ಸುಧಾಕರ ದೈವಜ್ಞ
ಶಿಗ್ಗಾವಿ 24: ಕೋರೋನಾ ಸೋಂಕು ಹರಡುವುದನ್ನು ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿಯವರು ಲಾಕ್ಡೌನ್ ಘೊಷಣೆ ಮಾಡಿದಾಗಿನಿಂದ ಕ್ಷೌರಿಕ ವೃತ್ತಿ ಮಾಡುವ ಹಡಪದ ಸಮುದಾಯ ತೀರ್ವ ಸಂಕಷ್ಟ ಎದುರಿಸುತ್ತಿದೆ.
ತಾಲೂಕಿನ ಸುಮಾರು 300 ಕ್ಕೂ ಹೆಚ್ಚು ಕುಟುಂಬಗಳು ಕ್ಷೌರಿಕ ವೃತ್ತಿಯನ್ನು ನಂಬಿ ಕುಟುಂಬವನ್ನ ಮುನ್ನೆಡೆಸುತ್ತಿವೆ ಆದರೆ ಈಗ ಅವರ ವೃತ್ತಿಯನ್ನು ನಿಲ್ಲಿಸಿದ್ದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ, ಪಟ್ಟಣದಲ್ಲಿಯ ಸಲೂನ್ಗಳು ಬಂದ್ ಆದ ಕಾರಣ ಗ್ರಾಮೀಣ ಭಾಗದ ಜನತೆಯನ್ನು ಅವಲಂಬಿಸಿದ್ದರು ಆದರೆ ಈಗ ಈ ವೈರಸ್ನಿಂದ ಕೆಲ ಕಡೆಗಳಲ್ಲಿ ಭಯದ ವಾತಾವರಣ ಸೃಷ್ಟಿಯಾದ ಕಾರಣ ಗ್ರಾಮೀಣ ಪ್ರದೇಶಗಳಲ್ಲಿಯೂ ಸಹಿತ ಹಡಪದರು (ಕ್ಷೌರಿಕರು) ವೃತ್ತಿಯನ್ನು ಮಾಡುತ್ತಿಲ್ಲ ಆದ್ದರಿಂದ ದಿನನಿತ್ಯ ವೃತ್ತಿಯನ್ನೇ ಮಾಡಿ ಜೀವನ ಸಾಗಿಸುವವರಿಗೆ ನಿರ್ವಹಣೆ ಕಷ್ಟವಾಗಿದೆ, ಸುಮಾರು 25 ದಿನಗಳಿಂದ ವೃತ್ತಿಯನ್ನ ಮಾಡುತ್ತಿಲ್ಲ ದಿನಂಪ್ರತಿ ಬಂದ ಆದಾಯವನ್ನು ಜೀವನೋಪಾಯಕ್ಕೆ ಬಳಸಿಕೊಳ್ಳುತ್ತಿದ್ದವರ ಬದುಕಿಗೆ ಈಗ ಗರಬಡದಂತಾಗಿದೆ ಜೊತೆಗೆ ಸರಕಾರದ ಕಟ್ಟಾಜ್ಞೆಯಿಂದ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮೀಣ ಭಾಗದಲ್ಲಿಯ ಒಟ್ಟು 100 ಕ್ಕೂ ಹೆಚ್ಚು ಸಲೂನ್ಗಳು ಬಂದ್ ಆಗಿದ್ದರಿಂದ ನೂರಾರು ಕುಟುಂಬಗಳು ಆಥರ್ಿಕ ಮುಗ್ಗಟ್ಟನ್ನು ಅನುಭವಿಸುವಂತಾಗಿವೆ, ಕೌಟುಂಬಿಕ ನಿರ್ವಹಣೆ ಮಾಡಲು ಪ್ರಯಾಸ ಪಡುವಂತಾಗಿದೆ, ಮಹಾಮಾರಿ ಕೋರೋನಾ ಹರಡುವಿಕೆಯ ಭೀತಿಯಿಂದ ಸಲೂನ್ಗಳನ್ನ ತೆರೆಯಲು ಅವಕಾಶ ಮಾಡಿಕೊಟ್ಟಿಲ್ಲ, ಸರಕಾರ ಮತ್ತು ತಾಲೂಕಾಡಳಿತದ ಉದ್ದೇಶ ಒಳ್ಳೆಯದೇ ಆದರೆ ವಲಂಬಿತ ಕುಟುಂಬದ ಸಹಾಯ ಸಹಕಾರ ಜೊತೆಗೆ ಸರಕಾರದ ನೆರವು ಮಾತ್ರ ಇಲ್ಲವಾಗಿದೆ, ಈ ವೃತ್ತಿ ಬಿಟ್ಟು ಬೇರೆ ವೃತ್ತಿ ಗೊತ್ತಿರದ ಎಷ್ಟೋ ಜನರ ಕುಟುಂಬ ಬೀದಿಗೆ ಬರುವಂತಾಗಿದೆ, ಸಾಲಸೂಲ ಮಾಡಿ ಸಲೂನ್ ಮಾಡಿ ಹಡಪದ (ಕ್ಷೌರಿಕ) ಗೆ ಈ ಲಾಕ್ಡೌನ್ ಘೊಷಣೆಯಿಂದ ಬದುಕು ದುಸ್ತರವಾಗಿದೆ.
ಬೇಸಿಗೆಯಲ್ಲಿ ಸಮಯಕ್ಕೆ ಸರಿಯಾಗಿ ಕಟಿಂಗ್, ಸೇವಿಂಗ್ ಮಾಡಿಸಿಕೊಂಡು ಬಿಸಿಲಿನ ಸೆಕೆಯಿಂದ ತಪ್ಪಿಸಿಕೊಳ್ಳಲು ಜನತೆಗೆ ಅಗತ್ಯತೆ ಜನರದ್ದಾದರೆ ಕೋರೋನಾದಿಂದ ಅಂಗಡಿಗಳನ್ನು ಬಂದ್ ಮಾಡಿದ್ದರಿಂದ ಆಥರ್ಿಕ ಮುಗ್ಗಟ್ಟು ಸುಧಾರಿಸಿಕೊಳ್ಳಲು ಹಡಪದ (ಕ್ಷೌರಿಕ)ರು ಅನಿವಾರ್ಯವಾಗಿ ಜನರ ಬೇಡಿಕೆಯಂತೆ ಅವರ ಮನೆ ಮನೆಗೆ ಹೋಗಿ ಕ್ಷೌರ ಮಾಡುವ ದೃಶ್ಯ ಈಗ ಸಾಮಾನ್ಯವಾಗಿದೆ, ಹಳ್ಳಿ ಮತ್ತು ಪಟ್ಟಣಗಳಲ್ಲಿ ಹಡಪದ ಅಪ್ಪಣ್ಣ ಸಮಾಜ ಬಾಂಧವರು ಕ್ಷೌರಿಕ ವೃತಿ ಮಾಡಿಕೊಂಡು ಬಂದಿದ್ದಾರೆ ಇದರಿಂದಲೇ ಜೀವನ ಸಾಗಿಸುತ್ತಾರೆ ಈಗ ಮಾತ್ರ ಆಥರ್ಿಕ ಸಂಕಷ್ಟ ಸರಿದೋಗಿಸುವುದು ಬಹಳ ಕಷ್ಟವಾಗಿದೆ ಈ ಲಾಕ್ಡೌನ್ ಮುಂದುವರೆಸುವ ಸಾದ್ಯತೆಗಳು ಹೆಚ್ಚಿದ್ದು ಹಡಪದ ಸಮಾಜದ ಜನರು ಇನ್ನಷ್ಟು ಸಂಕಷ್ಟಕ್ಕೆ ಒಳಗಾಗಬಹುದು ಕೂಡಲೇ ಸರಕಾರ ಹಡಪದರ (ಕ್ಷೌರಿಕ)ರ ಬದುಕಿನ ಬಂಡಿ ಸಾಗಲು ಅಗತ್ಯ ಸೌಲಭ್ಯ ಪೂರೈಸಲೇಬೆಕೆಂದು ಅಗ್ರಹಿಸುತ್ತಾರೆ ಹಡಪದ ಅಪ್ಪಣ್ಣ ಸಮಾಜ ಶಿಗ್ಗಾವಿ ತಾಲೂಕಾ ಪ್ರಧಾನ ಕಾರ್ಯದಶರ್ಿ ಮಲ್ಲಿಕಾಜರ್ುನ ಹಡಪದ.