ಸಂವಿಧಾನ ಈ ದೇಶದ ಮೂಲ ಕಾನೂನು: ಪ್ರಕಾಶ ಕಾಂಬಳೆ

ಲೋಕದರ್ಶನ ವರದಿ 

ಬೆಳಗಾವಿ: ಪ್ರತಿದೇಶದ ಕಾನೂನಿನ ಅಡಿಪಾಯವೇ ಸಂವಿಧಾನ. ಇದರಲ್ಲಿ ಸಾಮಾಜಿಕ, ಆಥರ್ಿಕ, ರಾಜಕೀಯತತ್ವ ಚಿಂತನೆಗಳಿವೆ ಶಿವಾಜಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಪ್ರಕಾಶ. ಎಸ್. ಕಾಂಬಳೆ ಎಂದು ಅಭಿಪ್ರಾಯಪಟ್ಟರು.

ಆಸಿಯುನಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮ

ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಸಭಾಭವನದಲ್ಲಿ ಮಂಗಳವಾರ 26 ರಂದು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ, ಡಾ. ಬಿ.ಆರ್.ಅಂಬೇಡ್ಕರ್ ಅಧ್ಯಯನ ಪೀಠ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ,

ಸಂವಿಧಾನ ರಚನಾ ಸಮೀತಿಯಲ್ಲಿ ಏಳು ಜನ ಸದಸ್ಯರಿದ್ದರೂ ಭಾರತರತ್ನ ಡಾ.ಅಂಬೇಡ್ಕರ ಸಂಪೂರ್ಣ ಸಂವಿಧಾನವನ್ನು ರಚಿಸಿ ವಾಸ್ತವ ವಿಚಾರವನ್ನು ಪ್ರಸ್ತುತ ಪಡಿಸಿದರು. ಸ್ವಾತಂತ್ರ್ಯ ಪೂರ್ವ ಭಾರತದ ರಾಜಕೀಯ ಮತ್ತು ಸಾಮಾಜಿಕ ಸ್ಥಿತ್ಯಂತರಗಳು ಹೇಗೆ ಸಂವಿಧಾನರಚನೆಯ ಮೇಲೆ ಪ್ರಭಾವ ಬೀರಿದವು ಎಂಬುದನ್ನು ವಿವರಿಸಿದರು. ಅಂಬೇಡ್ಕರ್ ಜನ್ಮ ದಿನ ಎಪ್ರೀಲ್ 14ನ್ನು ಕೋಲಂಬಿವನ್ನು ವಿಶ್ವವಿದ್ಯಾಲಯವು`` ನಾಲೇಡ್ಜಡೇ'' ಎಂದು ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ಅಭಿಪ್ರಾಯ ಪಟ್ಟರು.

ಸಂವಿಧಾನದ ವಿವಿದ ಅಧ್ಯಾಯ ಮತ್ತು ಪರಿಚ್ಛೇದಗಳಲ್ಲಿ ಯಾವ  ಯಾವ ವಿಚಾರಗಳಿವೆ ಎಂಬುದನ್ನು ವಿಸ್ಕೃತವಾಗಿ ಚಚರ್ಿಸಿದರು.ಅಧ್ಯಕ್ಷಿಯ ನುಡಿಗಳನ್ನಾಡಿದ ಕುಲಪತಿಗಳಾದ ಪ್ರೊ.ಎಂ.ರಾಮಚಂದ್ರೆಗೌಡಅವರು ಸಂವಿಧಾನ ನಮ್ಮಎಲ್ಲಾ ಶಕ್ತಿಗಳ ಮೂಲವೆಂದುಅಭಿಪ್ರಾಯ ಪಟ್ಟರು.ಜೊತೆಗೆಜಗತ್ತಿನ ಅನೇಕ ದೇಶಗಳು ನಮ್ಮ ಸಂವಿಧಾನದಲ್ಲಿರುವ ಅನೇಕ ವಿಚಾರಗಳನ್ನು ಅಳವಡಿಸಿಕೊಂಡಿವೆ. ಇದು ಭಾರತೀಯ ಸಂವಿಧಾನದ ಶಕ್ತಿ ಎಂದರು.

     ಡಾ. ಬಿ. ಆರ್.ಅಂಬೇಡ್ಕರ್ ಅಧ್ಯಯನ ಪೀಠದ ನಿದರ್ೇಶಕರಾದ ಪ್ರೊಚಂದ್ರಕಾಂತ ವಾಘಮಾರೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕುಲಸಚಿವರಾದ ಪ್ರೊ.ಬಸವರಾಜ ಪದ್ಮಶಾಲಿ ಅವರು ವೇದಿಕೆಯಲ್ಲಿ ಹಾಜರಿದ್ದರು. ವಿವಿಧ ವಿಭಾಗದ ಅಧ್ಯಕ್ಷರು, ಮುಖ್ಯಸ್ಥರು, ಪ್ರಾಧ್ಯಾಪಕರು ವಿದ್ಯಾಥರ್ಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನುಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಪೀಠದ ಸಂಯೋಜಕರಾದ ಡಾ.ಗಜಾನನ ನಾಯ್ಕಕಾರ್ಯಕ್ರಮ ನಿರೂಪಿಸಿ ವಂದಿಸಿದರು.