ನಗರದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಮನವಿ
ರಾಣೇಬೆನ್ನೂರು 23 : ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ, ಬೆಳಗಾವಿ ರಾಣಿ ಚೆನ್ನಮ್ಮ ವಿದ್ಯಾಲಯ ಹಾವೇರಿ ವಿಶ್ವವಿದ್ಯಾಲಯಗಳಲ್ಲಿ ಯು,ಯು,ಸಿ,ಎಂ,ಎಸ್, ತಂತ್ರಾಂಶದಲ್ಲಿ ಅನೇಕ ಲೋಕ ದೋಷಗಳಿದ್ದು ಅದನ್ನು ಸರಿಪಡಿಸುವಂತೆ ಒತ್ತಾಯಿಸಿ, ಸೋಮವಾರ ನಗರದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಸಂಚಾಲಕ ಅಭಿಷೇಕ್ ದೊಡ್ಡಮನಿ ಅವರು, ಧಾರವಾಡ ಬೆಳಗಾವಿ ಹಾವೇರಿ ಸೇರಿ ರಾಜ್ಯದ ಇನ್ನಿತರೆ ಹಲವು ವಿಶ್ವವಿದ್ಯಾಲಯಗಳಲ್ಲಿ ತಂತ್ರಾಂಶಗಳಲ್ಲಿ ಬಹಳಷ್ಟು ದೋಷಗಳಿವೆ. ಇದರ ಪರಿಣಾಮ ವಿದ್ಯಾರ್ಥಿಗಳು ನಿತ್ಯವೂ ಪರದಾಡುವಂತಹ ಪರಿಸ್ಥಿತಿಗೆ ಬಂದಿದ್ದಾರೆ ಎಂದರು. ಈಗಾಗಲೇ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ವ್ಯಾಪ್ತಿಯ ಪದವಿ ಕಾಲೇಜುಗಳ ಪ್ರಥಮ, ತೃತಿಯ ಹಾಗೂ 5ನೇ ಸೆಮಿಸ್ಟರ್ ಪರೀಕ್ಷೆಗಳು ಜನವರಿ ತಿಂಗಳಲ್ಲಿ ನಡೆಯಲಿದ್ದು, ಪರೀಕ್ಷಾ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ತುಂಬುತ್ತಿದ್ದಾರೆ. ವಿದ್ಯಾರ್ಥಿಗಳ ಖಾತೆಯಿಂದ ಹಣ ಪಾವತಿಯಾಗುತ್ತಿದೆ. ಆದರೆ ಅರ್ಜಿ ಸಲ್ಲಿಕೆಯಾಗದೆ ನಿಮ್ಮ ಅರ್ಜಿ ಫೇಲ್ಡ್ ಎಂಬ ಸಂದೇಶ ಬರುತ್ತಿದ್ದು, ವಿದ್ಯಾರ್ಥಿಗಳು ತುಂಬಾ ಆತಂಕ ಪಡುವಂತಾಗಿದೆ ಎಂದರು. ಸಂಬಂಧಿಸಿದವರು, ತಂತ್ರಾಂಶದಲ್ಲಿನ ಸಮಸ್ಯೆಗಳನ್ನು ಪರೀಶೀಲಿಸಿ, ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡದೆ ಕೂಡಲೇ ಪರಿಹಾರ ಕಂಡು ಹಿಡಿದು ಆತಂಕ ದೂರ ಮಾಡಬೇಕಾದ ಅಗತ್ಯವಿದ್ದು, ಸರಿಪಡಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು. ಇಲ್ಲಿನ ಚರ್ಜ್ ರಸ್ತೆಯ, ಎಸ್ ಜೆ ಎಂ ವಿ ಮಹಿಳಾ ಕಾಲೇಜಿನಿಂದ ಹೊರಟ ಪ್ರತಿಭಟನಾ ರ್ಯಾಲಿಯು, ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಬಸ್ಟ್ಯಾಂಡ್ ಬಳಿಣ ಎಸ್ ಎಫ್ ಡಿ ಪ್ರಮುಖ ಅಭಿಲಾಶ್ ಬಾದಾಮಿ, ನಗರ ಕಾರ್ಯದರ್ಶಿ ಪವನಕುಮಾರ್ ಇಟಗಿ, ತಾಲೂಕು ಸಂಚಾಲಕ ವಿನಾಯಕ ತಾವರಗೊಂದಿ, ನಗರ ಸಹ ಕಾರ್ಯದರ್ಶಿ ಎಲ್ಲಮ್ಮ, ವಿದ್ಯಾರ್ಥಿನಿ ಪ್ರಮುಖ ಸವಿತಾ, ವೈಷ್ಣವಿ, ಬಸವರಾಜ್, ಆಯುಷಾ, ಭಾರತಿ, ಶ್ವೇತಾ, ಗಗನದೀಪ, ನಾಗರಾಜ್, ಭರತ್ ಕುಮಾರ ಸೇರಿದಂತೆ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಬಿವಿಪಿ, ಕಾರ್ಯಕರ್ತರು, ಮುಖಂಡರು ಪಾಲ್ಗೊಂಡಿದ್ದರು.