ವಿಜಯಪುರ ಮೇ.29 : ಸಾರ್ವಜನಿಕರ ಆರೋಗ್ಯಕ್ಕೆ ಹಾನಿಕರವಾಗಿರುವ ತಂಬಾಕು ಉತ್ಪನ್ನ ಮಾರಾಟ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾಮಟ್ಟದ ತ್ರೈಮಾಸಿಕ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಜಿಲ್ಲಾ ಹಾಗೂ ತಾಲೂಕಾ ತನಿಖಾ ತಂಡದ ಸದಸ್ಯರುಗಳಿಂದ ನಿರಂತರ ದಾಳಿ ಕೈಗೊಳ್ಳುಬೇಕು. ಎಲ್ಲಾ ತಾಲ್ಲೂಕುಗಳಲ್ಲಿ ತನಿಖಾ ದಳದ ಸದಸ್ಯರೊಂದಿಗೆ ಆಯಾ ತಾಲೂಕು ತಹಶೀಲ್ದಾರರು ನಾಲ್ಕು ತ್ರೈಮಾಸಿಕ ಸಭೆ ನಡೆಸಿ ಪ್ರತಿ ಮಾಹೆ 2-3 ದಾಳಿ ನಡೆಸುವ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಅನಧಿಕೃತವಾಗಿ ತಂಬಾಕು ಮಾರಾಟ ಕೇಂದ್ರಗಳ ಮೇಲೆ ತನಿಖಾ ತಂಡಗಳಿಂದ ಆಗಾಗ ದಾಳಿಯನ್ನು ನಡೆಸಬೇಕು. ಸಕರ್ಾರಿ ಕಚೇರಿಗಳಾದ ಮಾಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಮತ್ತು ಗ್ರಾಮ ಪಂಚಾಯತಿಗಳು ಉದ್ಯಮಿಗಳಿಗೆ ಪರವಾನಗಿ ನೀಡುವಾಗ ಎಲ್ಲ ಪಾನ್ ಶಾಪ್ಗಳು ಸೆಕ್ಷನ್-4 ಮತ್ತು ಸೆಕ್ಷನ್ 6(ಎ) ಸಂಬಂಧಿಸಿದ ನಾಮಫಲಕಗಳನ್ನು ಕಡ್ಡಾಯವಾಗಿ ಪ್ರದಶರ್ಿಸುವಂತೆ ಹಾಗೂ ಎಲ್ಲ ಅಂಗಡಿ, ಹೋಟೆಲ್, ರೆಸ್ಟೋರೆಂಟ್, ಬೇಕರಿ ಹಾಗೂ ಲಾಡ್ಜಗಳಲ್ಲಿ ಸೆಕ್ಷನ್-4 ಗೆ ಸಂಬಂಧಿಸಿದ ನಾಮಫಲಕವನ್ನು ಅಳವಡಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಸಕರ್ಾರಿ ಮತ್ತು ಸಕರ್ಾರೇತರ ಕಚೇರಿಗಳನ್ನು 'ತಂಬಾಕು ಮುಕ್ತ ಕಚೇರಿ' ಗಳನ್ನಾಗಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಎಲ್ಲ ಶಿಕ್ಷಣ ಸಂಸ್ಥೆಗಳು ಸೆಕ್ಷನ್-4 ಮತ್ತು ಸೆಕ್ಷನ್-6(ಬಿ) ಗೆ ಸಂಬಂಧಿಸಿದ ನಾಮಫಲಕಗಳನ್ನು ಅಳವಡಿಸಿ ತಂಬಾಕು ಮುಕ್ತ ವಲಯವನ್ನಾಗಿ ಮಾಡಬೇಕು ಎಂದರು.
ಸಿಂದಗಿ ತಾಲೂಕನ್ನು ಕೋಟ್ಪಾ-2003 ರ ಕಾಯ್ದೆಯ ಉನ್ನತ ಅನುಷ್ಠಾನ ತಾಲೂಕನ್ನಾಗಿ ಘೋಷಿಸಲು ಆಯ್ಕೆ ಮಾಡಿರುವದರಿಂದ, ಸಿಂದಗಿ ತಾಲೂಕಿನಲ್ಲಿ ಕೊಟ್ಪಾ ನಿಯಮಗಳು ಪರಿಣಾಮಕಾರಿಯಾಗಿ ಅನುಷ್ಠಾನ ಕೈಗೊಳ್ಳಬೇಕು.
ಕೋಟ್ಪಾ 2003ರ ಕಾಯ್ದೆಯ ಸೆಕ್ಷನ್-5 ಮತ್ತು 7 ರ ನಿಯಮ ಉಲ್ಲಂಘಿಸುವವರ ವಿರುದ್ದ ಕ್ರಮ ಜರುಗಿಸುವದು ಹಾಗೂ ಪ್ರತ್ಯಕ್ಷ ಹಾಗೂ ಪರೋಕ್ಷ ಜಾಹಿರಾತು ಫಲಕಗಳನ್ನು ತೆರುವುಗೊಳಿಸಬೇಕು. ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳನ್ನು ತಂಬಾಕು ಮುಕ್ತ ಪ್ರದೇಶಗಳಾಗಿಸುವ ನಿಟ್ಟಿನಲ್ಲಿ ಕಾರ್ಯಕೈಗೊಳ್ಳಬೇಕು ಎಂದರು.
ಸಭೆಯ ನಂತರ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮದ ಕುರಿತು ಅರಿವು ಮೂಡಿಸುವ ಅಟೋಗೆ ಹಸಿರು ನಿಶಾನೆ ನೀಡುವ ಮೂಲಕ ಚಾಲನೆ ನೀಡಿದರು.
ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ಡಾ.ಮಲ್ಲನಗೌಡ ಬಿರಾದಾರ ಮಾತನಾಡಿ ಮೇ 31 ರಂದು ವಿಶ್ವದಾದ್ಯಂತ ವಿಶ್ವ ತಂಬಾಕು ರಹಿತ ದಿನವೆಂದು ಆಚರಿಸಲಾಗುತ್ತಿದ್ದು. ವಿಶ್ವ ಆರೋಗ್ಯ ಸಂಸ್ಥೆ ಇದನ್ನು 1987 ರಲ್ಲಿ ಘೋಷಿಸಿದ್ದು ಅಂದಿನಿಂದ ಇದನ್ನು ಪ್ರತಿ ವರ್ಷ ಆಚರಿಸಲಾಗುತ್ತಿದೆ.
ಈ ವರ್ಷ "ಯುವ ಪೀಳಿಗೆಯನ್ನು ತಂಬಾಕು ಉದ್ಯಮಗಳ ಕುತಂತ್ರ ಹಾಗೂ ತಂಬಾಕು ಮತ್ತು ನಿಕೋಟಿನ್ನ ಬಳಕೆಯಿಂದ ರಕ್ಷಣೆ ಮಾಡುವುದು". ಧ್ಯೇಯ ವಾಕ್ಯದೊಂದಿಗೆ ತಂಬಾಕು ಉತ್ಪನ್ನಗಳ ಬಳಕೆಯಿಂದ ಉಂಟಾಗುವ ಸಾವು ನೋವುಗಳ ಜಿಲ್ಲಾದ್ಯಂತ ಜನರಲ್ಲಿ ಅರಿವು ಮೂಡಿಸಿ ಜನರು ತಂಬಾಕು ಉತ್ಪನ್ನಗಳಿಂದ ದೂರ ಉಳಿಯುವಂತೆ ಪ್ರೆರೇಪಿಸಲಾಗುತ್ತಿದೆ ಎಂದರು.
ಸಭೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಅನುಪಮ ಅಗರವಾಲ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಮಹಾನಗರ ಪಾಲಿಕೆ ಆಯುಕ್ತ ಹಷರ್ಾ ಶಟ್ಟಿ, ಜಿಲ್ಲಾ ಆರೋಗ್ಯಾಧಿಕಾರಿ ಮಹೇಂದ್ರ ಕಾಪ್ಸೆ, ಡಾ.ಕಟ್ಟಿ, ಡಾ. ಸಂಪತ್ಕುಮಾರ ಗುಣಾರೆ, ಡಾ.ಕವಿತಾ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು