ಬಂಜಾರ ಜನಾಂಗವು ವಿಶಿಷ್ಟ, ವೈವಿಧ್ಯ ಸಂಸ್ಕೃತಿಯ ಪ್ರತೀಕ- ಕಠಾರಿನಾಯ್ಕ
ಹೂವಿನಹಡಗಲಿ 17: ಲಿಪಿ ಇಲ್ಲದ ಭಾಷೆಯ, ವಿಶಿಷ್ಟ ಉಡುಗೆ, ತೊಡುಗೆಯ, ಹಾಡು ನೃತ್ಯಗಳಲ್ಲಿ ಅನನ್ಯತೆಯನ್ನು ಹೊಂದಿರುವ ಬಂಜಾರ ಜನಾಂಗವು ವಿಶಿಷ್ಟ, ವೈವಿಧ್ಯ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ದಂತ ವೈದ್ಯ ಡಾ.ಎಲ್.ಪಿ. ಕಠಾರಿನಾಯ್ಕ ಅಭಿಪ್ರಾಯಪಟ್ಟರು. ಕನ್ನಡ ಸಾಹಿತ್ಯ ಪರಿಷತ್ತು ಇಟ್ಟಿಗಿ ಹೋಬಳಿ ಘಟಕ, ಹೂವಿನಹಡಗಲಿ ತಾಲೂಕು ಘಟಕ ಇಟ್ಟಿಗಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಉಮ್ಲಿಬಾಯಿ ಥಾವರ್ಯ ನಾಯ್ಕ ಸ್ಮಾರಕದತ್ತಿ, ಕೌಸಲ್ಯಬಾಯಿ ದೇವೇಂದ್ರನಾಯ್ಕ ಪ್ರದೀಪ,ಪಲ್ಲವಿ ದತ್ತಿ, ಲಕ್ಷ್ಮಿಬಾಯಿ ಪುರುಷೋತ್ತಮರೆಡ್ಡಿ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಂಜಾರ ಸಂಸ್ಕೃತಿ, ’ಬಂಜಾರ ಜಾನಪದ ಸಾಹಿತ್ಯದ ಸಿರಿ’ ವಿಷಯ ಕುರಿತು ಮಾತನಾಡಿದರು. ಸರಕಾರಿ ಸೌಲಭ್ಯಗಳ ನೆರವಿನಿಂದ ಶಿಕ್ಷಣ,ಉದ್ಯೋಗ ಪಡೆದು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯವೆಂದರು. ಪ್ರಾರಂಭದಲ್ಲಿ ವಿಶ್ವಭಾರತಿ ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಅಂಗಡಿ ಕೊಟ್ರೇಶ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಸ್ಥೆಯ ಪ್ರಾಚಾರ್ಯ ಬಸವರಾಜ ಸೊಲಬಕ್ಕನವರ ಮಾತನಾಡಿದರು. ವಿದ್ಯಾರ್ಥಿಗಳಾದ ಟಿ.ಲಕ್ಷ್ಮಿ ,ಬಿ.ಕಾವ್ಯಶ್ರೀ, ಸಂಜನಾ ಕವನ ವಾಚಿಸಿದರು.ಇಟ್ಟಿಗಿ ಹೋಬಳಿ ಘಟಕದ ಅಧ್ಯಕ್ಷ ಜಿ.ಬಿ.ವಿನಯರಾಜ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಿ.ಭೀಮಾನಾಯ್ಕ ಮತ್ತು ನಿಂಗರಾಜ್ ಉಪಸ್ಥಿತರಿದ್ದರು. ಉಪನ್ಯಾಸ ಡಾ.ಕಠಾರಿನಾಯ್ಕ ನೀಡಿದರು.ಅಶ್ವಿನಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕ ಹರೀಶ್ನಾಯ್ಕ ಸ್ವಾಗತಿಸಿದರು.ಕಸಾಪ ಅಧ್ಯಕ್ಷ ಟಿ.ವೀರೇಂದ್ರ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಉಮೇಶ್ ವಂದಿಸಿದರು. ಕನ್ನಡ ಶಿಕ್ಷಕ ಚಂದ್ರನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.