶ್ರಯಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಕಾಲೇಜು ವಿದ್ಯಾಥರ್ಿಗಳಿಗಾಗಿ "ಚಚರ್ಾಸ್ಪಧರ್ೆಯನ್ನು ಇತ್ತಿಚೇಗೆ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಬಿಮ್ಸ್) ನಲ್ಲಿ ಜರುಗಿತು. 

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಶಶಿಕಾಂತ ಮುನ್ಯಾಳ ಅವರು ಬಹುಮಾನಗಳನ್ನು ವಿತರಿಸಿ, "ಸದೃಡ ಸಮಾಜ, ಸದೃಡವಾದ ಸಂಸ್ಕೃತಿ, ಸಂಸ್ಕಾರ ಹಾಗೂ ಸದೃಡವಾದ ದೇಶದ ನಿಮರ್ಾಣಕ್ಕಾಗಿ ಹಾಗೂ ಉತ್ತಮವಾದ ಆರೋಗ್ಯಕ್ಕಾಗಿ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕಾಗಿದೆ" ಎಂದು ನುಡಿದರು.

ಚಿಕ್ಕೋಡಿ ಅಪರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಶೈಲಜಾ ತಮ್ಮಣ್ಣವರ ಮಾತನಾಡಿ, ಈ ದೇಶದಲ್ಲಿ ಗಂಡು ಹೆಣ್ಣು ಲಿಂಗಾನುಪಾತದ ವ್ಯತ್ಯಾಸದಿಂದಾಗಿ ಅತ್ಯಾಚಾರ, ಅಸಮಾನತೆ, ವರದಕ್ಷಣೆ ಕಿರುಕುಳ ಉಂಟಾಗಿ ಸಮಾಜದ ಮೇಲೆ ದುಷ್ಪರಿನಾಮಗಳು ಉಂಟಾಗುತ್ತವೆ ಸಮಾಜದಲ್ಲಿ ಹೆಣ್ಣು ಮಗುವಿನ ಮಹತ್ವದ ಬಗ್ಗೆ ತಿಳಿಸಬೇಕೆಂದು ಹೇಳಿದರು.

    ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಸಾವಿತ್ರಿ ಬೆಂಡಿಗೇರಿ ಮಾತನಾಡಿ, ಇಂದಿನ ಯುವಜನತೆಯೇ ಈ ದೇಶದ ಬೆನ್ನಲುಬಗಳಾಗಿದ್ದಾರೆ. ಅದಕ್ಕಾಗಿ ಅವರಿಗೆ ಪಿ.ಸಿ ಮತ್ತು ಪಿಎನ್ಡಿಟಿ ಕಾಯ್ದೆಯ ಅರಿವು ಅನಿವಾರ್ಯ ಈ ಕಾಯ್ದೆಯ ಪಾಲನೆ ಯುವಕರ ಹೆಗಲ ಮೇಲಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ  ರಹೀಲಾ ಶೇಖ, ಶ್ರೀಮಂತ ಪಾಟೀಲ ಹಾಗೂ ಪಿ.ಸಿ ಮತ್ತು ಪಿಎನ್ಡಿಟಿ ಜಿಲ್ಲಾ ಸಲಹಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು