ಹಸಿರು ವಲಯ ಚಿಕ್ಕಮಗಳೂರಿಗೂ ಕಾಲಿಟ್ಟ ಕೊರೋನಾ

ಚಿಕ್ಕಮಗಳೂರು, ಮೇ 19, ರಾಜ್ಯದಲ್ಲಿ ಹಸಿರು ವಲಯವಾಗಿ ಉಳಿದುಕೊಂಡಿದ್ದ ಜಿಲ್ಲೆ ಚಿಕ್ಕಮಗಳೂರಿಗೆ ಕೂಡ ಈಗ ಕೊರೋನಾ ವಕ್ಕರಿಸಿದೆ.ಜಿಲ್ಲೆಯ ಇಬ್ಬರಿಗೆ ಮಂಗಳವಾರ ಕೋವಿಡ್-19 ದೃಢಪಟ್ಟಿದೆ. ಮೂಡಿಗೆರೆ ವೈದ್ಯ ಮತ್ತು ತರೀಕೆರೆಯ ಮಹಿಳೆಯಲ್ಲಿ ಸೋಂಕು ಕಂಡುಬಂದಿದೆ. ಮಹಾರಾಷ್ಟ್ರದ ಮುಂಬೈಗೆ ಪ್ರಯಾಣ ಬೆಳೆಸಿದ ಹಿನ್ನೆಲೆಯುಳ್ಳ ತರಿಕೆರೆ 27 ವರ್ಷದ ಯುವತಿಯಲ್ಲಿ ಸೋಂಕು ಪತ್ತೆಯಾಗಿದೆ. ಮೂಡಿಗೆರೆಯ ವರ್ಷದ ವೈದ್ಯನ ಸೋಂಕಿನ ಮೂಲಗಳನ್ನು ಇನ್ನೂ ಪತ್ತೆಹಚ್ಚಬೇಕಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.ಸದ್ಯ ರಾಜ್ಯದಲ್ಲಿ ರಾಮನಗರ ಮತ್ತು ಚಾಮರಾಜನಗರ ಜಿಲ್ಲೆಗಳು ಮಾತ್ರ ಹಸಿರು ವಲಯಗಳಾಗಿ ಉಳಿದಿವೆ.