ಆಯೋಧ್ಯೆ ಕುರಿತ ತೀರ್ಪು, ಸುನ್ನಿ ವಕ್ಫ್ ಮಂಡಳಿ ನಿರ್ಧಾರಕ್ಕೆ ಬಿಜೆಪಿ ಸ್ವಾಗತ

sriram

ನವದೆಹಲಿ, ನ 26: ಆಯೋಧ್ಯೆ ವಿವಾದ ಕುರಿತ ಸುಪ್ರೀಂ ಕೋರ್ಟ್ ತೀರ್ಪನ್ನು ಗೌರವಿಸಿ,  ಆದರ  ವಿರುದ್ದ  ಮರು ಪರಿಶೀಲನಾ ಆರ್ಜಿ ಸಲ್ಲಿಸದಿರಲು  ಸುನ್ನಿ ವಕ್ಫ್ ಮಂಡಳಿಯ ಕೈಗೊಂಡಿರುವ  ನಿರ್ಧಾರವನ್ನು  ಬಿಜೆಪಿ  ಸ್ವಾಗತಿಸಿದೆ. 

 ಮುಸ್ಲಿಂ ಸಮಾಜದ ಭಾವನೆಗಳನ್ನು ಅರ್ಥಮಾಡಿಕೊಂಡು,  ಎರಡು ಸಮುದಾಯಗಳ ನಡುವೆ  ವೈಮಮಸ್ಸು, ಭಿನ್ನಾಭಿಪ್ರಾಯ ಸೃಷ್ಟಿಸುವಂತಹ  ಯಾವುದೇ  ಕ್ರಮ ಕೈಗೊಳ್ಳದಂತೆ  ಅಖಿಲ ಭಾರತ  ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಗೆ ಮತ್ತೆ ಬಿಜೆಪಿ ಮನವಿ ಮಾಡಿದೆ.

ಆಯೋಧ್ಯೆ ರಾಮಜನ್ಮ ಭೂಮಿ  ವಿವಾದ  ಕುರಿತು  ಸುಪ್ರೀಂ ಕೋರ್ಟ್  ತೀರ್ಪು  ಪ್ರಕಟಿಸುವ ಮುನ್ನ  ದೇಶದ ಎಲ್ಲ ಮುಸ್ಲಿಂ ಧರ್ಮಗುರುಗಳು ಹಾಗೂ ಹಿಂದೂ ಸಂತರು   ನ್ಯಾಯಾಲಯ ಯಾವುದೇ ತೀರ್ಪು ಪ್ರಕಟಿಸಿದರೂ ಅದನ್ನು ಶಾಂತಿಯುತವಾಗಿ, ವಿನಮ್ರವಾಗಿ   ಸ್ವೀಕರಿಸುವುದಾಗಿ  ಹೇಳಿದ್ದರು  ಎಂದು  ಬಿಜೆಪಿ  ಹಿರಿಯ ವಕ್ತಾರ  ಸಯ್ಯದ್  ಶಹನವಾಜ್ ಹುಸೇನ್   ಮಂಗಳವಾರ ಹೇಳಿದ್ದಾರೆ.

ಅದರಂತೆ, ಸುಪ್ರೀಂ ಕೋರ್ಟ್  ತೀರ್ಪನ್ನು ಗೌರವಿಸಿ,   ಅದರ ವಿರುದ್ದ ಯಾವುದೇ  ಮರು ಪರಿಶೀಲನಾ ಆರ್ಜಿ ಸಲ್ಲಿಸದಿರಲು  ಬಾಬ್ರಿ ಮಸೀದಿ ಪ್ರತಿನಿಧಿ  ಅಕ್ಮಲ್ ಅನ್ಸಾರಿ ಹಾಗೂ ಸುನ್ನಿ  ವಕ್ಫ್  ಮಂಡಳಿ ನಿರ್ಧರಿಸಿದೆ ಎಂದು  ತಿಳಿಸಿದ್ದಾರೆ.

ಈ ಸಂಬಂಧ ಸುನ್ನಿ ವಕ್ಫ್  ಮಂಡಳಿಯ  ಕೈಗೊಂಡಿರುವ  ನಿರ್ಧಾರ  ಅತ್ಯಂತ ಮಹತ್ವದ್ದು,  ದೇಶಾದ್ಯಂತ ಮಂಡಳಿಯ ನಿರ್ಧಾರ ಪ್ರಶಂಸೆಗೆ ಒಳಗಾಗಿದೆ.      ಬಿಜೆಪಿಯೂ  ಈ ನಿರ್ಧಾರವನ್ನು ಸ್ವಾಗತಿಸುತ್ತದೆ ಎಂದು ತಿಳಿಸಿದರು. 

ಮುಸ್ಲಿಂ ಜನರ ಭಾವನೆ ಹಾಗೂ ದೇಶದ ಸಾಮಾನ್ಯ ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು  ಎರಡು ಸಮಮುದಾಯಗಳ ನಡುವೆ  ಭಿನ್ನಾಭಿಪ್ರಾಯ ಮೂಡುವಂತಹ  ಯಾವುದೇ ಕ್ರಮ ಕೈಗೊಳ್ಳದಂತೆ  ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ  ಹಾಗೂ ಅದರ ಪದಾಧಿಕಾರಿಗಳನ್ನು   ಮತ್ತೊಮ್ಮೆ ಮನವಿ ಮಾಡುವುದುದಾಗಿ ಹೇಳಿದರು.

ಸಮಾಜದಲ್ಲಿನ  ಸಮುದಾಯಗಳ ನಡುವೆ  ಸೌಹಾರ್ಧತೆ  ಹೆಚ್ಚಲು ನೆರವಾಗುವಂತೆ,   ದೇಶದ   ಹಿತದೃಷ್ಟಿಯಿಂದ  ಸುಪ್ರೀಂ ಕೋರ್ಟ್  ತೀರ್ಪನ್ನು  ಒಪ್ಪಿಕೊಳ್ಳಬೇಕು  ಎಂದು  ಅವರು ಮನವಿ ಮಾಡಿದ್ದಾರೆ.