ಲೋಕದರ್ಶನವರದಿ
ತಾಳಿಕೋಟೆ೨೦: ಕೊರೊನಾ ವೈರಸ್ ಹೆಮ್ಮಾರಿ ಇಡೀ ವಿಶ್ವದಾಧ್ಯಂತ ಒಕ್ಕರಿಸಿಕೊಂಡು ತನ್ನ ಉಪಟಳವನ್ನು ಹೆಚ್ಚಿಸುತ್ತಾ ಸಾಗಿದ್ದು ಇದನ್ನು ತಡೆಗಟ್ಟುವ ಸಲುವಾಗಿ ಹಗಲು ರಾತ್ರಿ ಎನ್ನದೇ ಕಾರ್ಯನಿರ್ವಹಿಸುತ್ತಿರುವ ಕೊರೊನಾ ವಾರಿಯಸರ್್ಗಳ ಕಾರ್ಯ ಮೆಚ್ಚುವಂತಹದ್ದಾಗಿದೆ ಎಂದು ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಅವರು ನುಡಿದರು.
ಬುಧವಾರರಂದು ತಾಲೂಕಿನ ಬ.ಸಾಲವಾಡಗಿ ಗ್ರಾಮದಲ್ಲಿ ಕೊರೊನಾ ವಾರಿಯಸರ್್ಗಳಿಗೆ ವೈಯಕ್ತಿಕವಾಗಿ ಸಿದ್ದಪಡಿಸಲಾದ ದಿನಸಿ ಕಿಟ್ಗಳನ್ನು ವಿತರಿಸಿ ಮಾತನಾಡುತ್ತಿದ್ದ ಅವರು ವಾರಿಯಸರ್್ಗಳ ಸಾಲಿನಲ್ಲಿ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಮತ್ತು ವೈಧ್ಯಕೀಯ ಸಿಬ್ಬಂದಿಗಳು, ಗ್ರಾಪಂ ಗಳಲ್ಲಿ ಪೌರಕಾಮರ್ಿಕರು ಮೊದಲಿಗರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ತಮ್ಮ ಕುಟುಂಭ ಮತ್ತು ತಮ್ಮ ಜೀವದ ಹಂಗು ತೊರೆದು ಕೆಲಸದಲ್ಲಿ ತೊಡಗಿಕೊಂಡಿದ್ದಾರೆ ಆಶಾ ಕಾರ್ಯಕರ್ತರು ತಮ್ಮ ಕೇವಲ ಗೌರವಧನ ಸಂಬಳವನ್ನೇ ಅವಲಂಬಿಸಿಕೊಂಡು ಜೀವನ ಸಾಗಿಸುವದರೊಂದಿಗೆ ಇಂತಹ ಸಂದಿಗ್ದಪರಸ್ಥಿತಿಯಲ್ಲಿ ಉತ್ತಮ ರೀತಿಯಿಂದ ದೇಶಾದ್ಯಂತ ಸೇವೆಯನ್ನು ನೀಡುತ್ತಿದ್ದಾರೆ ವೈಧ್ಯಕೀಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಹೊರರಾಜ್ಯಗಳಿಂದ ಬಂದ ಜನರನ್ನು ಹೋಂ ಕ್ವಾರಂಟೈನ ಮತ್ತು ಸಾಂಸ್ಥಿಕ ಕ್ವಾರಂಟೈನ್ಗಳಲ್ಲಿ ಅಗತ್ಯ ಸೇವೆಯನ್ನು ನೀಡುತ್ತಿದ್ದಾರೆ ಇವೇರೆಲ್ಲರ ಜೊತೆಗೂ ತಾಲೂಕಾಡಳಿತದ ತಹಶಿಲ್ದಾರರು ಮತ್ತು ತಾಪಂ ಕಾರ್ಯನಿವರ್ಾಹಕ ಅಧಿಕಾರಿಗಳು, ಪುರಸಭೆ ಮುಖ್ಯಾಧಿಕಾರಿಗಳು, ಗ್ರಾಂಪಂ ಅಧಿಕಾರಿಗಳು ಕೂಡಾ ಹೊರರಾಜ್ಯದಿಂದ ಬಂದಂತ ಎಲ್ಲ ಬಡ ಕೂಲಿಕಾಮರ್ಿಕರನ್ನು ಸಾಂಸ್ಥಿಕ ಕ್ವಾರಂಟೈನ್ಗೆ ಒಳಪಡಿಸಿ ಅವರೆಲ್ಲರಿಗೂ ಊಟ ಉಪಚಾರದ ಜೊತೆಗೆ ಅಗತ್ಯವಸ್ತುಗಳನ್ನು ಪೂರೈಕೆ ಮಾಡಿ ಕ್ವಾರಂಟೈನ್ನಲ್ಲಿರುವವರಿಗೆ ಕಾಡುತ್ತಿದ್ದ ಭಯವನ್ನು ಹೋಗಲಾಡಿಸುವಂತಹ ಕಾರ್ಯ ಮೆಚ್ಚುವಂತಹದ್ದಾಗಿದೆ ಈ ಕೋರಾನಾ ವೈರಸರ್್ಗಳಿಗೆ ಸೈನಿಕನಿಗೆ ನೀಡುವ ಗೌರವದಂತೆ ಒಂದು ಸಲಾಂ ಅಪರ್ಿಸುತ್ತೇನೆಂದ ಅವರು ಕ್ಷೇತ್ರದ ಜನರು ಭಯ ಪಡುವ ಅಗತ್ಯವಿಲ್ಲಾ ನಿಮ್ಮ ಜೊತೆಗೆ ನಾನೀದ್ದಿನಿ ಬಡಕೂಲಿಕಾಮರ್ಿಕರಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ದಿನಶಿ ಕಿಟ್ಗಳನ್ನು ಸಿದ್ದಪಡಿಸಿ ನೀಡಿದ್ದೇನೆ ಈಗಾಗಲೇ ದೇವರ ಹಿಪ್ಪರಗಿ ಮತಕ್ಷೇತ್ರದಲ್ಲಿಯ ಎಲ್ಲ ಕೆರೆಗಳನ್ನು ತುಂಬಿಸಲು ಮುಂದಾಗಿದ್ದೇನೆ ಮತ್ತು ಬೂದಿಹಾಳ-ಫೀರಾಪೂರ ಏತ ನೀರಾವರಿ ಯೋಜನೆಗೆ ಹಣವೂ ಕೂಡಾ ಬಿಡುಗಡೆ ಮಾಡಿಸಿದ್ದೇನೆ ಈ ಕಾರ್ಯವನ್ನು ಪೂರ್ಣಗೊಳಿಸಿ ನಿಮ್ಮ ಹೊಲದಲ್ಲಿಯೇ ಕೆಲಸಕೊಡುವಂತಹ ಕಾರ್ಯ ಮಾಡುತ್ತೇನೆಂದರು.
ಇನ್ನೋರ್ವ ಮುಖಂಡ ಸಂಗನಗೌಡ ಹೆಗರಡ್ಡಿ ಮಾತನಾಡಿ ಕೊರೊನಾ ಮಹಾಮಾರಿ ತನ್ನ ಕದಂಬ ಭಾವುವನ್ನು ಚಾಚುತ್ತಾ ಇಡೀ ವಿಶ್ವದಲ್ಲಿಯೇ ಆಥರ್ಿಕತೆಯನ್ನು ಕುಸಿಯುವಂತೆ ಮಾಡುವದರ ಜೊತೆಗೆ ಬಡ ಕೂಲಿಕಾಮರ್ಿಕರ ಕೆಲಸವನ್ನು ಕಿತ್ತುಕೊಂಡಿದೆ.
ಇಂತಹ ಸಂದೀಗ್ದ ಪರಸ್ಥಿತಿಯಲ್ಲಿ ಬಡಬಗ್ಗರ ಜೊತೆಗೆ ಕ್ವಾರಂಟೈನ್ಗೆ ಒಳಪಟ್ಟವರಿಗೆ ಮತ್ತು ವಾರಿಯಸರ್್ರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಅವರು ತಮ್ಮ ವೈಯಕ್ತಿಕವಾಗಿ ಒಂದು ತಿಂಗಳಿಗಾಗುವಷ್ಟು ದಿನಸಿ ಕಿಟ್ಗಳನ್ನು ಸಿದ್ದಪಡಿಸಿ ವಿತರಿಸುವಂತಹ ಕಾರ್ಯಮಾಡಿ ಎಲ್ಲರಿಗೂ ದೈರ್ಯತುಂಬುವಂತಹ ಕಾರ್ಯ ಮಾಡಿರುವದು ಮೆಚ್ಚುವಂತಹದ್ದಾಗಿದೆ.
ತಾಲೂಕಾ ಪಂಚಾಯತ್ ಮುಖ್ಯಕಾರ್ಯನಿವರ್ಾಕ ಅಧಿಕಾರಿ ಮಂಜುನಾಥ ಶಿವಪೂರೆ ಮಾತನಾಡಿ ಕೊರೊನಾ ವಾರಿಯಸರ್್ಗಳು ನಿತ್ಯ ಹಗಲು ರಾತ್ರಿ ಎನ್ನದೇ ಕೆಲಸ ಮಾಡುತ್ತಿದ್ದಾರೆ ಇವರುಗಳ ಕಾರ್ಯವನ್ನು ಮೆಚ್ಚಿದ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಅವರು ದಿನಸಿ ಕಿಟ್ಗಳ ಜೊತೆಗೆ ದೈರ್ಯತುಂಬುವಂತಹ ಕಾರ್ಯ ಮಾಡಿದ್ದಾರೆ ಅವರಿಗೆ ಎಲ್ಲರೂ ಕೃತಜ್ಞರಾಗಿದ್ದೇವೆಂದರು.
ಈ ಸಮಯದಲ್ಲಿ ಶಾಸಕರ ಸಹೋದರ ಸಾಹೇಬಗೌಡ ಪಾಟೀಲ(ಸಾಸನೂರ), ತಾಲೂಕಾ ತಹಶಿಲ್ದಾರ ಅನೀಲಕುಮಾರ ಢವಳಗಿ, ಬಿಇಓ ರೇಣಾಕಾ ಕಲ್ಬುಗರ್ಿ, ಆಡಳಿತ ವೈಧ್ಯಾಧಿಕಾರಿ ಡಾ.ಪ್ರಕಾಶ ಹುಕ್ಕೇರಿ, ಪಿ.ಎಸ್.ಐ.ವಸಂತ ಬಂಡಗಾರ, ತಾಪಂ ಸದಸ್ಯರಾದ ಸೋಮನಗೌಡ ಹಾದಿಮನಿ, ರಾಜುಗೌಡ ಕೊಳೂರ, ಬಸನಗೌಡ ಬಿರಾದಾರ, ಶೇಖರಗೌಡ ತಂಗಡಗಿ, ಭೀಮನಗೌಡ ಸಿದ್ದರಡ್ಡಿ, ಪ್ರಶಾಂತ ಹಾವರಗಿ,ಎಚ್.ಎಸ್.ಢವಳಗಿ, ಮೊದಲಾದವರು ಉಪಸ್ಥಿತರಿದ್ದರು.